ETV Bharat / bharat

ತಿರುಪತಿ ಮಾದರಿಯ ದೇಗುಲಕ್ಕೆ 1.75 ಕೋಟಿ ರೂ. ನಗದು ದೇಣಿಗೆ ನೀಡಿದ ತೆಲಂಗಾಣ ಸಚಿವ

ತೆಲಂಗಾಣದ ಯಾದಾದ್ರಿ ಜಿಲ್ಲೆಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವನ್ನು ತಿರುಪತಿ ತಿಮ್ಮಪ್ಪ ದೇವಾಲಯದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದ್ದು, ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡಿಸಲು ಸಚಿವ ಮಲ್ಲಾ ರೆಡ್ಡಿ ಅವರು 1 ಕೋಟಿ ರೂ. ನಗದು ಹಾಗೂ 75 ಲಕ್ಷ ರೂ. ಚೆಕ್ ನೀಡಿದ್ದಾರೆ.

ಮಲ್ಲಾ ರೆಡ್ಡಿ
ಮಲ್ಲಾ ರೆಡ್ಡಿ
author img

By

Published : Oct 29, 2021, 12:37 PM IST

ಹೈದರಾಬಾದ್​ (ತೆಲಂಗಾಣ): ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿಮ್ಮಪ್ಪ ದೇವಾಲಯದ ಮಾದರಿಯಲ್ಲಿ ತೆಲಂಗಾಣದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡಿಸಲು ಸಚಿವರೊಬ್ಬರು ಬರೋಬ್ಬರಿ 1.75 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಯಾದಾದ್ರಿ ದೇಗುಲಕ್ಕೆ 1.75 ಕೋಟಿ ರೂ. ದೇಣಿಗೆ ನೀಡಿದ ತೆಲಂಗಾಣ ಸಚಿವ ಮಲ್ಲಾ ರೆಡ್ಡಿ

ತೆಲಂಗಾಣದ ಯಾದಾದ್ರಿ ಜಿಲ್ಲೆಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವನ್ನು ತಿರುಮಲ ದೇಗುಲದ ಮಾದರಿಯಲ್ಲಿ ರಾಜ್ಯ ಸರ್ಕಾರವು ನಿರ್ಮಿಸುತ್ತಿದೆ. ಸುಮಾರು 1,400 ಎಕರೆ ಪ್ರದೇಶದಲ್ಲಿ ದೇವಸ್ಥಾನ, ದೇಗುಲದ ಅರ್ಚರು-ಸಿಬ್ಬಂದಿ ಹಾಗೂ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗ್ತಿದೆ. ತೆಲಂಗಾಣದ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಾ ರೆಡ್ಡಿ ಅವರು ತಮ್ಮ ಮೆಡ್ಚಲ್​ ವಿಧಾನಸಭಾ ಕ್ಷೇತ್ರದ ವತಿಯಿಂದ 1 ಕೋಟಿ ರೂ. ನಗದು ಹಾಗೂ 75 ಲಕ್ಷ ರೂ. ಚೆಕ್ ನೀಡಿದ್ದಾರೆ.

ಇದನ್ನೂ ಓದಿ: ಇದು ತೆಲಂಗಾಣದ ತಿರುಪತಿ.. ಯಾದಾದ್ರಿ ದೇಗುಲಕ್ಕೆ 125 ಕೆಜಿ ಚಿನ್ನ ಖರೀದಿಗೆ ಮುಂದಾದ ತೆಲಂಗಾಣ​ ಸರ್ಕಾರ

ಈಗಾಗಲೇ ಸಿಎಂ ಕೆ.ಚಂದ್ರಶೇಖರ ರಾವ್​ ನೇತೃತ್ವದ ರಾಜ್ಯ ಸರ್ಕಾರವು ದೇಗುಲ ನಿರ್ಮಾಣಕ್ಕಾಗಿ ಭಾರತೀಯ ರಿಸರ್ವ್​ ಬ್ಯಾಂಕ್​​(RBI)ನಿಂದ 125 ಕೆಜಿ ಚಿನ್ನ ಖರೀದಿ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ 60ರಿಂದ 65 ಕೋಟಿ ರೂ. ಖರ್ಚು ಮಾಡಲಿದ್ದು, ಮುಖ್ಯಮಂತ್ರಿ ಕೆಸಿಆರ್​​​ 1.16 ಕೆಜಿ ಚಿನ್ನ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ ಅನೇಕ ದಾನಿಗಳು 22 ಕೆಜಿ ಚಿನ್ನವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಮುಂದಿನ ವರ್ಷ ಈ ದೇವಾಲಯ ಓಪನ್​​ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.