ಹೈದರಾಬಾದ್ : ಆಂಧ್ರಪ್ರದೇಶದದಿಂದ ಕೊರೊನಾ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಹೈದರಾಬಾದ್‌ಗೆ ಬರುತ್ತಿರುವ ರೋಗಿಗಳನ್ನು ತೆಲಂಗಾಣ ಪೊಲೀಸರು ತಡೆಯುತ್ತಿದ್ದಾರೆ.
"ಹೈದರಾಬಾದ್‌ಗೆ ಉತ್ತಮ ಚಿಕಿತ್ಸೆ ಪಡೆಯಲು ಇತರೆ ರಾಜ್ಯಗಳಿಂದ ಸಾಕಷ್ಟು ರೋಗಿಗಳು ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ರಾಜ್ಯದಲ್ಲಿ ಆಸ್ಪತ್ರೆ ಮುಂದೆ ರೋಗಿಗಳು ಬೆಡ್ ಇಲ್ಲದೆ ನಿಲ್ಲಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯಬ್ಬರು ಮಾಹಿತಿ ನೀಡಿದ್ದಾರೆ.
ಬೆಡ್ಗಳು ಖಾತ್ರಿಯಾದ ರೋಗಿಗಳಿಗೆ ಮಾತ್ರ ರಾಜ್ಯಕ್ಕೆ ಅವಕಾಶ ನೀಡಲಾಗುತ್ತಿದೆ. ಇತ್ತೀಚೆಗೆ ತೆಲಂಗಾಣ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಹೈದರಾಬಾದ್‌ನ ಶೇ.50ಕ್ಕೂ ಹೆಚ್ಚು ಆಸ್ಪತ್ರೆಗಳ ಹಾಸಿಗೆಗಳು ನೆರೆಯ ರಾಜ್ಯಗಳ ರೋಗಿಗಳಿಂದ ತುಂಬಿವೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾತ್ರ ರೋಗಿಗಳಿಗೆ ಮಾತ್ರ ಹಾಸಿಗೆಗಳಿವೆ ಎಂದು ಹೇಳಿದ್ದರು.