ETV Bharat / bharat

Tamil Nadu students: ದಲಿತ ಮಹಿಳೆ ತಯಾರಿಸಿದ ಉಪಹಾರ ತಿನ್ನಲು ನಿರಾಕರಿಸಿದ ವಿದ್ಯಾರ್ಥಿಗಳು - ಉಪಹಾರ ತಿನ್ನಲು ನಿರಾಕರಿಸಿದ ವಿದ್ಯಾರ್ಥಿಗಳು

Tamil Nadu students: ತಮಿಳುನಾಡಿನ ಶಾಲೆಯೊಂದರಲ್ಲಿ ದಲಿತ ಮಹಿಳೆಯೊಬ್ಬರು ಬೆಳಗಿನ ಉಪಹಾರ ತಯಾರಿಸಿದ್ದರಿಂದ ಶಾಲೆಯೊಂದರ 15 ವಿದ್ಯಾರ್ಥಿಗಳು ಅದನ್ನು ಸೇವಿಸಲು ನಿರಾಕರಿಸಿದ್ದಾರೆ.

Tamil Nadu students refuse to eat breakfast prepared by Dalit cook

author img

By ETV Bharat Karnataka Team

Published : Sep 6, 2023, 8:12 PM IST

ಚೆನ್ನೈ (ತಮಿಳುನಾಡು): ಬೆಳಗಿನ ಉಪಹಾರ ಯೋಜನೆಯಡಿ ನೀಡಲಾಗುವ ಆಹಾರವನ್ನು ದಲಿತ ಮಹಿಳೆಯೊಬ್ಬರು ತಯಾರಿಸಿದ್ದಾರೆ ಎಂಬ ಕ್ಷುಲ್ಲಕ ಕಾರಣದಿಂದ ಕೆಲವು ಶಾಲಾ ವಿದ್ಯಾರ್ಥಿಗಳು ಬೆಳಗಿನ ಉಪಹಾರವನ್ನೇ ತಿನ್ನಲು ನಿರಾಕರಿಸಿದ ಘಟನೆ ಇಲ್ಲಿನ ಕರೂರ್ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ.

ದಲಿತ ಮಹಿಳೆಯೊಬ್ಬರು ಅಡುಗೆ ಮಾಡಿದ್ದಾರೆ. ಹಾಗಾಗಿ ನಾವು ಆ ಉಪಹಾರ ಸೇವಿಸುವುದಿಲ್ಲ ಎಂದು ಶಾಲೆಯ 15 ವಿದ್ಯಾರ್ಥಿಗಳು ಉಚಿತ ಉಪಹಾರ ಯೋಜನೆಯ ಈ ಪ್ರಯೋಜನ ಪಡೆಯಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಆ ಶಾಲೆಗೆ ಜಿಲ್ಲಾಧಿಕಾರಿ ಟಿ ಪ್ರಭು ಶಂಕರ್ ಎಂಬುವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲಿನ ವಿಷಯ ಅರಿತಿದ್ದಲ್ಲದೇ ಆಯಾ ವಿದ್ಯಾರ್ಥಿಗಳ ಪೋಷಕರಿಗೆ ಮನವರಿಕೆ ಮಾಡಿದ ಜಿಲ್ಲಾಧಿಕಾರಿಗಳು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಂಭಾವ್ಯ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದರು. ಮಂಗಳವಾರ ಬೆಳಗಿನ ಉಪಹಾರ ಯೋಜನೆ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು ಈ ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿದರು.

ಈ ವಿಷಯದ ಬಗ್ಗೆ ಪೋಷಕರನ್ನು ಪ್ರಶ್ನಿಸಿದಾಗ, ದಲಿತರಾದ ಸುಮತಿ ಅವರು ಬೆಳಗಿನ ಉಪಹಾರ ಆಹಾರವನ್ನು ತಯಾರಿಸುತ್ತಿದ್ದಾರೆ. ಅವರು ಅಡುಗೆಯನ್ನು ಮಾಡುವವರೆಗೂ ತಮ್ಮ ಮಗು ಆಹಾರವನ್ನು ಸೇವಿಸುವುದಿಲ್ಲ ಎಂದು ಪೋಷಕರು ಕಡ್ಡಿ ಮುರಿದಂತೆ ಹೇಳಿದರು. ಅಲ್ಲದೇ ಒಂದು ವೇಳೆ ಶಾಲಾ ಆಡಳಿತ ಮಂಡಳಿಯು ತಿನ್ನಲು ಒತ್ತಾಯಿಸಿದರೆ, ತಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆದೊಯ್ಯಲು ಸಿದ್ಧರಿದ್ದೇವೆ ಎಂದು ಸಹ ಪೋಷಕರು ಜಿಲ್ಲಾಧಿಕಾರಿ ಬಳಿ ಹೇಳಿದ್ದಾರೆ.

ಇದನ್ನೂ ಓದಿ: 'ಹಸಿವು ಶಿಕ್ಷಣಕ್ಕೆ ತೊಡಕಾಗಬಾರದು': ಸರ್ಕಾರಿ ಶಾಲೆಗಳಲ್ಲಿಉಪಹಾರ ಯೋಜನೆಗೆ ಸಿಎಂ ಸ್ಟಾಲಿನ್​ ಚಾಲನೆ

ರಾಜ್ಯದ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ 15.75 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಉಪಹಾರ ನೀಡುವ ಯೋಜನೆಯನ್ನು ಇದೇ ಆಗಸ್ಟ್ 25 ರಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ತಮಿಳುನಾಡಿನ ಕರೂರ್ ಜಿಲ್ಲೆಯ ವೇಲನ್ ಚೆಟ್ಟಿಯಾರ್ ಪಂಚಾಯತ್ ಯೂನಿಯನ್ ಶಾಲೆಯಲ್ಲಿ ಓದುತ್ತಿರುವ 30 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಉಪಾಹಾರ ಸೇವಿಸಲು ನಿರಾಕರಿಸಿದ್ದು, ಈ ಕುರಿತು ಜಿಲ್ಲಾಡಳಿತಕ್ಕೆ ದೂರು ಕೂಡ ನೀಡಲಾಗಿದೆ.

ಯೋಜನಾ ನಿರ್ದೇಶಕ ಶ್ರೀನಿವಾಸನ್ ಅವರು ಕೂಡ ಪೋಷಕರ ಬಳಿ ಮಕ್ಕಳಿಗೆ ಆಹಾರವನ್ನು ಸೇವಿಸಲು ಹೇಳುವಂತೆ ಆಯಾ ಮಕ್ಕಳ ಪೋಷಕರಲ್ಲಿ ಮನವಿ ಮಾಡಿದರು. ಅದರೂ, ಪೋಷಕರು ಅವರ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ ಈ ವಿಷಯ ಕಗ್ಗಂಟಾಗಿದೆ.

ಆಗಸ್ಟ್ 30 ರಿಂದ 15 ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ಉಪಹಾರವನ್ನು ಸೇವಿಸುತ್ತಿದ್ದಾರೆ. ಇದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ. ಸದ್ಯ ಜಿಲ್ಲಾಡಳಿತವು ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿ, ಎಲ್ಲರೂ ಉಪಹಾರವನ್ನು ಸೇವಿಸುವಂತೆ ಹೇಳಿದೆ. ಇದನ್ನು ಕೇಳದವರಿಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: ದಾವಣಗೆರೆ: ಚಿಕನ್ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ.. 14 ಮಂದಿ ಜಿಲ್ಲಾಸ್ಪತ್ರೆಗೆ ಶಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.