ಮುಂಬೈ: ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಬಂಧ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಬೆದರಿಕೆ ಇಮೇಲ್ ಸಂದೇಶ ರವಾನೆಯಾಗಿದೆ. ಈ ಬೆನ್ನಲ್ಲೇ ಎನ್ಐಎ ಅಲರ್ಟ್ ಆಗಿದ್ದು, ದೇಶದ ವಿವಿಧ ನಗರಗಳಲ್ಲಿ ಎಚ್ಚರಿಕೆ ನೀಡಿದ್ದು, ಭದ್ರತಾ ಬಿಗಿ ಬಂದೋಬಸ್ತ್ಗೆ ಸೂಚಿಸಿದೆ. ಇನ್ನು ಈ ಸಂದೇಶ ಕಳುಹಿಸಿದಾತ ತಾನು ತಾಲಿಬಾನ್ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದೆ. ಈ ಸಂಬಂಧ ಎನ್ಐಎ ಮುಂಬೈ ಪೊಲೀಸರಿಗೆ ತಿಳಿಸಿದೆ.
ತಾಲಿಬಾನ್ನಿಂದ ಸಂದೇಶ?: ತಾಲಿಬಾನ್ ನಾಯಕ ಹಕ್ಕಾನಿ ಆದೇಶದ ಮೇರೆಗೆ ಈ ಇಮೇಲ್ ಕಳುಹಿಸಲಾಗಿದೆ. ಕೆಲವು ದಿನಗಳ ಹಿಂದೆ ಮುಂಬೈ ಘಟನೆ 26/11 ಮಾದರಿ ಮತ್ತೊಂದು ದಾಳಿ ನಡೆಸುವ ಸಂಬಂಧ ಮುಂಬೈ ಪೊಲೀಸರು ಬೆದರಿಕೆ ಕರೆ ಸ್ವೀಕರಿಸಿದ್ದರು. ಇದೇ ರೀತಿಯ ಮತ್ತೊಂದು ಬೆದರಿಕೆ ಕರೆ ಬಂದಿದ್ದು, ಈ ಬಾರಿ ಹಾಜಿ ಆಲಿ ದರ್ಗಾದ ಮೇಲೆ ದಾಳಿ ನಡೆಸುವುದಾಗಿ ಅವರು ತಿಳಿಸಿದ್ದರು. ಕೆಲವು ದಿನಗಳ ಹಿಂದೆ ಮುಂಬೈ ದಾಳಿ ಬೆದರಿಕೆ ಬಂದಿತ್ತು. ಈಗ ಮತ್ತೊಂದು ಬೆದರಿಕೆ ಕರೆಯನ್ನು ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ ಪಡೆದಿದೆ. ಈ ಕರೆಗಳನ್ನು ಉಲ್ಲಾಸ್ನಗರದಿಂದ ಬಂದಿದ್ದು, ಈ ಕರೆಗಳ ಪತ್ತೆಗೆ ಮುಂಬೈ ಪೊಲೀಸರು ಮುಂದಾಗಿದ್ದಾರೆ.
ಹಾಜಿ ಆಲಿ ದರ್ಗಾಕ್ಕೆ ಬಿಗಿ ಭದ್ರತೆ: ಕೆಲವು ದಿನಗಳ ಹಿಂದೆ ಮುಂಬೈ ದಾಳಿ ಮಾದರಿ ಮತ್ತೊಂದು ದಾಳಿ ನಡೆಸುವ ಬೆದರಿಕೆ ಕರೆ ಬಂದ ಬೆನ್ನಲ್ಲೇ ಅಂಬಾನಿ ಕೊಲ್ಲುವ ಬೆದರಿಕೆಯು ಪಡೆಯಿತು. ಇದೀಗ ಹಾಜಿಆಲಿ ದರ್ಗಾದ ಮೇಲೆ ದಾಳಿ ನಡೆಸುವ ಬೆದರಿಕೆ ಕರೆ ಬಂದಿದೆ. ಈ ಕರೆ ಬಂದಾಕ್ಷಣ ಪೊಲೀಸರು ಮತ್ತು ಬಿಡಿಡಿಎಸ್ ಅಲರ್ಟ್ ಆಗಿದ್ದಾರೆ. ಕಂಟ್ರೋಲ್ ರೂಂನಿಂದ ಆದೇಶ ಬಂದ ತಕ್ಷಣ ಕಾನ್ವೆಂಟ್ ವ್ಯಾನ್ ಕೂಡ ಕರೆಸಲಾಯಿತು. ಹಾಜಿ ಅಲಿ ದರ್ಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು ಬಾರಿ ಈ ಫೋನ್ ಕರೆ ಬಂದಿದ್ದು, ಇದರ ಪರಿಶೀಲನೆಗೆ ಮುಂದೆ ಆದಾಗ ಈ ಫೋನ್ ಸ್ವಿಚ್ಡ್ ಆಫ್ ಆಗಿದೆ.
ಈ ವರ್ಷದ ಆರಂಭದಲ್ಲಿ ಕೂಡ ಮುಂಬೈನಲ್ಲಿರು ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ಗೆ ಕೂಡ ಬೆದರಿಕೆ ಕರೆ ಬಂದಿತ್ತು. ಅಪರಿಚಿತ ಬೆದರಿಕೆ ಕರೆಯಿಂದ ಶಾಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮುಂಬೈ ಪೊಲೀಸರು ಮಾಹಿತಿ ಪ್ರಕಾರ, ಶಾಲಾ ಲ್ಯಾಂಡ್ಲೈನ್ಗೆ ಸಂಜೆ 4.30ರ ಸುಮಾರಿಗೆ ಕರೆ ಬಂದಿತ್ತು. ಇದೇ ರೀತಿಯ ಕರೆಯನ್ನು ಕಳೆದ ಅಕ್ಟೋಬರ್ನಲ್ಲಿ ಕೂಡ ಮುಂಬೈ ನಗರ ಪೊಲೀಸರು ಪಡೆದಿದ್ದರು. ನಗರದ ಏಳು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವ ಕುರಿತು ಅನುಮಾನಾಸ್ಪದ ಕರೆಯನ್ನು ಪಡೆದ ಬಳಿಕ ಎಲ್ಲೆಡೆ ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಪತ್ತೆಯಾಗಿತ್ತು.
ಈ ಬಾರಿಯೂ ಎನ್‌ಐಎಗೆ ಬೆದರಿಕೆ ಮೇಲ್ ಬಂದ ನಂತರ, ಮುಂಬೈ ಪೊಲೀಸರು ನಾಗರಿಕರಲ್ಲಿ ಯಾವುದೇ ಅಪರಿಚಿತ ಅನುಮಾನಾಸ್ಪದ ವಸ್ತು ಕಂಡುಬಂದರೆ, ಅದರ ಬಗ್ಗೆ ಮುಂಬೈ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅದಾನಿ ಕಂಪನಿ ವಿಚಾರ: ಇಂದೂ ಸಂಸತ್ನಲ್ಲಿ ಸದ್ದು ಮಾಡುವ ಸಾಧ್ಯತೆ