ಕೃಷ್ಣ (ಆಂಧ್ರಪ್ರದೇಶ): ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಈಗಿನ ಕಾಲದಲ್ಲಿ ಆಂಧ್ರಪ್ರದೇಶದ ಶಿಕ್ಷಕಿಯೊಬ್ಬರು ಆರು ಮಂದಿ ಮಕ್ಕಳಿದ್ದ ಶಾಲೆಗೆ 45 ವಿದ್ಯಾರ್ಥಿಗಳು ಬಂದು ಕಲಿಯುವಂತೆ ಮಾಡಿದ್ದಾರೆ. ಇದಕ್ಕಾಗಿ ಇವರು ಮಾಡಿದ್ದು ಪ್ರತಿಫಲವಿಲ್ಲದ ನಿಸ್ವಾರ್ಥ ಸೇವೆ.
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡುವಾರಿಪಾಲೆಂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಜೆ ಪದ್ಮಾವತಿ ಎಂಬ ಶಿಕ್ಷಕಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ನಲ್ಲಿ ಆರ್‌ಡಿ ಉಳಿತಾಯ ಖಾತೆ ತೆರೆದಿದ್ದಾರೆ. ನಿತ್ಯ ಎಲ್ಲ ಮಕ್ಕಳಿಗೆ ಇವರು ಒಂದು ರೂಪಾಯಿ ಕೊಟ್ಟು, ಪ್ರತಿ ತಿಂಗಳು 30 ರೂ. ಹಣವನ್ನು ಆರ್‌ಡಿ ಖಾತೆಯಲ್ಲಿ ಠೇವಣಿ ಇಡುತ್ತಾರೆ. ಪದ್ಮಾವತಿ ಅವರು ಇದಕ್ಕಾಗಿ ತಮ್ಮ ಶೇ.30ರಷ್ಟು ಸಂಬಳ ಮೀಸಲಿಟ್ಟಿದ್ದಾರೆ.
ಇದನ್ನೂ ಓದಿ: ಇದು IPL ಅಲ್ಲ, PCL: ಇಲ್ಲಿ ಅರ್ಚಕರಿಗಾಗಿ ನಡೆಯತ್ತೆ 'ಪುರೋಹಿತ್ ಕ್ರಿಕೆಟ್ ಲೀಗ್'
ಪದ್ಮಾವತಿ ಟೀಚರ್ ಈ ಸೇವೆ ಆರ್ಥಿಕವಾಗಿ ಹಿಂದುಳಿದ ಜನರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಿದ್ದು, ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಇದೀಗ ಪ್ರೀತಿಯಿಂದ ಇವರನ್ನು ಗ್ರಾಮಸ್ಥರು, ಪೋಷಕರು 'ರೂಪಾಯಿ ಟೀಚರ್' ಎಂದು ಕರೆಯುತ್ತಾರೆ.