ETV Bharat / bharat

ದುರ್ಗಾ ದೌಡ್ ಸಾಗುವ ಮಾರ್ಗದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಿಸುವ ಬರಹ: ಹಿಂದೂ ಕಾರ್ಯಕರ್ತರ ಪ್ರತಿಭಟನೆ

ದುರ್ಗಾ ದೌಡ್ ಸಾಗುವ ಮಾರ್ಗದಲ್ಲಿ ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ವೈಭವೀಕರಿಸುವ ಬರಹಗಳನ್ನು ಬರೆದಿರುವ ಘಟನೆ ಕೊಲ್ಲಾಪುರದಲ್ಲಿ ನಡೆದಿದೆ.

ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಹಿಂದೂ ಕಾರ್ಯಕರ್ತರ ಪ್ರತಿಭಟನೆ
author img

By ETV Bharat Karnataka Team

Published : Oct 16, 2023, 8:01 PM IST

ಕೊಲ್ಹಾಪುರ: ನಗರದ ಕಸ್ಬಾ ಬಾವ್ಡಾ ಪ್ರದೇಶದ ದುರ್ಗಾ ದೌಡ್ (ಓಟ) ಸಾಗುವ ಮಾರ್ಗದಲ್ಲಿ ಕೆಲವು ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ವೈಭವೀಕರಿಸುವ ಆಕ್ಷೇಪಾರ್ಹ ವಾಕ್ಯಗಳನ್ನು ಬರೆದಿದ್ದು ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆಯ ಗಂಭೀರತೆ ಅರಿತ ಶಾಹುಪುರಿ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದರು.

ನವರಾತ್ರಿ ಆಚರಣೆಯ 2ನೇ ದಿನವಾದ ಇಂದು ಕೊಲ್ಲಾಪುರದ ಬಾವ್ಡಾ ಪ್ರದೇಶದಲ್ಲಿ ದುರ್ಗಾ ದೌಡ್​ ಸಾಗುತಿತ್ತು. ಈ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ವೈಭವೀಕರಿಸುವ ಆಕ್ಷೇಪಾರ್ಹ ಬರವಣಿಗೆಗಳನ್ನು ಗೋಡೆಗಳಲ್ಲಿ ಬರೆಯಲಾಗಿತ್ತು. ಇದರಿಂದ ಕೆರಳಿದ ದುರ್ಗಾ ದೌಡ್‌ನಲ್ಲಿ ಭಾಗವಹಿಸಿದ್ದ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಕೊಲ್ಹಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಆಕ್ಷೇಪಾರ್ಹ ಬರಹಗಳನ್ನು ಅಳಿಸಿ ಹಾಕಿದರುರೆ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತದೆ. ಅಲ್ಲಿಯವರೆಗೂ ಶಾಂತವಾಗಿರುವಂತೆ ನೆರೆದಿದ್ದವರಲ್ಲಿ ಪೊಲೀಸರು ಮನವಿ ಮಾಡಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಅಜಯ್ ಸಿಂದ್ಕರ್ ಮಾತನಾಡಿ, "ಇಂದು ಬೆಳಿಗ್ಗೆ ಕಸ್ಬಾ ಬಾವ್ಡಾದ ಛತ್ರಪತಿ ರಾಜಾರಾಮ್ ಚೌಕ್‌ನಿಂದ ಶುಗರ್ ಮಿಲ್ ಕಾರ್ನರ್ ಮೂಲಕ ದುರ್ಗಾ ದೌಡ್​ ಹಾದು ಹೋಗುತ್ತಿತ್ತು. ಅದೇ ರಸ್ತೆಯಲ್ಲಿ ಕೆಲವು ಕಿಡಿಗೇಡಿಗಳು ಟಿಪ್ಪುಸುಲ್ತಾನ್ ವೈಭವೀಕರಿಸಿ ಬರಹಗಳನ್ನು ಬರೆದಿದ್ದಾರೆ. ಈ ಸುದ್ಧಿ ಕಸ್ಬಾ ಬಾವಾಡದಲ್ಲಿ ಹಬ್ಬಿದ್ದು ಹಲವಾರು ಹಿಂದೂ ಕಾರ್ಯಕರ್ತರು ಬಾವುಡಾದ ಕೇಸರಿ ಚೌಕ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಇದನ್ನು ಗಮನಿಸಿದ ಕೆಲವರು ಕೂಡಲೇ ಶಾಹುಪುರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬರೆದಿದ್ದ ಪಠ್ಯವನ್ನು ಅಳಿಸಿ ಹಾಕಿದ್ದಾರೆ" ಎಂದರು.

"ಕೃತ್ಯ ಎಸಗಿದವರನ್ನು ತಕ್ಷಣ ಬಂಧನಕ್ಕೆ ಒತ್ತಾಯಿಸಿದ್ದಾರೆ. ಅದರಂತೆ ಆರೋಪಿತರನ್ನು ಕೂಡಲೇ ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಗುಂಪು ಶಾಂತವಾಯಿತು" ಎಂದು ಹೇಳಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಆ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಬಾವಾಡದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಪ್ರತಿವರ್ಷ ದುರ್ಗಾ ದೌಡ್ ಆಯೋಜಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುತ್ತಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಪ್ಯಾಸೆಂಜರ್ ರೈಲಿನ 5 ಬೋಗಿಗಳಿಗೆ ಬೆಂಕಿ, ಸುಟ್ಟು ಕರಕಲು- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.