ಲಖನೌ(ಉತ್ತರಪ್ರದೇಶ): ರಾಜಧಾನಿಯಲ್ಲಿರುವ ಶಿಕ್ಷಕರೊಬ್ಬರಿಗೆ ಪೋಲೆಂಡ್‌ನ ಅಪರಿಚಿತ ವಿದೇಶಿ ಮಹಿಳೆಯೊಬ್ಬರು ಕಳುಹಿಸಿದ ಆಶ್ಚರ್ಯಕರ ಉಡುಗೊರೆಯ ಮೋಡಿ ಎಷ್ಟು ದುಬಾರಿಯಾಗಿದೆ ಎಂದರೆ ಅವರು 3 ಬ್ಯಾಂಕ್‌ಗಳಲ್ಲಿ ಒಂದು ಕೋಟಿ 85 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದಾರೆ. ಇಷ್ಟೆಲ್ಲಾ ಆದರೂ ಆ ಸರ್ಪ್ರೈಸ್ ಗಿಫ್ಟ್ ಅವರಿಗೆ ಸಿಗಲೇ ಇಲ್ಲ. ಈಗ ಬ್ಯಾಂಕ್ ಸಾಲದಿಂದ ನರಳುತ್ತಿರುವ ಶಿಕ್ಷಕರಿಗೆ ಹೈ ಬಿಪಿ, ಶುಗರ್, ಖಿನ್ನತೆಯಂತಹ ಕಾಯಿಲೆಗಳು ಕಾಡುತ್ತಿವೆ. ಗುರುವಾರ ರಾಜಧಾನಿಯ ಮಡೆಗಂಜ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕ ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಮಾಹಿತಿ ಪ್ರಕಾರ: ಇಲ್ಲಿನ ತ್ರಿವೇಣಿ ನಗರದ ನಿವಾಸಿ ನವೀನ್ ಸ್ಯಾಮ್ಯುಯೆಲ್ ಸಿಂಗ್ (53) ಮೊಸಕ್ಕೊಳಗಾದ ಶಿಕ್ಷಕ. ಅವರು ಆಗಸ್ಟ್ 4 ರಂದು ಜಾನ್ ಸ್ಪೆನ್ಸರ್ ಎಂಬುವರಿಂದ ಕರೆ ಸ್ವೀಕರಿಸಿದರು. ಅವರು ತಮ್ಮನ್ನು ವಿಲ್ಟನ್ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಮುಂಬೈನ ನಿರ್ದೇಶಕ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ರಿಕೊ ಬ್ರಾಂಡ್ ವಾಚ್, ನೆಕ್ ಲೇಸ್, ಬಳೆಗಳು, ಜಿ13 ಮೊಬೈಲ್, ಆಪಲ್ ನೋಟ್ ಪ್ಯಾಡ್, ಸುಗಂಧ ದ್ರವ್ಯ, ಟಿ-ಶರ್ಟ್ ಮತ್ತು ಕಂದು ಬಣ್ಣದ ಲಕೋಟೆಯನ್ನು ಶಿಪ್ಪಿಂಗ್ ಲೇಬಲ್ ಹೊಂದಿರುವ ಪಾರ್ಸೆಲ್ ಪೋಲೆಂಡ್‌ನಿಂದ ನಿಮಗಾಗಿ ಬಂದಿದೆ. ಈ ಉಡುಗೊರೆಯನ್ನು ಪಡೆಯಲು 38 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ನವೀನ್ಗೆ ಸ್ಪೆನ್ಸರ್ ತಿಳಿಸಿದರು.
ಪೋಲೆಂಡ್‌ನಲ್ಲಿ ನನ್ನ ಪರಿಚಯಿತರ ಯಾರೂ ವಾಸಿಸುವುದಿಲ್ಲ. ಪಾರ್ಸಲ್ ಕಳುಹಿಸಿದವರು ಯಾರಿರಬಹುದೆಂದು ಕುತೂಹಲ ಮೂಡಿತು. ಬಳಿಕ ಲಾಜಿಸ್ಟಿಕ್ಸ್ ಮುಂಬೈನ ನಿರ್ದೇಶಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ. ಆಗ ಪೋಲೆಂಡ್‌ನಿಂದ ಪಾರ್ಸೆಲ್ ಕಳುಹಿಸಿದ ಫೆಲಿಕ್ಸ್ ವಾರ್ಸಾ ಎಂಬ ಮಹಿಳೆ ಬಗ್ಗೆ ತಿಳಿಯಿತು. ಕೂಡಲೇ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ನಿಮ್ಮ ಕೆಲವು ವಿಡಿಯೋಗಳನ್ನು ನಾನು ನೋಡಿದ್ದೇನೆ. ಅವುಗಳು ನನಗೆ ತುಂಬಾನೇ ಇಷ್ಟವಾಗಿವೆ. ಹೀಗಾಗಿ ನಿಮಗೆ ನಾನು ಇಷ್ಟೊಂದು ಉಡುಗೊರೆ ಕಳುಹಿಸಿದ್ದೇನೆ ಎಂದು ಹೇಳಿದರು.
ಇದನ್ನು ನಂಬಿದ ಶಿಕ್ಷಕ ನವೀನ್ ಲಾಜಿಸ್ಟಿಕ್ಸ್ ವಿಲ್ಟನ್ ಎಕ್ಸ್‌ಪ್ರೆಸ್‌ನ ನಿರ್ದೇಶಕ ಜಾನ್ ಸ್ಪೆನ್ಸರ್‌ಗೆ 38,000 ರೂಪಾಯಿಯನ್ನು ನೀಡಿದ್ದಾರೆ. ಇದಾದ ಬಳಿಕ ಪಾರ್ಸೆಲ್‌ನಲ್ಲಿರುವ ವಸ್ತುಗಳಿಗೆ 1 ಲಕ್ಷ 69 ಸಾವಿರ ಜಿಎಸ್‌ಟಿ, 3,22,000 ಆ್ಯಂಟಿ ಮನಿ ಲಾಂಡರಿಂಗ್ ಮತ್ತು ಪಾರ್ಸೆಲ್‌ನಲ್ಲಿ ಇರಿಸಲಾಗಿದ್ದ 5000 ಪೌಂಡ್‌ಗಳಿಗೆ ಆದಾಯ ತೆರಿಗೆ ಪಾವತಿಸಬೇಕೆಂದು ಜಾನ್ ಹೇಳಿದ್ದಾನೆ.
ಅಷ್ಟೇ ಅಲ್ಲ, ಸ್ಕ್ಯಾನಿಂಗ್ ಸಮಯದಲ್ಲಿ 13,87,500 ಪಾವತಿಸಬೇಕಾಗುತ್ತದೆ. ಇದಕ್ಕೆ ನವೀನ್ ಕೂಡ ಹಣ ಪಾವತಿಸಿದ್ದಾರೆ. ಇದಾದ ಬಳಿಕ ಹಂತಹಂತವಾಗಿ ಬೇರೆ ಬೇರೆ ವಸ್ತುಗಳಿಗೆ ಹಣ ವಸೂಲಿ ಮಾಡಿ ಸುಮಾರು 1 ಕೋಟಿ 85 ಲಕ್ಷದ 62 ಸಾವಿರದ 887 ರೂಪಾಯಿಗಳನ್ನು ಜಾನ್ ಶಿಕ್ಷಕನ ಬಳಿಯಿಂದ ಲೂಟಿ ಮಾಡಿದ್ದಾರೆ.
ಶಿಕ್ಷಕ ನವೀನ್ ಮೂರು ಬ್ಯಾಂಕ್‌ಗಳಲ್ಲಿ ಹಣ ಸಾಲ ಪಡೆದು ಆರೋಪಿಗೆ ಹಂತ-ಹಂತವಾಗಿ ನೀಡಿದ್ದಾರೆ. ಬಳಿಕ ತಾನೂ ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ನವೀನ್ ಸ್ಯಾಮ್ಯುಯೆಲ್ ಸಿಂಗ್ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣದ ಆರೋಪಿಯನ್ನು ಸೈಬರ್ ಸೆಲ್ ಸಹಾಯದಿಂದ ಆದಷ್ಟು ಬೇಗ ಹುಡುಕಲಾಗುತ್ತಿದೆ ಎಂದು ಮಾದೇಗಂಜ್ ಇನ್ಸ್‌ಪೆಕ್ಟರ್ ಅಜಯ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
ಓದಿ: ಮೊಬೈಲ್ ಗೇಮಿಂಗ್ ಹೆಸರಲ್ಲಿ ಸಾವಿರಾರು ಕೋಟಿ ರೂ. ಲೂಟಿ.. ಕೋಡಾ ಪೇಮೆಂಟ್ಸ್ ಮೇಲೆ ಇಡಿ ದಾಳಿ