ETV Bharat / bharat

ಕೈ - ಕಾಲು ಕಟ್ಟಿ ಹಾಕಿರುವ ತಂದೆ ಫೋಟೋ ಮಗನಿಗೆ ವಾಟ್ಸ್​ಆ್ಯಪ್​: 15 ಲಕ್ಷ ಬೇಡಿಕೆಯಿಟ್ಟ ಅಪಹರಣಕಾರರು!

ತೆಲಂಗಾಣದ ಜಗ್ತಿಯಾಲ್ ಮೂಲದ ಶಂಕರಯ್ಯ ಅವರನ್ನು ಜೂನ್ 22 ರಂದು ಮಹಾರಾಷ್ಟ್ರದ ಮುಂಬೈ ಉಪನಗರದ ಬಳಿ ಅಪಹರಿಸಲಾಗಿತ್ತು. ಮುಂಬೈ ಪೊಲೀಸರಿಗೆ ಈತನನ್ನು ಪತ್ತೆ ಹಚ್ಚಲು ಇನ್ನು ಸಾಧ್ಯವಾಗಿಲ್ಲ. ಆದರೆ ಶಂಕರಯ್ಯನನ್ನು ಬಂಧಿಸಿರುವ ಫೋಟೋ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Telangana Man Was Kidnapped in Mumbai Suburbs  Kidnappers Demand15 lakhs  Shankaraiah who hails from jagtial was kidnapped  Mumbai police news  kidnappers sent shankariah photo to his son harish  ಕೈ ಕಾಲು ಕಟ್ಟಿ ಹಾಕಿರುವ ತಂದೆ ಫೋಟೋ ಮಗನಿಗೆ ವಾಟ್ಸಾಪ್  ಸಂತ್ರಸ್ತ ಕುಟುಂಬಕ್ಕೆ 15 ಲಕ್ಷ ಬೇಡಿಕೆಯಿಟ್ಟ ಅಪಹರಣಕಾರರು  ಮುಂಬೈನಲ್ಲಿ ತೆಲಂಗಾಣ ವ್ಯಕ್ತಿ ಅಪಹರಣ  ಜಗ್ತಿಯಾಲ್​ ನಿವಾಸಿ ಶಂಕರಯ್ಯ ಅಪಹರಣ  ಮುಂಬೈ ಪೊಲೀಸ್​ನಿಂದ ತನಿಖೆ
ಕೈ ಕಾಲು ಕಟ್ಟಿ ಹಾಕಿರುವ ತಂದೆ ಫೋಟೋ ಮಗನಿಗೆ ವಾಟ್ಸಾಪ್
author img

By

Published : Jul 1, 2022, 12:09 PM IST

ಹೈದರಾಬಾದ್(ತೆಲಂಗಾಣ): ಜೂ.22ರಂದು ಮುಂಬೈ ವಿಮಾನ ನಿಲ್ದಾಣದಿಂದ ಬರುತ್ತಿದ್ದಾಗ ನಗರದ ಹೊರವಲಯದಲ್ಲಿ ಅಪಹರಣಕ್ಕೊಳಗಾಗಿದ್ದ ಜಗಿತ್ಯಾಲ ಜಿಲ್ಲೆ ಪೆಗಡಪಲ್ಲಿ ಮಂಡಲದ ನಂದಗಿರಿಯ ಮತ್ತಮಲ್ಲ ಶಂಕರಯ್ಯ ಇದುವರೆಗೂ ಪತ್ತೆಯಾಗಿಲ್ಲ. ಆದರೆ ಕಿಡ್ನಾಪ್​​ ​ ಆಗಿರುವ ಶಂಕರಯ್ಯನ ಫೋಟೋ ಮಾತ್ರ ಈಗ ಎಲ್ಲೆಡೆ ವೈರಲ್​ ಆಗ್ತಿದೆ.

ಕಿಡ್ನ್ಯಾಪ್​ ಆಗಿರುವ ಶಂಕರಯ್ಯ ಅವರ ಕಾಲು, ಕೈಗಳನ್ನು ಕಟ್ಟಿ ಒತ್ತೆಯಾಳಾಗಿಟ್ಟುಕೊಂಡಿರುವ ಫೋಟೋವನ್ನು ಮಗ ಹರೀಶ್‌ಗೆ ವಾಟ್ಸ್​ಆ್ಯಪ್​​ ನಲ್ಲಿ ಕಳುಹಿಸಿದ್ದಾರೆ. ಆ ನಂತರ ನೀವು 15 ಲಕ್ಷ ರೂ. ಕೊಟ್ಟರೆ ಮಾತ್ರ ನಿಮ್ಮ ತಂದೆಯನ್ನು ಬಿಡುತ್ತೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಇಂಟರ್‌ನೆಟ್‌ ಫೋನ್‌ ಮೂಲಕ ಕರೆ ಮಾಡಿ ನೀವು ಎಲ್ಲಿಂದ ಹಣ ತರುತ್ತೀರಿ ಎಂದು ಹರೀಶ್‌ಗೆ ಕೇಳಿದ್ದಾರೆ.

ಓದಿ: ನನಗೆ ತಿನ್ನಲು ಬಿಸ್ಕತ್ತು, ಚಾಕೊಲೇಟ್, ನೀರು ಕೊಟ್ಟರು.. ಕಿಡ್ನ್ಯಾಪ್​ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬಾಲಕ!

ಈ ಘಟನೆಯ ನಂತರ ಸಂತ್ರಸ್ತೆಯ ಕುಟುಂಬಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ಕೃಷಿ ಕುಟುಂಬದವರಾಗಿದ್ದು, ನಾವು ಎಲ್ಲಿಂದ 15 ಲಕ್ಷ ರೂಪಾಯಿ ತರಲಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು. ಅಪಹರಣಕಾರರು ತನ್ನ ತಂದೆಯನ್ನು ಕೊಲೆ ಮಾಡುತ್ತಾರೆಂಬ ಭಯ ನನ್ನನ್ನು ಕಾಡುತ್ತಿದೆ ಎಂದು ಹರೀಶ್​ ಆತಂಕ ವ್ಯಕ್ತಪಡಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಮುಂಬೈನಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿನ ಪೊಲೀಸರು ತಂಡವನ್ನು ನೇಮಿಸಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.