ETV Bharat / bharat

ಗೂಗಲ್​ ಮ್ಯಾಪ್​ನಲ್ಲಿ ದೇಗುಲದ ಹೆಸರನ್ನು ಮಸೀದಿಯೆಂದು ತಿರುಚಿದ ಆರೋಪ, ಓರ್ವನ ಬಂಧನ

author img

By

Published : Jul 8, 2022, 1:55 PM IST

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಿರ್ದಿಷ್ಟ ಧರ್ಮದ ಕೆಲ ಯುವಕರು ದೇವಸ್ಥಾನದ ಹೆಸರನ್ನು ಗೂಗಲ್ ಮ್ಯಾಪ್‌ನಲ್ಲಿ ಮಸೀದಿ ಎಂದು ತಿರುಚಿರುವ ಸಂಗತಿ ಬೆಳಕಿಗೆ ಬಂದಿದೆ.

Temple name changed to mosque in Ratlam  Temple name changed to mosque on Google Maps in Ratlam  Madhya Pradesh Google Maps  Tempering In Google Maps  ಮಧ್ಯಪ್ರದೇಶದಲ್ಲಿ ಗೂಗಲ್​ ಮ್ಯಾಪ್​ನಲ್ಲಿ ದೇವಸ್ಥಾನದ ಹೆಸರನ್ನು ಮಸೀದಿಯೆಂದು ತಿರುಚಿದ ಯುವಕರು  ಮಧ್ಯಪ್ರದೇಶದಲ್ಲಿ ದೇವಸ್ಥಾನದ ಹೆಸರು ತಿರುಚಿದ ಯುವಕರು  ರತ್ಲಾಮ್​ ಜಿಲ್ಲೆಯ ಭಾದ್ವಾಸಾದಲ್ಲಿ ಉದ್ವಿಗ್ನ ವಾತಾವರಣ  ಮಧ್ಯಪ್ರದೇಶ ಗೂಗಲ್​ ಮ್ಯಾಪ್ ಸುದ್ದಿ
ಗ್ರಾಮದಲ್ಲಿ ಉದ್ವಿಗ್ನ

ರತ್ಲಾಮ್(ಮಧ್ಯಪ್ರದೇಶ): ಜಿಲ್ಲೆಯ ಭಾದ್ವಾಸಾ ಗ್ರಾಮದಲ್ಲಿರುವ ಅಂಬೆಮಾತಾ ದೇವಸ್ಥಾನದ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಕಹಕಶನ್ ಮಸೀದಿ ಭಾದ್ವಾಸಾ ಎಂದು ತೋರಿಸಲಾಗಿದೆ. ದೇವಸ್ಥಾನದ ಬದಲಾಗಿ ಮಸೀದಿಯನ್ನು ತೋರಿಸುವ ಗೂಗಲ್ ಮ್ಯಾಪ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.

ಗೂಗಲ್ ಮ್ಯಾಪ್‌ ಸೌಲಭ್ಯ ದುರ್ಬಳಕೆ: ಗೂಗಲ್ ಮ್ಯಾಪ್‌ನಲ್ಲಿ ಸ್ಥಳವನ್ನು ಹೆಸರಿಸಲು ಒಂದು ಆಯ್ಕೆ ಇದೆ. ಇದನ್ನು ಬಳಸಿಕೊಂಡು ಜನರು ಸಾಮಾನ್ಯವಾಗಿ ತಮ್ಮ ವ್ಯಾಪಾರ ಸ್ಥಾಪನೆಯ ಹೆಸರು, ಗ್ರಾಮದ ಹೆಸರು ಮತ್ತು ಸ್ಥಳಗಳನ್ನು ನಮೂದಿಸುತ್ತಾರೆ. ಆದರೆ ರತ್ಲಾಮ್‌ನ ನಮ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾದ್ವಾಸ ಗ್ರಾಮದ ಧಾರ್ಮಿಕ ಸ್ಥಳದ ಹೆಸರನ್ನು ಬದಲಾಯಿಸಲು ಈ ನಕ್ಷೆಯನ್ನು ಬಳಸಲಾಗಿದೆ. ಈ ಬದಲಾವಣೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ನಮ್ಲಿ ಠಾಣೆಗೆ ಬಂದು ಆರೋಪಿ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಗೂಗಲ್ ಮ್ಯಾಪ್​ನಲ್ಲಿ ಬಪ್ಪನಾಡು ಕ್ಷೇತ್ರದ ಹೆಸರು ಬದಲಾವಣೆ... ದೂರು ಬಳಿಕ ಸರಿಯಾದ ಹೆಸರು

ಆರೋಪಿ ಬಂಧನ: ರತ್ಲಾಮ್ ಎಎಸ್ಪಿ ಸುನೀಲ್ ಪಾಟಿದಾರ್ ಮಾತನಾಡಿ, "ಒಂದು ನಿರ್ದಿಷ್ಟ ಧರ್ಮದ ಧಾರ್ಮಿಕ ಸ್ಥಳವನ್ನು ಬೇರೆ ಧರ್ಮದ ವ್ಯಕ್ತಿಗಳು ಗೂಗಲ್ ಮ್ಯಾಪ್‌ನಲ್ಲಿ ವಿಭಿನ್ನವಾಗಿ ಬದಲಾಯಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದರು. ಈ ವಿಷಯವನ್ನು ತನಿಖೆ ಮಾಡಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.