ETV Bharat / bharat

ಸರತಿ ಸಾಲಿನಲ್ಲಿ ನಿಲ್ಲುವ ವಿಚಾರ ಶಿಕ್ಷಕ ವಿದ್ಯಾರ್ಥಿ ನಡುವೆ ಹೊಡೆದಾಟ: ಠಾಣೆಯಲ್ಲಿ ದೂರು - ಪ್ರತಿದೂರು - ಹಲ್ಲೆ ಆರೋಪದಡಿ ಶಿಕ್ಷಕನ ವಿರುದ್ದ ದೂರು

ಪ್ರಾರ್ಥನೆ ವೇಳೆ ಗಲಾಟೆ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ. ಪೊಲೀಸ್​ ಠಾಣೆಯಲ್ಲಿ ದೂರು - ಪ್ರತಿದೂರು ದಾಖಲು.

STUDENT SE MARPET
ವಿದ್ಯಾರ್ಥಿ ಥಳಿತ ಪ್ರಕರಣ
author img

By

Published : Sep 1, 2022, 9:28 PM IST

Updated : Sep 1, 2022, 9:34 PM IST

ಸಿಕರ(ರಾಜಸ್ಥಾನ): ಶ್ರೀಮಧೋಪುರ ಶಾಲೆಯೊಂದರಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ನಡುವೆ ಹೊಡಪೆಟ್ಟಾಗಿರುವ ಘಟೆನ ನಡೆದಿದ್ದು, ಎರಡು ಕಡೆಯಿಂದ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿ ಸರತಿ ಸಾಲಿನಲ್ಲಿ ಸರಿಯಾಗಿ ನಿಲ್ಲದ ಕಾರಣ ಶಿಕ್ಷಕ, ವಿದ್ಯಾರ್ಥಿಗೆ ಕಬ್ಬಿಣದ ಪೈಪ್​ನಿಂದ ಹೊಡೆದಿದ್ದು, ಪ್ರತಿಯಾಗಿ ವಿದ್ಯಾರ್ಥಿಯೂ ಶಿಕ್ಷಕನಿಗೆ ಹೊಡೆದಿದ್ದಾನೆ. ಈ ಕುರಿತು ವಿದ್ಯಾರ್ಥಿ ಪೋಷಕರು ಹಲ್ಲೆ ಆರೋಪದಡಿ ಶಿಕ್ಷಕನ ವಿರುದ್ದ ದೂರುನೀಡಿದ್ದು, ಇನ್ನು ವಿದ್ಯಾರ್ಥಿ ವಿರುದ್ದ ಶಿಕ್ಷಕ ಪ್ರತಿ ದೂರು ನೀಡಿದ್ದಾರೆ.

ಈ ಕರಿತು ಪೊಲೀಸರು ವಿದ್ಯಾರ್ಥಿ ಮತ್ತು ಶಿಕ್ಷಕನನ್ನು ವಿಚಾರಣೆ ನಡೆಸಿದ್ದ ವೇಳೆ, ಪ್ರಾರ್ಥನೆ ಸಮಯದಲ್ಲಿ ಸರತಿಸಾಲಿನಲ್ಲಿ ಸರಿಯಾಗಿ ನಿಲ್ಲದ್ದಕ್ಕೆ ಶಿಕ್ಷಕ ಕಬ್ಬಿಣದ ಪೈಪ್​ನಿಂದ ಶಾಲೆ ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳ ಎದುರಿನಲ್ಲಿ ಮನ ಬಂದಂತೆ ಹೊಡೆದಿದ್ದು, ಹೊಟ್ಟೆಗೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.

ಇನ್ನೂ ಶಿಕ್ಷಕ ಪೊಲೀಸ್​ ವಿಚಾರಣೆ ವೇಳೆ, ​ಸರತಿ ಸಾಲಿನಲ್ಲಿ ಸರಿಯಾಗಿ ನಿಲ್ಲುವಂತೆ ವಿದ್ಯಾರ್ಥಿಗೆ ಹೇಳಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೇ ಮೊದಲು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ನನ್ನ ಕನ್ನಡಕ ಮುರಿದು ಹೋಗಿದ್ದು, ಅದಕ್ಕಾಗಿ ವಿದ್ಯಾರ್ಥಿಯನ್ನು ಹೊಡೆದಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು, ಪ್ರತಿದೂರು​ ದಾಖಲಾಗಿದ್ದು, ಡಿಎಸ್ಪಿ ಕನ್ಹಯ್ಯಾಲಾಲ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇನ್ನು ಇತ್ತೀಚೆಗೆ ರಾಜಸ್ಥಾನದ ಜಾಲೋರ್​​ನಲ್ಲಿ, ಮಡಕೆಯಲ್ಲಿದ್ದ ನೀರು ಕುಡಿದ ಕಾರಣಕ್ಕೆ 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕ ಥಳಿಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ನಂತರ ರಾಜ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಭಾರೀ ಚರ್ಚೆಗಳಾಗಿದ್ದವು.

ಈ ಚರ್ಚೆಯಲ್ಲಿ ಶಾಲಾ ಆವರಣದಲ್ಲಿ ಶಿಸ್ತು ಮತ್ತು ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಹೊಡೆಯುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗಾ ಶಿಸ್ತಿನ ವಿಚಾರವಾಗಿಯೇ ಈ ಘಟನೆ ನಡೆದಿದಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವ ಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಮಡಕೆ ನೀರು ಕುಡಿದಿದ್ದಕ್ಕೆ ಶಿಕ್ಷಕನಿಂದ ಥಳಿತಕ್ಕೊಳಗಾದ ಬಾಲಕ ಸಾವು

Last Updated : Sep 1, 2022, 9:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.