ETV Bharat / bharat

ನಕ್ಸಲಿಸಂ ಬಿಟ್ಟು, ವಕೀಲೆಯಾಗಿ ವಾದಿಸಿ, ಶಾಸಕಿಯಾಗಿ ಆಯ್ಕೆಯಾಗಿ, ಪಿಹೆಚ್‌ಡಿ ಪಡೆದು ಈಗ ತೆಲಂಗಾಣ ಸರ್ಕಾರದಲ್ಲಿ ಸಚಿವೆ! - ಕಾಂಗ್ರೆಸ್ ಸಚಿವೆ ಸೀತಕ್ಕ

Seethakka's journey from Naxalite to Minister: ತೆಲಂಗಾಣ ಕಾಂಗ್ರೆಸ್ ಸರ್ಕಾರದ ನೂತನ ಸಚಿವೆ ಧನಸಾರಿ ಅನಸೂಯಾ ಅಲಿಯಾಸ್ ಸೀತಕ್ಕ ಅವರು ಒಂದು ಕಾಲದಲ್ಲಿ ಮಹಿಳಾ ನಕ್ಸಲ್​ ಆಗಿದ್ದವರು.

Telangana: Congress Leader Seethakka journey from naxalite to minister
ಒಂದು ಕಾಲದ ನಕ್ಸಲೈಟ್ ಸೀತಕ್ಕ; ಅಜ್ಞಾತ ಜೀವನದಿಂದ ತೆಲಂಗಾಣದ ಮಂತ್ರಿಯವರೆಗೆ!
author img

By ETV Bharat Karnataka Team

Published : Dec 7, 2023, 10:02 PM IST

Updated : Dec 7, 2023, 10:30 PM IST

ಹೈದರಾಬಾದ್ (ತೆಲಂಗಾಣ): ''ಬಾಲ್ಯದಲ್ಲಿ ನಕ್ಸಲೈಟ್ ಆಗುವೆನೆಂದು ಎಂದಿಗೂ ಯೋಚಿಸಿರಲಿಲ್ಲ. ನಕ್ಸಲೈಟ್ ಆಗಿದ್ದಾಗ ವಕೀಲೆಯಾಗುವೆನೆಂದು ಅಂದುಕೊಂಡಿರಲಿಲ್ಲ. ವಕೀಲೆಯಾದಾಗ ಎಂಎಲ್ಎ ಆಗುವ ಕನಸು ಕಟ್ಟಿಕೊಂಡಿರಲಿಲ್ಲ''. ಇದು ತೆಲಂಗಾಣದ ರಾಜಕಾರಣಿ, ಕಾಂಗ್ರೆಸ್​ ನಾಯಕಿ ಧನಸಾರಿ ಅನಸೂಯಾ ಅಲಿಯಾಸ್ ಸೀತಕ್ಕನವರ ವರ್ಷ ಹಿಂದಿನ ಮಾತು. ಇಂದು ಇವರು ರಾಜಕೀಯದಲ್ಲಿ ಹಂತಹಂತವಾಗಿ ಬಡ್ತಿ ಪಡೆದು ಮುಖ್ಯಮಂತ್ರಿ ರೇವಂತ್​ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿ ಪದಗ್ರಹಣ ಮಾಡಿದ್ದಾರೆ.

ಧನಸಾರಿ ಅನಸೂಯಾ ಅನೇಕ ವರ್ಷಗಳ ಕಾಲ ನಕ್ಸಲ್​ ಆಗಿದ್ದು ಅಜ್ಞಾತವಾಸ ಮಾಡಿದವರು. ಬಂಡಾಯದ ಹೋರಾಟದಲ್ಲಿ 'ಸೀತಕ್ಕ' ಎಂದೇ ಇವರ ಹೆಸರು. ರಾಜಕೀಯಕ್ಕೆ ಸೇರುವ ಮುನ್ನ ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಅರಣ್ಯದಲ್ಲಿಕೊಂಡೇ ಜನರಿಗಾಗಿ ದುಡಿದವರು. ನಂತರದಲ್ಲಿ ಕಾಡಿನ ಜೀವನಕ್ಕೆ ವಿದಾಯ ಹೇಳಿ ಮುಖ್ಯವಾಹಿನಿ ಬಂದಿರುವ ಇವರೀಗ ರಾಜ್ಯಾದ್ಯಂತ ವಿಶೇಷ ಚರಿಶ್ಮಾ ಹೊಂದಿದ್ದಾರೆ. ರಾಜ್ಯಶಾಸ್ತ್ರದಲ್ಲಿ ಪಿಎಚ್​ಡಿ ಪಡೆದು ದೇಶದ ಗಮನವನ್ನೂ ಸೆಳೆದವರು ಈಕೆ. ಜೀವನದ ಹೋರಾಟದಲ್ಲಿ ರಾಜಕೀಯದಲ್ಲೂ ಅನೇಕ ಏರಿಳಿತಗಳನ್ನೂ ಕಂಡಿದ್ದಾರೆ.

ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸೀತಕ್ಕ  ಅವರನ್ನು ಸೋನಿಯಾ ಗಾಂಧಿ ಅಭಿನಂದಿಸಿದರು.

ಮುಖ್ಯವಾಹಿನಿಗೆ ಬಂದಿದ್ದು ಹೇಗೆ?: ಸಂಯುಕ್ತ ವಾರಂಗಲ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನಶಕ್ತಿ ಸಶಸ್ತ್ರ ಹೋರಾಟದಲ್ಲಿ ಸೀತಕ್ಕ ಸಕ್ರಿಯರಾಗಿದ್ದರು. ಮಹಿಳಾ ನಕ್ಸಲ್ ಆಗಿ ಹಾಗೂ ತಂಡದ ನಾಯಕಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಸೀತಕ್ಕ ಸುಮಾರು ಎರಡು ದಶಕಗಳ ಕಾಲ ಅದರ ಒಡನಾಡಿಯಾಗಿ ಕಾಲ ಕಳೆದರು. ಇದೇ ಸಮಯದಲ್ಲಿ ಸೀತಕ್ಕ ಕಮಾಂಡರ್ ನಕ್ಸಲ್ ನಾಯಕನನ್ನೇ ವಿವಾಹವಾಗಿದ್ದರು. ಈ ನಡುವೆ ಖ್ಯಾತ ನಟ, ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್ (ಎನ್​ಟಿಆರ್) ಅವರು ನಕ್ಸಲರಿಗೆ ಮುಖ್ಯವಾಹಿನಿಗೆ ಬಂದು ನವಜೀವನ ನಡೆಸುವಂತೆ ಕರೆ ನೀಡುತ್ತಾರೆ. ಈ ಕರೆಗೆ ಓಗೊಟ್ಟ ಸೀತಕ್ಕ ಬಂಡಾಯದ ಹೋರಾಟ ಕೈಬಿಡುತ್ತಾರೆ. ಪೊಲೀಸರಿಗೆ ಶರಣಾಗುತ್ತಾರೆ. ಸೀತಕ್ಕ ದಂಪತಿಗೀಗ ಒಬ್ಬ ಪುತ್ರನಿದ್ದಾನೆ.

ಸೀತಕ್ಕನವರ ರಾಜಕೀಯ ಪಯಣ: ಸೀತಕ್ಕ ತೆಲುಗು ದೇಶಂ ಪಕ್ಷದ (ಟಿಡಿಪಿ) ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2001ರಲ್ಲಿ ಹೈದರಾಬಾದ್‌ನಲ್ಲಿ ಎಲ್‌ಎಲ್‌ಬಿ ಪದವಿಗೆ ಸೇರಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ನೀತಿ ಮತ್ತು ಆಡಳಿತದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು. ನಂತರದಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದುಕೊಂಡು ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರರಾದ ನಾಯಕಿಯಾಗಿ ಹೆಸರಾದರು. ಆಂಧ್ರಪ್ರದೇಶದ ಅಂದಿನ ಸಿಎಂ ಚಂದ್ರಬಾಬು ನಾಯ್ಡು 2004ರ ಚುನಾವಣೆಯಲ್ಲಿ ಸೀತಕ್ಕನವರಿಗೆ ಮುಲುಗು ಕ್ಷೇತ್ರದ ಟಿಡಿಪಿ ಟಿಕೆಟ್ ನೀಡಿದರು.

ಸಚಿವೆಯಾದ ಬಳಿಕ ಮೊದಲ ಬಾರಿಗೆ ಸಭೆಯಲ್ಲಿ ಪಾಲ್ಗೊಂಡ ಸೀತಕ್ಕ
ಸಚಿವೆಯಾದ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡ ಸೀತಕ್ಕ

ಟಿಡಿಪಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸೀತಕ್ಕ ಕಾಂಗ್ರೆಸ್ ಅಭ್ಯರ್ಥಿ ಪೊದೆಂ ವೀರಯ್ಯ ವಿರುದ್ಧ ಸೋಲುಡರು. ಆದರೆ, ಹಿಂದೆ ಸರಿಯದೆ ಅದೇ ಕ್ಷೇತ್ರದಿಂದ ಟಿಡಿಪಿ ಪರವಾಗಿ 2009ರ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗ ಅದೇ ಕಾಂಗ್ರೆಸ್ ಅಭ್ಯರ್ಥಿ ವೀರಯ್ಯ ವಿರುದ್ಧ ಗೆದ್ದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2014ರ ಚುನಾವಣೆಯಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ ಟಿಡಿಪಿ ಅಭ್ಯರ್ಥಿಯಾಗಿ ಸತತ ಮೂರನೇ ಬಾರಿಗೆ ಕಣಕ್ಕಿಳಿದರು. ಆಗ ಮುಲುಗು ಕ್ಷೇತ್ರದಲ್ಲಿ ಸೋತರು. ನಂತರ ಸೀತಕ್ಕ ಟಿಡಿಪಿಗೆ ವಿದಾಯ ಹೇಳಿ ಕಾಂಗ್ರೆಸ್​ ಸೇರಿದರು.

2018ರಲ್ಲಿ ನಡೆದ ತೆಲಂಗಾಣ ಉಪಚುನಾವಣೆಯಲ್ಲಿ ಇದೇ ಮುಲುಗು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಭಾರಿ ಬಹುಮತದೊಂದಿಗೆ ಶಾಸಕರಾದರು. 2022ರ ಡಿಸೆಂಬರ್​ನಲ್ಲಿ ತೆಲಂಗಾಣ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ನೇಮಕವಾದರು. ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಅಭ್ಯರ್ಥಿ ಬಡೇ ನಾಗಜ್ಯೋತಿ ಅವರನ್ನು 33,700 ಮತಗಳಿಂದ ಮಣಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿ ನಾಯಕಿಯಾಗಿ ಬೆಳೆದಿರುವ ಸೀತಕ್ಕ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೊತೆಗೂ ನಂಟು ಹೊಂದಿದ್ದಾರೆ. ರಾಹುಲ್ ಗಾಂಧಿ ತಮ್ಮ ತೆಲಂಗಾಣ ಚುನಾವಣಾ ಪ್ರಚಾರವನ್ನು ಮುಲುಗು ಜಿಲ್ಲೆಯಿಂದಲೇ ಪ್ರಾರಂಭಿಸಿದ್ದು ಕೂಡ ಇಲ್ಲಿ ವಿಶೇಷ. ಸೀತಕ್ಕ ಗ್ರಾಮೀಣ ಪಕ್ಷದ ಕಾರ್ಯಕರ್ತರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ.

  • In my childhood I never thought i would be a Naxalite, when I am Naxalite I never thought I would be a lawyer, when I am lawyer I never thought I would be MLA, when I am MLA I never thought I will pursue my PhD.
    🔥Now you can call me Dr Anusuya Seethakka PhD in political science. pic.twitter.com/v8a6qPERDC

    — Danasari Seethakka (@seethakkaMLA) October 11, 2022 " class="align-text-top noRightClick twitterSection" data=" ">

ಡಾ.ಅನುಸೂಯಾ ಸೀತಕ್ಕ: 2022ರ ಅಕ್ಟೋಬರ್​ನಲ್ಲಿ ರಾಜ್ಯಶಾಸ್ತ್ರದಲ್ಲಿ ಪಿಎಚ್​ಡಿ ಪೂರೈಸಿದರು. ಆಗ ಅವರು, ''ನನ್ನ ಬಾಲ್ಯದಲ್ಲಿ ನಕ್ಸಲೈಟ್ ಆಗುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಈಗ ನೀವು ನನ್ನನ್ನು ರಾಜ್ಯಶಾಸ್ತ್ರದಲ್ಲಿ ಡಾ.ಅನುಸೂಯಾ ಸೀತಕ್ಕ ಪಿಎಚ್‌ಡಿ ಎಂದು ಕರೆಯಬಹುದು'' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: ಇದು ಸಂಪೂರ್ಣವಾಗಿ ಮಹಿಳೆಯರೇ ಕೆಲಸ ಮಾಡುವ ಬೈಕ್​ ವರ್ಕ್​ಶಾಪ್!

Last Updated : Dec 7, 2023, 10:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.