ETV Bharat / bharat

9 ವರ್ಷ ಕಳೆದ್ರೂ ಮಕ್ಕಳಾಗಲಿಲ್ಲ.. ಆದ್ರೆ 9 ತಿಂಗಳು ಕುಟುಂಬಸ್ಥರನ್ನೇ ಮೂರ್ಖರನ್ನಾಗಿ ಮಾಡಿದ ಮಹಿಳೆ!

author img

By

Published : Jan 7, 2022, 8:55 AM IST

Updated : Jan 7, 2022, 9:05 AM IST

ತೆಲಂಗಾಣದ ಕೊಂಡನಪಲ್ಲಿ ಜಿಲ್ಲೆಯಲ್ಲಿ ಮಹಿಳೆ ತಮ್ಮ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿದಂತೆ ಇತರರನ್ನು ಬರೋಬ್ಬರಿ 9 ತಿಂಗಳುಗಳ ಕಾಲ ಮೂರ್ಖರನ್ನಾಗಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Lady pregnant drama, woman trouble after pretending to be pregnant, lady pregnant drama in Telangana, Telangana lady drama news, ಗರ್ಭಿಣಿಯಂತೆ ನಟಿಸಿದ ಮಹಿಳೆ, ತೆಲಂಗಾಣದಲ್ಲಿ ಗರ್ಭಿಣಿಯಂತೆ ನಟಿಸಿದ ಮಹಿಳೆ, ತೆಲಂಗಾಣದಲ್ಲಿ ಗರ್ಭಿಣಿಯಂತೆ ನಟಿಸಿ ತೊಂದರೆಗೆ ಅನುಭವಿಉತ್ತಿರುವ ಮಹಿಳೆ, ತೆಲಂಗಾಣ ಸುದ್ದಿ,
ಸಾಂದರ್ಭಿಕ ಚಿತ್ರ

ಕೊಂಡನಪಲ್ಲಿ (ಆಂಧ್ರಪ್ರದೇಶ): ಮಹಿಳೆಯೊಬ್ಬಳು ತನ್ನ ಅತ್ತೆ - ಮಾವ, ಸಂಬಂಧಿಕರಿಗೆ ಮತ್ತು ಪೋಷಕರಿಗೆ 9 ತಿಂಗಳುಗಳ ಕಾಲ ಮೂರ್ಖರನ್ನಾಗಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳಿಲ್ಲದ ದಂಪತಿಗಳನ್ನು ಭಾರತೀಯ ಸಮುದಾಯಗಳು ಒಂದು ಥರ ನೋಡುವುದರಿಂದ, ಇಂತಹ ಬಹಳಷ್ಟು ಜೋಡಿಗಳು ಕಿರಿಕಿರಿ ಅನುಭವಿಸುತ್ತವೆ. ಆದರೆ, ಇಲ್ಲೊಬ್ಬ ಮಹಿಳೆ ಇಂತಹ ಮಾನಸಿಕತೆಯಿಂದ ಹೊರಬರಲು ಖತರ್ನಾಕ್​ ಐಡಿಯಾ ಮಾಡಿ ಸಿಕ್ಕಿ ಬಿದ್ದಿದ್ದಾರೆ.

ಇಲ್ಲಿನ ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳು ಕಳೆದ್ರೂ ಮಕ್ಕಳಾಗಿರಲಿಲ್ಲ.

ಹೀಗಾಗಿ ಈ ದಂಪತಿ, ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರೊಂದಿಗೆ ಅನಗತ್ಯ ಪ್ರಶ್ನೆಗಳಿಂದ ಅವಮಾನ ಎದುರಿಸುತ್ತಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಮಹಿಳೆ ನಾನು ಸಹ ಗರ್ಭಧರಿಸಿದ್ದೇನೆ ಎಂದು ಹೇಳುವ ಮೂಲಕ ವಿಲಕ್ಷಣ ನಿರ್ಧಾರವನ್ನು ತೆಗೆದುಕೊಂಡು ಪೇಚಿಗೆ ಸಿಲುಕಿದ್ದಾರೆ.

ಓದಿ: ಪ್ರಿಯಕರನನ್ನು ಭೇಟಿಯಾಗಲು ವಾಘಾ ಗಡಿ ದಾಟುತ್ತಿದ್ದ ವಿವಾಹಿತ ಮಹಿಳೆ ಬಂಧನ

ನೆರೆಹೊರೆಯವರ ಮಾತುಗಳಿಂದ ತಪ್ಪಿಸಿಕೊಳ್ಳಲು ಮಹಿಳೆ ಮಾಡಿದ ಐಡಿಯಾ ಏನು?

ಗರ್ಭಧರಿಸಿದ್ದೇನೆ ಎಂದು ಅತ್ತೆಗೆ ಸುಳ್ಳು ಹೇಳಿ ತವರು ಮನೆಗೆ ಹೋಗಿದ್ದಾಳೆ. ಆಕೆಯ ಇಷ್ಟದಂತೆ ಗಂಡನ ಮನೆಯವರು ತವರು ಮನೆಗೆ ಕಳುಹಿಸಿದ್ದಾರೆ. ಬಳಿಕ ತನ್ನ ತಾಯಿಯೊಂದಿಗೆ 9 ತಿಂಗಳು ಗರ್ಭಿಣಿಯಂತೆಯೇ ನಟಿಸಿದ್ದಾಳೆ.

ಈ 9 ತಿಂಗಳು ಅವಧಿಯಲ್ಲಿ ಆಕೆ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ಪ್ರತಿ ತಿಂಗಳು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾಳೆ. ವೈದ್ಯರು ತನ್ನ ಹೆರಿಗೆಯ ದಿನಾಂಕವನ್ನು ಬುಧವಾರ, ಜನವರಿ 5 ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬದವರಿಗೂ ತಿಳಿಸಿದ್ದಾಳೆ. ಹೆರಿಗೆಯನ್ನೂ ಮಾಡಿಕೊಂಡಂತೆ ನಟನೆ ಕೂಡಾ ಮಾಡಿದ್ದಾಳೆ. ಬಳಿಕ ಮಗು ನೋಡಲು ಬಂದಾಗ ಕಥೆ ಕಟ್ಟಿದ್ದಾಳೆ.

ಮಗುವಿನ ಬಗ್ಗೆ ವಿಚಾರಿಸಿದಾಗ ಹೆರಿಗೆಗೆ ಸಹಾಯ ಮಾಡಲು ಬಂದ ಇಬ್ಬರು ವ್ಯಕ್ತಿಗಳು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾಳೆ. ಮಹಿಳೆಯ ಮಾತಿನ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಮಹಿಳೆಯ ನಿಜ ಬಣ್ಣ ಗೊತ್ತಾಗಿದೆ. ಗಂಡನ ಮನೆಯವರು ಹಾಗೂ ಸುತ್ತಮುತ್ತಲಿನವರನ್ನ ಮರಳು ಮಾಡಲು ಜಾಣತನದಿಂದ ಸಂಚು ರೂಪಿಸಿದ ಕಥೆ ಬಯಲಾಗಿದೆ.

ಓದಿ: ಕೊಲೆ ಮಾಡಿ10 ಶವಗಳನ್ನು ಬಿಟ್ಟು ಹೋದ ಚಾಲಕ!

ಪೊಲೀಸರು ಮಾಡಿದ್ದೇನು?

ಇಬ್ರಾಹಿಂಪಟ್ಟಣ ಸಿಐ ಶ್ರೀಧರ್ ಕುಮಾರ್ ತಂಡದೊಂದಿಗೆ ಬುಧವಾರ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಆಕೆಯ ಹೇಳಿಕೆಯ ಮೇಲೆಯೇ ಪೊಲೀಸರಿಗೆ ಅನುಮಾನ ಬಂದಿದೆ. ಹೀಗಾಗಿ ಪೊಲೀಸರು ಆ ಮಹಿಳೆಯನ್ನ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆಗೊಳಪಡಿಸಿದ್ದಾರೆ. ಈ ವೇಳೆ ಮಹಿಳೆ ಪರೀಕ್ಷಿಸಿದ ವೈದ್ಯರಿಗೆ ಶಾಕಿಂಗ್​ ನ್ಯೂಸ್​ ಸಿಕ್ಕಿದೆ. ಮಹಿಳೆಗೆ ಹೆರಿಗೆಯಾಗಿಲ್ಲ ಎಂಬುದು ಕನ್ಫರ್ಮ್​ ಆಗಿದೆ. ಈ ಘಟನೆ ಕುಟುಂಬದವರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.

Last Updated : Jan 7, 2022, 9:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.