ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಇಂದು ಅಧಿಕೃತವಾಗಿ ಟಾಟಾ ಗ್ರೂಪ್ ಸೇರಿಕೊಂಡಿದೆ. ಈ ಮೂಲಕ 69 ವರ್ಷಗಳ ಬಳಿಕ ಮಾತೃಸಂಸ್ಥೆಯ ತೆಕ್ಕೆಗೆ ಮರಳಿದೆ.
ಕಳೆದ 90 ವರ್ಷಗಳ ಹಿಂದೆ ಏರ್ ಇಂಡಿಯಾ ಟಾಟಾ ಗ್ರೂಪ್ನಿಂದ ಆರಂಭಗೊಂಡಿತ್ತು. ಇದರ ಬೆನ್ನಲ್ಲೇ 1953ರಲ್ಲಿ ಇದನ್ನ ರಾಷ್ಟ್ರೀಕರಣಗೊಳಿಸಿದ್ದರಿಂದ ಕೇಂದ್ರ ಸರ್ಕಾರದ ಹಿಡಿತದಲ್ಲಿತ್ತು. ಇದಾದ ಬಳಿಕ ಅಪಾರ ನಷ್ಟ ಅನುಭವಿಸಿದ ಕಾರಣ ಹರಾಜು ಮಾಡಲಾಗಿತ್ತು. ಈ ವೇಳೆ 18,000 ಸಾವಿರ ಕೋಟಿ ರೂ. ಬಿಡ್ ಸಲ್ಲಿಕೆ ಮಾಡಿದ್ದ ಏರ್ ಇಂಡಿಯಾ ಅಧಿಕೃತವಾಗಿ ಇದನ್ನ ಖರೀದಿಸಿತ್ತು.
ಏರ್ ಇಂಡಿಯಾ ಟಾಟಾ ಗ್ರೂಪ್ ಸೇರುವುದಕ್ಕೂ ಮುಂಚಿತವಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಏರ್ ಇಂಡಿಯಾ ಟಾಟಾ ಗ್ರೂಪ್ಗೆ ಹಸ್ತಾಂತರಗೊಂಡಿದೆ.
ಇದನ್ನೂ ಓದಿರಿ: ಹುಡುಗಿ ಜೊತೆ ಓಡಿ ಹೋದ ಮಗ.. ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ತಾಯಿಗೆ ಥಳಿತ!
1932ರಲ್ಲಿ ಟಾಟಾ ಏರ್‌ಲೈನ್ಸ್ ಹೆಸರಿನಲ್ಲಿ ಏರ್ ಇಂಡಿಯಾವನ್ನು ಸ್ಥಾಪಿಸಿದ್ದ ಟಾಟಾ ಗ್ರೂಪ್ 69 ವರ್ಷಗಳ ಬಳಿಕ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
-
Shri N Chandrasekaran, the Chairman of Tata Sons called on PM @narendramodi. @TataCompanies pic.twitter.com/7yP8is5ehw
— PMO India (@PMOIndia) January 27, 2022 " class="align-text-top noRightClick twitterSection" data="
">Shri N Chandrasekaran, the Chairman of Tata Sons called on PM @narendramodi. @TataCompanies pic.twitter.com/7yP8is5ehw
— PMO India (@PMOIndia) January 27, 2022Shri N Chandrasekaran, the Chairman of Tata Sons called on PM @narendramodi. @TataCompanies pic.twitter.com/7yP8is5ehw
— PMO India (@PMOIndia) January 27, 2022
ಏರ್ ಇಂಡಿಯಾ ಇತಿಹಾಸ ಇಂತಿದೆ: 1932ರ ಅಕ್ಟೋಬರ್ನಲ್ಲಿ 'ಟಾಟಾ ಏರ್‌ಲೈನ್ಸ್' ಹೆಸರಿನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಸ್ಥಾಪಿಸಿತ್ತು. 1953 ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನವು ಭಾರಿ ನಷ್ಟ ಅನುಭವಿಸುತ್ತಿತ್ತು. ಏರ್ ಇಂಡಿಯಾ ಸುಮಾರು 43,000 ಕೋಟಿ ರೂ. ಮೊತ್ತದ ಸಾಲ ಉಳಿಸಿಕೊಂಡಿದೆ. ಹೀಗಾಗಿ ಸರ್ಕಾರವು ವಿಮಾನಗಳ ಷೇರು ಮಾರಾಟಕ್ಕೆ ಮುಂದಾಗಿತ್ತು. 2018ರಲ್ಲಿ ಶೇ.76ರಷ್ಟು ಷೇರು ಬಿಡ್ ಮಾಡಲು ಸಿದ್ಧವಿರುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಯಾವ ಸಂಸ್ಥೆಯೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಶೇ.100ರಷ್ಟು ಹಣಕಾಸು ಬಿಡ್ಗೆ ಸರ್ಕಾರ ಘೋಷಣೆ ಮಾಡಿತ್ತು.
ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಲಿಮಿಟೆಡ್ ಸರ್ಕಾರಕ್ಕೆ ಬಿಡ್ ಸಲ್ಲಿಸಿದ್ದವು. ಮಾತೃಸಂಸ್ಥೆ ಟಾಟಾ ಗ್ರೂಪ್ ವಿಜೇತ ಬಿಡ್ಡರ್ ಆಗಿ ಹೊರಹೊಮ್ಮಿತ್ತು. ಜೊತೆಗೆ ಏರ್ ಇಂಡಿಯಾವನ್ನ ಪುನಃ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದ್ದು, ಇದೀಗ ಅಧಿಕೃತವಾಗಿ ಏರ್ ಇಂಡಿಯಾ ಹಸ್ತಾಂತರವಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ