ETV Bharat / bharat

ತೆಲಂಗಾಣದಲ್ಲಿ ದಿಢೀರ್​ ತಾಪಮಾನ ಏರಿಕೆ.. ಈ ಬಾರಿ ಕಡು ಬೇಸಿಗೆ ಸಾಧ್ಯತೆ

ಕಳೆದ ವಾರದವರೆಗೆ ಹೈದರಾಬಾದ್​ನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇತ್ತು. ಆದರೆ ಭಾನುವಾರ ಇದ್ದಕ್ಕಿದ್ದಂತೆ 34.4 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಈ ವರ್ಷ ರಾಜ್ಯದಲ್ಲಿ ತಾಪಮಾನದ ಮಟ್ಟ ಗರಿಷ್ಠ ಪ್ರಮಾಣ ತಲುಪಿ ಕಡು ಬೇಸಿಗೆ ಇರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗ್ತಿದೆ.

author img

By

Published : Feb 21, 2022, 3:16 PM IST

ತೆಲಂಗಾಣದಲ್ಲಿ ದಿಢೀರನೆ ತಾಪಮಾನ ಏರಿಕೆ
ತೆಲಂಗಾಣದಲ್ಲಿ ದಿಢೀರನೆ ತಾಪಮಾನ ಏರಿಕೆ

ಹೈದರಾಬಾದ್​: ತೆಲಂಗಾಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದ್ದು, ಬೇಸಿಗೆ ಆರಂಭವನ್ನು ಸೂಚಿಸುತ್ತಿದೆ. ಮೊನ್ನೆಯವರೆಗೂ ತೀವ್ರವಾಗಿ ಚಳಿಯಿದ್ದ ರಾಜ್ಯದಲ್ಲಿ ಬಿಸಿ ವಾತಾವರಣ ನಿರ್ಮಾಣವಾಗಿದೆ.

ಮಾರ್ಚ್ 1 ರಂದು ತೆಲಂಗಾಣ ರಾಜ್ಯದಲ್ಲಿ ಬೇಸಿಗೆ ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವಾರದವರೆಗೆ ಹೈದರಾಬಾದ್​ನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇತ್ತು. ಆದರೆ ಭಾನುವಾರ ಇದ್ದಕ್ಕಿದ್ದಂತೆ 34.4 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಖಮ್ಮಂ ಮತ್ತು ನಿರ್ಮಲ್‌ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ: ಏರ್​ಥಿಂಗ್ಸ್​ ಮಾಸ್ಟರ್ಸ್​ ಚೆಸ್​ : ವಿಶ್ವ ನಂ.1 ಮ್ಯಾಗ್ನಸ್​ ಕಾರ್ಲಸನ್​ರನ್ನು ಮಣಿಸಿದ ಭಾರತದ 16ರ ಪೋರ ಪ್ರಗ್ನಾನಂದ್​

ತೆಲಂಗಾಣ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿ (ಟಿಎಸ್‌ಡಿಪಿಎಸ್) ಮಾಹಿತಿಯ ಪ್ರಕಾರ, ಹೈದರಾಬಾದ್ ನಗರದ ಬಹುತೇಕ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಹಗಲಿನ ತಾಪಮಾನವು ಕನಿಷ್ಠ ಎರಡರಿಂದ ಮೂರು ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವರ್ಷ ರಾಜ್ಯದಲ್ಲಿ ತಾಪಮಾನದ ಮಟ್ಟ ಗರಿಷ್ಠ ಪ್ರಮಾಣ ತಲುಪಿ ಕಡು ಬೇಸಿಗೆ ಇರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.