ETV Bharat / bharat

ಆರ್‌ಎಫ್‌ಒ ಹತ್ಯೆ ಮಾಡಿದ ಗುತ್ತಿ ಕೋಯಾ ಬುಡಕಟ್ಟು ಜನಾಂಗ ಹೊರಹಾಕಲು ನಿರ್ಣಯ

ತೆಲಂಗಾಣದ ಭದ್ರಾದ್ರಿ ಕೊತ್ತ ಗುಡೆಂ ಜಿಲ್ಲೆಯಲ್ಲಿ ನ.22ರಂದು ಅರಣ್ಯ ಇಲಾಖೆ ನೆಟ್ಟಿದ್ದ ಸಸಿಗಳನ್ನು ಕಿತ್ತು ಹಾಕಲು ಗುತ್ತಿ ಕೋಯಾ ಜನಾಂಗದರು ಮುಂದಾಗಿದ್ದರು. ಇದನ್ನು ತಡೆಯಲು ಹೋಗಿದ್ದ ಎಫ್‌ಆರ್‌ಒ ಶ್ರೀನಿವಾಸ ರಾವ್ (42) ಅವರನ್ನು ಕೊಚ್ಚಿ ಹತ್ಯೆ ಮಾಡಲಾಗಿತ್ತು.

Etv Bharatಆರ್‌ಎಫ್‌ಒ ಹತ್ಯೆ ಮಾಡಿದ ಗುತ್ತಿ ಕೋಯಾ ಬುಡಕಟ್ಟು ಜನಾಂಗ ಹೊರಹಾಕಲು ನಿರ್ಣಯ

author img

By

Published : Nov 26, 2022, 11:05 PM IST

ಭದ್ರಾದ್ರಿ ಕೊತ್ತ ಗುಡೆಂ (ತೆಲಂಗಾಣ): ಅರಣ್ಯ ರೇಂಜ್ ಆಫೀಸರ್ (ಆರ್‌ಎಫ್‌ಒ) ಹತ್ಯೆಯಲ್ಲಿ ಭಾಗಿಯಾಗಿದ ಗುತ್ತಿ ಕೋಯಾ ಬುಡಕಟ್ಟು ಜನಾಂಗದವರನ್ನು ಹೊರಹಾಕಲು ತೆಲಂಗಾಣದ ಭದ್ರಾದ್ರಿ ಕೊತ್ತ ಗುಡೆಂ ಜಿಲ್ಲೆಯ ಗ್ರಾಮವೊಂದು ನಿರ್ಧರಿಸಿದೆ. ಇಲ್ಲಿನ ಬೆಂದಲಪಾಡು ಪಂಚಾಯತ್ ಗ್ರಾಮ ಸಭೆಯಲ್ಲಿ ಎಲ್ಲ ಗುಟ್ಟಿ ಕೋಯ ಗಿರಿಜನರನ್ನು ಛತ್ತೀಸ್‌ಗಢಕ್ಕೆ ವಾಪಸ್ ಕಳುಹಿಸುವ ನಿರ್ಣಯ ಅಂಗೀಕರಿಸಲಾಗಿದೆ.

ನ.22ರಂದು ಚಂದ್ರುಗೊಂಡ ಅರಣ್ಯ ಪ್ರದೇಶದ ಜಮೀನಿನಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಸಸಿಗಳನ್ನು ಕಿತ್ತು ಹಾಕಲು ಗುತ್ತಿ ಕೋಯಾ ಜನಾಂಗದರು ಮುಂದಾಗಿದ್ದರು. ಇದನ್ನು ತಡೆಯಲು ಹೋಗಿದ್ದ ಎಫ್‌ಆರ್‌ಒ ಶ್ರೀನಿವಾಸ ರಾವ್ (42) ಅವರನ್ನು ಕೊಚ್ಚಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಸರ್ಕಾರಿ ಕಚೇರಿಗೆ 6 ವರ್ಷಗಳಿಂದ ರೈತನ ಅಲೆದಾಟ.. 211 ಬಾರಿ ದೂರು ಸಲ್ಲಿಕೆ, ಕಾಗದ ಪತ್ರಿಗಳ ತೂಕವೇ 12 ಕೆಜಿ!

ಈ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನವೆಂಬರ್ 23ರಂದು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಮಡಕಂ ತುಲಾ ಮತ್ತು ಪೋಡಿಯಂ ನಾಗ ಎಂಬ ಇಬ್ಬರನ್ನು ಬಂಧಿಸಿದ್ದರು. ಸುಕ್ಮಾ ಜಿಲ್ಲೆಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಎಫ್‌ಆರ್‌ಒ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳು ರಾತ್ರಿ ಕಾಡಿನಲ್ಲೇ ಮಲಗಿದ್ದರು. ನಂತರ ತಮ್ಮೂರಿಗೆ ಹೋಗಲೆಂದು ಹಣ ಸಂಗ್ರಹಿಸಲು ಬೆಳಗ್ಗೆ ಬಂದಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದರು.

ಅರಣ್ಯ ಭೂಮಿ ಒತ್ತುವರಿ ಆರೋಪ: ಎಫ್‌ಆರ್‌ಒ ಶ್ರೀನಿವಾಸ ರಾವ್ ಹತ್ಯೆ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಸಹ ಗುತ್ತಿ ಕೋಯಾ ಬುಡಕಟ್ಟು ಜನಾಂಗದವರನ್ನು ರಾಜ್ಯದಿಂದ ಹೊರ ಕಳುಹಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು. ಅಲ್ಲದೇ, ಗುತ್ತಿ ಕೋಯಾಗಳು ಅನ್ಯ ರಾಜ್ಯಗಳಿಂದ ತೆಲಂಗಾಣಕ್ಕೆ ನುಸುಳಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಜನಾಂಗದವರನ್ನು ರಾಜ್ಯದಿಂದ ಓಡಿಸಲು ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಅರಣ್ಯ ರೇಂಜ್ ಅಧಿಕಾರಿಗಳ ಸಂಘ ಹಾಗೂ ಕಿರಿಯ ಅರಣ್ಯ ರೇಂಜ್ ಅಧಿಕಾರಿಗಳ ಸಂಘ ಎಂದು ಒತ್ತಾಯಿಸಿತ್ತು.

ಸಾಗುವಳಿದಾರರು ಮತ್ತು ಅರಣ್ಯ ಇಲಾಖೆಯ ಘರ್ಷಣೆ: ಪೋಡು ಭೂಮಿ ಎಂದರೆ ಆದಿವಾಸಿಗಳು ಮತ್ತು ಗಿರಿಜನೇತರ ಅರಣ್ಯವಾಸಿಗಳು ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿ. ಆದರೆ, ಈ ಭೂಮಿ ವಿಷಯವಾಗಿ ಸಾಗುವಳಿದಾರರು ಮತ್ತು ಅರಣ್ಯ ಇಲಾಖೆಯ ಘರ್ಷಣೆ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪೋಡು ಜಮೀನುಗಳಲ್ಲಿ ಅರಣ್ಯ ಇಲಾಖೆಯು ಸಸಿಗಳನ್ನು ನೆಟ್ಟು ತೋಟಗಳನ್ನು ಮಾಡುತ್ತಿದೆ. ಇದರಿಂದ ರಾಜ್ಯದ ವಿವಿಧ ಸ್ಥಳಗಳಲ್ಲೂ ಸಾಗುವಳಿದಾರರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ಮಧ್ಯೆ ಗಲಾಟೆ ಹೆಚ್ಚಾಗುತ್ತಿದೆ.

ವಿವಿಧ ಜಿಲ್ಲೆಯಲ್ಲಿದ್ದಾರೆ ಗುತ್ತಿ ಕೋಯಾಗಳು: ತೆಲಂಗಾಣದ ರಾಜ್ಯಾದ್ಯಂತ ಒಟ್ಟಾರೆ 34,265 ಗುತ್ತಿ ಕೋಯಾ ಬುಡಕಟ್ಟು ಜನಾಂಗದವರು ಇದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಜೊತೆಗೆ ಅರಣ್ಯ ಇಲಾಖೆಯ ಪ್ರಕಾರ ಅವರ ಹಿಡಿತದಲ್ಲಿ 22,833 ಎಕರೆ ಅರಣ್ಯ ಭೂಮಿ ಇದೆ.

ಆದರೆ, ಸ್ಥಳೀಯ ರಾಜಕೀಯ ಮುಖಂಡರು ಬುಡಕಟ್ಟು ಜನಾಂಗದವರನ್ನು ತಮ್ಮ ಅಣತಿಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ. ಇದೀಗ ಅರಣ್ಯಾಧಿಕಾರಿ ಶ್ರೀನಿವಾಸ ರಾವ್ ಹತ್ಯೆ ಹಿನ್ನೆಲೆಯಲ್ಲಿ ಈ ಜನಾಂಗದವರ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭದ್ರಾದ್ರಿ ಕೊತ್ತಗುಡೆಂ, ಖಮ್ಮಂ, ಜಯಶಂಕರ್ ಭೂಪಾಲಪಲ್ಲಿ ಮತ್ತು ಮುಲುಗು ಜಿಲ್ಲೆಗಳು ಇವರು ವಾಸಸ್ಥಾನಗಳಾಗಿವೆ. ಇದರಲ್ಲಿ ಕೊತ್ತಗುಡೆಂ ಜಿಲ್ಲೆಯಲ್ಲಿ ಇವರ ಸಮಸ್ಯೆ ಹೆಚ್ಚಾಗಿದೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಈ ಜಿಲ್ಲೆಯೊಂದರಲ್ಲೇ 23,990 ಜನರಿದ್ದಾರೆ.

ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಮೂರನೇ ಮಹಡಿಯಿಂದ ಜಿಗಿದು ಎಂಜಿನಿಯರ್ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.