ತಮಿಳುನಾಡು: ಧಾರಾಕಾರ ಮಳೆಯಿಂದಾಗಿ ತಮಿಳುನಾಡು ತತ್ತರಿಸಿದೆ. ವರುಣನ ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ಟುಟಿಕೋರಿನ್, ತಿರುವಳ್ಳೂರು, ತಿರುನಲ್ವೇಲಿ, ಪುದುಕೊಟ್ಟೈ, ಸೇಲಂ, ತಿರುವಣ್ಣಾಮಲೈ, ಕಡಲೂರು, ವಿಲುಪ್ಪುರಂ, ಅರಿಯಲೂರ್, ರಾಮನಾಥಪುರಂ, ರನ್ನಿಪೆಟ್ಟೈ, ಕಲ್ಲಕ್ಕುರಿಚಿ, ತಂಜೋರ್, ನಾಗಪಟ್ಟಿಣಂ, ತಿರುವಾರೂರ್, ಪೆರಂಬಲೂರ್ ಮತ್ತು ಮೈಲಾಡುತುರೈ ತಿರುಚ್ಚಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಅಧಿಕ ಪ್ರಮಾಣದ ಬೆಳೆ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಮುಳುಗಡೆಯಾಗಿದ್ದರೆ, ಕೆಲವು ಕುಸಿತಗೊಂಡಿವೆ. ರಸ್ತೆಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿವೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಾದ್ಯಂತ ಜಡಿ ಮಳೆಯಾಗಿದೆ. ಇನ್ನು ಸ್ಥಳೀಯ ಅಧಿಕಾರಿಗಳು, ಪೊಲೀಸರು ಮತ್ತು ವಿವಿಧ ಇಲಾಖೆಗಳ ಸರ್ಕಾರಿ ನೌಕರರು ರಸ್ತೆಯಲ್ಲಿರುವ ನೀರನ್ನು ಮೋಟಾರ್ ಸಹಾಯದಿಂದ ಬೇರೆ ಕಡೆಗೆ ವಾಹನದಲ್ಲಿ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆಯಿಂದ ಉಂಟಾಗಿರುವ ಅವಾಂತರಗಳ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.