ಹೈದರಾಬಾದ್: ಲೋನ್ ನೀಡುವ ಅಕ್ರಮ ಆಪ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಹೈಕೋರ್ಟ್ ಡಿಜಿಪಿಗೆ ಆದೇಶಿಸಿದೆ. ಪ್ಲೇಸ್ಟೋರ್ನಿಂದ ಈ ಆಪ್ಗಳನ್ನು ತೆಗೆದುಹಾಕುವ ಸಂಬಂಧ ಕ್ರಮ ತೆಗೆದುಕೊಳ್ಳಿ ಎಂದು ಡಿಜಿಪಿ ಮಹೇಂದರ್ ರೆಡ್ಡಿಗೆ ಸೂಚಿಸಿದೆ.
ವಕೀಲ ಕಲ್ಯಾಣ್ ದೀಪ್ ಸಲ್ಲಿಸಿದ್ದ ಪ್ರಕರಣವನ್ನು ಸಿಜೆ ಪೀಠ ಇಂದು ವಿಚಾರಣೆ ನಡೆಸಿತು. ಚೀನಾ ಸಾಲ ಆ್ಯಪ್‌ಗಳ ಕಿರುಕುಳದಿಂದಾಗಿ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಸೆಳೆದರು.
ಈ ಸಂಬಂಧ ವಾದ ವಿವಾದ ಆಲಿಸಿದ ನ್ಯಾಯಾಲಯ, ಆಪ್ನ ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದೆ. ಈ ಸಂಬಂಧ ವಿಚಾರಣೆಯನ್ನು ಮಾರ್ಚ್ 18 ಕ್ಕೆ ಮುಂದೂಡಲಾಗಿದೆ.