ETV Bharat / bharat

'ತೆಲುಗು ಜನರು ರಾಮೋಜಿ ರಾವ್‌ ಜೊತೆಗಿದ್ದಾರೆ': ಹಗರಣ ಬಹಿರಂಗಗೊಳಿಸಿದ್ದಕ್ಕಾಗಿ ಈಟಿವಿ ನೆಟ್​​ವರ್ಕ್​ಗೆ ಸಿಎಂ ಜಗನ್ ಕಿರುಕುಳ- ಚಂದ್ರಬಾಬು ನಾಯ್ಡು

ಕಳೆದ 60 ವರ್ಷಗಳಿಂದ ಜನರ ಸೇವೆ ಮಾಡುತ್ತಿರುವ ಮಾರ್ಗದರ್ಶಿಯಂಥ ಸಂಸ್ಥೆಗೆ ಸಿಎಂ ಜಗನ್ ರೆಡ್ಡಿ ದ್ವೇಷದ ಕಾರಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

'Telugu People With Ramoji Rao
'Telugu People With Ramoji Rao
author img

By

Published : Aug 21, 2023, 5:20 PM IST

ಅಮರಾವತಿ: ಆಂಧ್ರ ಪ್ರದೇಶದ ವೈಎಸ್ಆರ್​​ಸಿಪಿ ಸರ್ಕಾರದ ಹಗರಣಗಳು ಮತ್ತು ಕೆಟ್ಟ ಕಾರ್ಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಈಟಿವಿ ನೆಟ್​ವರ್ಕ್​ ಮಾಲೀಕ ರಾಮೋಜಿ ರಾವ್ ಅವರಿಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಹಾಲಿ ಮುಖ್ಯಮಂತ್ರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಇದೇ ವೇಳೆ, ತೆಲುಗು ನಾಡಿನ ಜನರು ರಾಮೋಜಿ ರಾವ್ ಜೊತೆಗಿದ್ದಾರೆ ಎಂದು ಅವರು ತಿಳಿಸಿದರು.

  • Continuing his tendency to dismantle institutions, YS Jagan is now trying to raze down media - the fourth pillar of democracy. Like a dictator, he favors media that praises him and harasses and intimidates media like Eenadu that exposes YSRCP’s scams and dirty deeds. Driven by… pic.twitter.com/XfPOA2dnr2

    — N Chandrababu Naidu (@ncbn) August 21, 2023 " class="align-text-top noRightClick twitterSection" data=" ">

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'​​ನಲ್ಲಿ ಸುದೀರ್ಘ ಪೋಸ್ಟ್​​ ಮಾಡಿರುವ ಚಂದ್ರಬಾಬು ನಾಯ್ಡು, "ಸಂಸ್ಥೆಗಳನ್ನು ಹಾಳು ಮಾಡುವ ಪ್ರವೃತ್ತಿಯನ್ನು ಮುಂದುವರಿಸಿರುವ ವೈ.ಎಸ್.ಜಗನ್ ಈಗ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಬರೆದಿದ್ದಾರೆ.

"ಜಗನ್ ರೆಡ್ಡಿ ಸರ್ವಾಧಿಕಾರಿಯಂತೆ ತಮ್ಮನ್ನು ಹೊಗಳುವ ಮಾಧ್ಯಮಗಳನ್ನು ಬೆಂಬಲಿಸುತ್ತಾರೆ ಮತ್ತು ವೈಎಸ್ಆರ್​​ಸಿಪಿಯ ಹಗರಣಗಳು ಮತ್ತು ಕೊಳಕು ಕೃತ್ಯಗಳನ್ನು ಬಹಿರಂಗಪಡಿಸುವ ಈನಾಡುನಂಥ ಮಾಧ್ಯಮಗಳಿಗೆ ಕಿರುಕುಳ ನೀಡುತ್ತಾರೆ ಮತ್ತು ಬೆದರಿಕೆ ಒಡ್ಡುತ್ತಾರೆ" ಎಂದು ನಾಯ್ಡು ತಿಳಿಸಿದ್ದಾರೆ. "ತಮ್ಮ ಸ್ವಂತ ವೈಫಲ್ಯಗಳಿಂದ ಹತಾಶೆಗೊಂಡಿರುವ ಮತ್ತು ಜನರಲ್ಲಿ ಉಂಟಾಗಿರುವ ಭಾರಿ ಆಡಳಿತ ವಿರೋಧಿ ಅಲೆಯ ಭಾವನೆಯಿಂದ ಚಿಂತಿತರಾಗಿರುವ ಅವರು, ಈಗ ಅರವತ್ತು ವರ್ಷಗಳಿಂದ ತೆಲುಗು ಜನತೆಗೆ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಮಾರ್ಗದರ್ಶಿಯಂಥ ದೀರ್ಘಕಾಲದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ" ಎಂದು ನಾಯ್ಡು ಜರಿದಿದ್ದಾರೆ.

"ತಮ್ಮ ವಿಶ್ವಾಸಾರ್ಹತೆ, ಮೌಲ್ಯಗಳು ಮತ್ತು ತತ್ವಗಳಿಂದ ಗುರುತಿಸಿಕೊಂಡಿರುವ ಹಾಗೂ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ 'ಪದ್ಮ ವಿಭೂಷಣ'ದಿಂದ ಗೌರವಿಸಲ್ಪಟ್ಟ ರಾಮೋಜಿ ರಾವ್ ಅವರ ಮೇಲೆ ವೈಎಸ್ಆರ್​ಸಿಪಿ ನಡೆಸುತ್ತಿರುವ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರು ಎಷ್ಟೇ ದುಷ್ಟ ಪ್ರಯತ್ನಗಳನ್ನು ಮಾಡಿದರೂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅದರಲ್ಲಿ ವಿಫಲರಾಗಲಿದ್ದಾರೆ ಮತ್ತು ಮುಖಭಂಗ ಅನುಭವಿಸಲಿದ್ದಾರೆ" ಎಂದು ಚಂದ್ರಬಾಬು ನಾಯ್ಡು ಕಿಡಿ ಕಾರಿದ್ದಾರೆ.

ಕೆಟ್ಟದ್ದು ಯಾವಾಗಲೂ ಸೋಲುತ್ತದೆ ಮತ್ತು ಒಳ್ಳೆಯದು ಅಂತಿಮವಾಗಿ ಗೆಲ್ಲುತ್ತದೆ ಎಂದು ಅವರು ಹೇಳಿದರು. ಈಟಿವಿ ನೆಟ್​ವರ್ಕ್​ ಮಾಲೀಕ ಮತ್ತು ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್ ಅವರು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ 'ಪದ್ಮವಿಭೂಷಣ' ಸ್ವೀಕರಿಸಿದ ಚಿತ್ರವನ್ನು ನಾಯ್ಡು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟ್​​ನಲ್ಲಿ #TeluguPeopleWithRamojiRao ಹ್ಯಾಶ್ ಟ್ಯಾಗ್ ಕೂಡ ಹಾಕಿದ್ದಾರೆ.

ರಾಮೋಜಿ ರಾವ್ ಅಧ್ಯಕ್ಷರಾಗಿರುವ ಈನಾಡು ಗ್ರೂಪ್ ಒಡೆತನದ ಮಾರ್ಗದರ್ಶಿ ಚಿಟ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆಂಧ್ರಪ್ರದೇಶ ಸಿಐಡಿ ಮೂರು ಎಫ್ಐಆರ್​​ಗಳನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಮಹತ್ವ ಪಡೆದುಕೊಂಡಿವೆ.

ಇದನ್ನೂ ಓದಿ : Margadarsi: ಮಾರ್ಗದರ್ಶಿ ಚಿಟ್‌ ಫಂಡ್ ಪ್ರಕರಣ; ಚಿಟ್‌ ರಿಜಿಸ್ಟ್ರಾರ್‌ ನೀಡಿದ ಬಹಿರಂಗ ನೊಟೀಸ್‌ಗೆ ಹೈಕೋರ್ಟ್‌ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.