ಮುಂಬೈ: ಜನಪ್ರಿಯ ಕಿರುತೆರೆ ಜೋಡಿ, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಅವರ ಹೊಸ ರೊಮ್ಯಾಂಟಿಕ್ ಟ್ರ್ಯಾಕ್, ಶ್ರೇಯಾ ಘೋಷಾಲ್ ಮತ್ತು ಸ್ಟೆಬಿನ್ ಬೆನ್ ಹಾಡಿರುವ 'ಬಾರಿಶ್ ಆಯಿ ಹೈ' ಬಿಡುಗಡೆಯಾಗಿದೆ. ಬಿಗ್ ಬಾಸ್ 15ರ ರನ್ನರ್ - ಅಪ್ ಕರಣ್ ಕುಂದ್ರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಟೀಸರ್ ಹಂಚಿಕೊಂಡಿದ್ದು, 'ಆವೋ, ಪ್ಯಾರ್ ಬರ್ಸಾವೋ! ಬಹಳ ವಿಶೇಷವಾದ ಟ್ರ್ಯಾಕ್ ನಾವು ತೋರಿಸಿರುವ ಪ್ರೀತಿಯನ್ನು ನೀವೆಲ್ಲರೂ ಆನಂದಿಸುತ್ತೀರಿ ಎಂದು ಭಾವಿಸುತ್ತೇವೆ! # @vyrloriginals YouTube ಚಾನೆಲ್‌ನಲ್ಲಿ BaarishAayiHai ಔಟ್ ನೌ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
- " class="align-text-top noRightClick twitterSection" data="
">
ಈ ಬಿಗ್ ಬಾಸ್ ಲವ್ ಬರ್ಡ್ಸ್, ಜನಪ್ರಿಯ ಸ್ಯಾಡ್-ರೊಮ್ಯಾಂಟಿಕ್ ಟ್ರ್ಯಾಕ್ 'ರುಲಾ ದೇತಿ ಹೈ' ನಂತರ ಇದು ಎರಡನೇ ಬಾರಿ ಜೊತೆಯಾಗಿ ಆನ್ಸ್ಕ್ರೀನ್ನಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ. ಅದಷ್ಟೇ ಅಲ್ಲದೆ ಕಿರುತೆರೆ ಕಲಾವಿದರಾದ ಮೊಹ್ಸಿನ್ ಖಾನ್ ಮತ್ತು ಜಾಸ್ಮಿನ್ ಭಾಸಿನ್ ಅವರ ಸೂಪರ್-ಹಿಟ್ ಟ್ರ್ಯಾಕ್ 'ಪ್ಯಾರ್ ಕರ್ತೆ ಹೋ ನಾ' ನಂತರ ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಸ್ಟೆಬಿನ್ ಬೆನ್ ಅವರೂ ಕೂಡ ಈ ಹಾಡಿನ ಮೂಲಕ ಎರಡನೇ ಬಾರಿಗೆ ಜೋಡಿಯಾಗಿ ಹಾಡಿದ್ದಾರೆ.
- " class="align-text-top noRightClick twitterSection" data="">
ಹಾಡಿನ ಕಿರು ಟೀಸರ್ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದು, ಹೃದಯ ಮತ್ತು ಬೆಂಕಿಯ ಎಮೋಜಿಗಳಿಂದ ಶುಭಾಶಯ ಕೋರಿದ್ದಾರೆ. ಒಬ್ಬರು ಕೆಮಿಸ್ಟ್ರಿ ಆಫ್ ತೇಜ್ರಾನ್ ಎಂದು ಮತ್ತೊಬ್ಬ ಅಭಿಮಾನಿ 'ಎಲ್ಲಾ ವೈಬ್ ಅನ್ನು ಪ್ರೀತಿಸುತ್ತಿದ್ದೇನೆ' ಎಂದು ಕಾಮೆಂಟ್ ಮಾಡಿದ್ದಾರೆ.
ಕರಣ್ ಮತ್ತು ತೇಜಸ್ವಿ 'ಬಿಗ್ 15'ರಲ್ಲಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದರು. ನಟಿ ತೇಜಸ್ವಿ ಪ್ರಕಾಶ್ ಬಿಗ್ಬಾಸ್ ಸೀಸನ್ ಟ್ರೋಪಿ ಗೆದ್ದು, ಕರಣ್ ಕುಂದ್ರಾ ಎರಡನೇ ರನ್ನರ್ ಅಪ್ ಆಗಿದ್ದರು. 'ತೇಜ್‌ರಾನ್' ಎಂದೇ ಹೆಸರಾಗಿರುವ ಈ ಜೋಡಿ ಸಾರ್ವಜನಿಕವಾಗಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಕರಣ್ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದೀವಾನೆ ಜೂನಿಯರ್' ಅನ್ನು ಹೋಸ್ಟ್ ಮಾಡುತ್ತಿದ್ದು, ತೇಜಸ್ವಿ ಏಕ್ತಾ ಕಪೂರ್ ಅವರ ಪ್ರಸಿದ್ಧ ದೈನಂದಿನ ಧಾರಾವಾಹಿ ನಾಗಿನ್ 6 ನಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ : ಸಪ್ತಪದಿ ತುಳಿಯೋಕೆ ಸಜ್ಜಾದ ಕ್ರೇಜಿ ಸ್ಟಾರ್ ರವಿಚಂದ್ರನ್ ದೊಡ್ಡ ಮಗ