ಹೈದರಾಬಾದ್(ತೆಲಂಗಾಣ): ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಸರಿಸಮನಾಗಿ ತೆಲಂಗಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಯಾದಾದ್ರಿ ದೇವಾಲಯದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಯಾದಾದ್ರಿ ಜಿಲ್ಲೆಯಲ್ಲಿರುವ ಶತಮಾನದಷ್ಟು ಹಳೆಯದಾಗಿರುವ ಲಕ್ಷ್ಮಿ ನರಸಿಂಹ ದೇವರ ದೇಗುಲವನ್ನು ತಿರುಮಲ ದೇಗುಲದ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ತೆಲಂಗಾಣ ಸರ್ಕಾರ ಇದೀಗ ದಾಖಲೆಯ 125 ಕೆಜಿ ಚಿನ್ನ ಖರೀದಿಗೆ ನಿರ್ಧಾರ ಕೈಗೊಂಡಿದೆ.
ತಿರುಪತಿಯಲ್ಲಿರುವ ವೆಂಕಟೇಶ್ವರ ದೇಗುಲದ ಮಾದರಿಯಲ್ಲೇ ಯಾದಾದ್ರಿ ದೇಗುಲ ನಿರ್ಮಾಣವಾಗ್ತಿದ್ದು, ಸುಮಾರು 1,400 ಎಕರೆ ಪ್ರದೇಶದಲ್ಲಿ ದೆಗುಲದ ಅರ್ಚರು, ಸಿಬ್ಬಂದಿ ಹಾಗೂ ಪ್ರವಾಸಿಗರು ಉಳಿದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗ್ತಿದೆ.
ದೇಗುಲಕ್ಕೆ ಭೇಟಿ ನೀಡಿರುವ ಸಿಎಂ ಕೆಸಿಆರ್, ಭಾರತೀಯ ರಿಸರ್ವ್ ಬ್ಯಾಂಕ್(RBI)ನಿಂದ 125 ಕೆಜಿ ಚಿನ್ನ ಖರೀದಿ ಮಾಡಲು ನಿರ್ಧರಿಸಲಾಗಿದ್ದು, ಅದನ್ನ ಯಾದಾದ್ರಿ ದೇಗುಲದ ಟವರ್ ಅಲಂಕಾರಕ್ಕಾಗಿ ಬಳಕೆ ಮಾಡಲಾಗುವುದು ಎಂದಿದ್ದಾರೆ. ಇದಕ್ಕಾಗಿ ಸರ್ಕಾರ 60ರಿಂದ 65 ಕೋಟಿ ರೂ. ಖರ್ಚು ಮಾಡಲಿದೆ ಎಂಬ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ಕೆಸಿಆರ್ 1.16 ಕೆಜಿ ಚಿನ್ನ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ ಅನೇಕ ದಾನಿಗಳು 22 ಕೆಜಿ ಚಿನ್ನ ಈ ದೇವಸ್ಥಾನಕ್ಕೆ ದಾನದ ರೂಪದಲ್ಲಿ ನೀಡಿದ್ದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಮುಂದಿನ ವರ್ಷ 28, 2022ರಂದು ಈ ದೇವಾಲಯ ಓಪನ್ ಆಗಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಕೇರಳ ಪ್ರವಾಹಕ್ಕೆ 39 ಮಂದಿ ಬಲಿ: ನಾಳೆಯೂ ಹಲವೆಡೆ ಆರೆಂಜ್ ಅಲರ್ಟ್ ಘೋಷಣೆ
ಕೆಸಿಆರ್ ಕುಟುಂಬದಿಂದ 1.16 ಕೆಜಿ ಚಿನ್ನ, ಸಚಿವ ಮಲ್ಲಾರೆಡ್ಡಿ 1 ಕೆಜಿ, ನಾಗರ್ ಕರ್ನೂಲ್ ಶಾಸಕ ಜನಾರ್ದನ್ ರೆಡ್ಡಿ 2 ಕೆಜಿ ಚಿನ್ನ ಸೇರಿದಂತೆ ವಿವಿಧ ಭಕ್ತರು ತಮ್ಮ ಕೈಲಾದಷ್ಟು ಚಿನ್ನ ದಾನದ ರೂಪದಲ್ಲಿ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ಇದೇ ವೇಳೆ ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.