ವಾರಾಣಸಿ (ಉತ್ತರ ಪ್ರದೇಶ): ಭಾರತೀಯರಿಗೂ ಚಹಾಕ್ಕೂ ಅವಿನಾಭಾವ ಸಂಬಂಧವಿದೆ. ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಕಪ್ ಚಹಾ ಸೇವಿಸುತ್ತಾನೆ. ಟೀ ಭಾರತೀಯ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ.
ಆದರೆ ನಾವೆಲ್ಲಾ ಚಹಾ ಸಿದ್ಧಪಡಿಸಿದ ನಂತರ ಉಳಿದ ವೇಸ್ಟ್ ಪದಾರ್ಥವನ್ನು (ಟೀ ಫ್ಲಫ್) ಎಸೆಯುತ್ತೇವೆ. ಆದರೆ ಇಲ್ಲೊಬ್ಬ ಯುವತಿ ಟೀ ಮಾಡಿದ ನಂತರ ಉಳಿಯುವ ವ್ಯರ್ಥ ಟೀ ಪುಡಿ ಬಳಸಿಕೊಂಡು ದಾಖಲೆ ನಿರ್ಮಿಸಿದ್ದಾಳೆ.
ಉತ್ತರ ಪ್ರದೇಶದ ವಾರಣಾಸಿಯ ಯುವತಿ ರೋಶಿಣಿ ಯಾದವ್ ಅವರು ಟೀ ಮಾಡಿದ ಉಳಿದ ವೇಸ್ಟ್ ಪದಾರ್ಥವನ್ನು ಬಳಸಿಕೊಂಡು ವಿವಿಧ ಬ್ರಾಂಡ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳ 365 ಲೋಗೋಗಳನ್ನು ರಚಿಸುವ ಮೂಲಕ ಯುರೇಷಿಯಾ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕೋವಿಡ್ ವೇಳೆ ಸಲ್ಲಿಸಿದ ಸೇವೆಗೆ ಗೌರವ ಸೂಚಿಸುವ ಸಲುವಾಗಿ ರೋಶಿಣಿ ಯಾದವ್ 'ಈಟಿವಿ ಭಾರತ'ದ ಲೋಗೋವನ್ನು ರಚಿಸಿದ್ದಾರೆ. ಭದಾಯಿನಿ ಆದರ್ಶ ಶಿಕ್ಷಾ ಮಂದಿರದಲ್ಲಿ ಟೀ ಫ್ಲಫ್ ಬಳಸಿ ಮಾಡಿದ ಲೋಗೋಗಳ ಪ್ರದರ್ಶನವನ್ನು ಪ್ರದರ್ಶಿಸಲಾಗಿತ್ತು.
ಓದಿ: ಉತ್ತರ ಪ್ರದೇಶ ಚುನಾವಣೆ: ಮತದಾರರ ಸೆಳೆಯಲು ಪಕ್ಷೇತರ ಅಭ್ಯರ್ಥಿಯಿಂದ ವಿನೂತನ ಪ್ರಚಾರ!
ಒಂದು ದಿನದ ಪ್ರದರ್ಶನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಕಲಾವಿದೆ ನೇಹಾ ಸಿಂಗ್ ಉದ್ಘಾಟಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ ಮತ್ತು ಇತರ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ವಿಶಿಷ್ಟ ಪ್ರದರ್ಶನವನ್ನು ವೀಕ್ಷಿಸಲು ಆಗಮಿಸಿದ್ದರು.
ಪ್ರದರ್ಶನದ ನಂತರ ಯುರೇಷಿಯಾ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ರಾಜೇಶ್ ಪಣಯಂತ್ತಟ್ಟ ಅವರು ರೋಶಿಣಿ ಯಾದವ್ ಅವರಿಗೆ ಪ್ರಮಾಣಪತ್ರ ನೀಡಿದರು.