ETV Bharat / bharat

ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಮಾಸಿಕ 1 ಸಾವಿರ ಸಹಾಯಧನ ಘೋಷಿಸಿದ ಡಿಎಂಕೆ ಸರ್ಕಾರ - Tamilnadu Government Scheme for Education of Girls

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತಮಿಳುನಾಡಿನ ಎಂ.ಕೆ.ಸ್ಟಾಲಿನ್​ ನೇತೃತ್ವದ ಡಿಎಂಕೆ ಸರ್ಕಾರ ಹೊಸ ಯೋಜನೆ ರೂಪಿಸಿದೆ.

education
ತಮಿಳುನಾಡು
author img

By

Published : Mar 18, 2022, 9:25 PM IST

ಚೆನ್ನೈ(ತಮಿಳುನಾಡು): ಉನ್ನತ ಶಿಕ್ಷಣದಿಂದ ಹೆಣ್ಣುಮಕ್ಕಳು ವಂಚಿತರಾಗುವುದನ್ನು ತಡೆಯಲು ಮುಂದಾಗಿರುವ ತಮಿಳುನಾಡು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾಸಿಕವಾಗಿ 1 ಸಾವಿರ ರೂಪಾಯಿ ನೀಡುವ ಯೋಜನೆಯನ್ನು ಜಾರಿ ಮಾಡಿದೆ.

ಈ ಬಗ್ಗೆ ವಿಧಾನಸಭೆಗೆ ಮಾಹಿತಿ ನೀಡಿದ ಹಣಕಾಸು ಸಚಿವ ಪಳನಿವೇಲ್​ ತ್ಯಾಗರಾಜನ್​, ರಾಜ್ಯದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಅದರಂತೆ ಪ್ರತಿ ತಿಂಗಳು ವಿದ್ಯಾರ್ಥಿನಿಯರ ಖಾತೆಗೆ 1 ಸಾವಿರ ರೂ. ಸಂದಾಯವಾಗಲಿದೆ. ಇದರಿಂದ ರಾಜ್ಯದ 6 ಲಕ್ಷ ವಿದ್ಯಾರ್ಥಿನಿಯರು ಇದರ ಲಾಭ ಪಡೆಯಲಿದ್ದಾರೆ. ಇದಕ್ಕೆಂದೇ ಬಜೆಟ್​ನಲ್ಲಿ 698 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ತಮ್ಮ 12 ನೇ ತರಗತಿ (ಪದವಿಪೂರ್ವ, ಡಿಪ್ಲೊಮಾ, ಐಟಿಐ ಕೋರ್ಸ್​) ಪೂರ್ಣಗೊಳಿಸುವವರೆಗೆ ಸರ್ಕಾರ ಪ್ರತಿ ತಿಂಗಳು 1 ಸಾವಿರ ರೂಪಾಯಿ ಇತರೆ ಯೋಜನೆಗಳ ಜೊತೆಗೆ ಪಡೆಯಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ದಾಖಲಾತಿ ಇಳಿಕೆ ಕಾಣುತ್ತಿರುವುದನ್ನು ಗುರುತಿಸಿರುವ ಸರ್ಕಾರ ಇದನ್ನು ತಡೆಯಲು ಈಗಿರುವ ಮಾವಲೂರು ರಾಮಾಮೃತಂ ಅಮ್ಮಯ್ಯರ್ ಸ್ಮಾರಕ ವಿವಾಹ ನೆರವು ಯೋಜನೆಯನ್ನು ಮೂವಲೂರು ರಾಮಾಮೃತಂ ಅಮ್ಮಯ್ಯರ್ ಉನ್ನತ ಶಿಕ್ಷಣ ಖಾತ್ರಿ ಯೋಜನೆಯಾಗಿ ಪರಿವರ್ತಿಸಿದೆ.

ಇದನ್ನೂ ಓದಿ: ಅಪರೂಪದ ಚಿಕಿತ್ಸೆ : ಬಾಲಕನ ಎದೆಯೊಳಗಿದ್ದ ಮೊಳೆಯನ್ನು ತೆಗೆದ ವೈದ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.