ಕೊಯಮತ್ತೂರು (ತಮಿಳುನಾಡು): ಕೊಲೆ ಪ್ರಕರಣದ ಆರೋಪಿಯೋರ್ವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಇದೇ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಆರೋಪಿಯು ಕಾಲಿಗೆ ಗುಂಡೇಟು ತಲುಗಿ ಆಸ್ಪತ್ರೆ ಸೇರಿದ್ದಾನೆ.
ಇದನ್ನೂ ಓದಿ: ಗುಂಪುಗಳ ನಡುವೆ ಘರ್ಷಣೆ: ಕೋಲು ಮತ್ತು ರಾಡ್ಗಳಿಂದ ಹಲ್ಲೆ
ಎರಡು ವಾರಗಳ ಹಿಂದೆ ಎರಡು ಗ್ಯಾಂಗ್‌ಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಿಂದ ಸತ್ಯಪಾಂಡಿ ಎಂಬಾತನ ಹತ್ಯೆಗೀಡಾಗಿದ್ದ. ನಂತರ ಪ್ರಕರಣದ ಆರೋಪಿಯಾದ ಸ್ಥಳೀಯ ಗ್ಯಾಂಗ್ಸ್ಟರ್ ಸಂಜಯ್ ರಾಜ್ ಎಂಬಾತ ತಾನೇ ಬಂದು ಚೆನ್ನೈ ಕೋರ್ಟ್‌ಗೆ ಶರಣಾಗತನಾಗಿದ್ದ. ಆಗ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಂಜಯ್‌ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಪೊಲೀಸ್ ವಿಚಾರಣೆಯಲ್ಲಿ ಆರೋಪಿಯು ಹತ್ಯೆ ಬಳಸಿದ ಗನ್ ಅನ್ನು ಅಪರಾಧದ ಸ್ಥಳದಲ್ಲಿ ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದ. ಹೀಗಾಗಿ ಈ ಗನ್ಅನ್ನು ವಶಪಡಿಸಿಕೊಳ್ಳಲು ಮಂಗಳವಾರ ಬೆಳಗ್ಗೆ ಕೊಯಮತ್ತೂರಿನ ಪಾಪನಾಯಕನ್‌ಪಾಳ್ಯಂ ಸಮೀಪದ ಘಟನಾ ಸ್ಥಳಕ್ಕೆ ಆರೋಪಿ ಸಂಜಯ್‌ನನ್ನು ಕರೆ ತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರತ್ತ ಗುಂಡು ಹಾಕಿಸಿದ ಆರೋಪಿ: ಕೊಲೆಯಾದ ಸ್ಥಳದಲ್ಲಿ ಪೊಲೀಸರು ಬಚ್ಚಿಟ್ಟ ಬಂದೂಕನ್ನು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ, ಬಂದೂಕು ಇರುವ ಸ್ಥಳವನ್ನು ಅರಿತುಕೊಂಡ ಆರೋಪಿ ಸಂಜಯ್, ಆ ಬಂದೂಕನ್ನೇ ಕೈಗೆ ತೆಗೆದುಕೊಂಡು ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮೇಳೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಎಸ್ಐ ಮತ್ತು ಯಾವುದೇ ಪೊಲೀಸ್ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ.
ಮತ್ತೊಂದೆಡೆ, ಪೊಲೀಸರು ತಮ್ಮ ಆತ್ಮರಕ್ಷಣೆ ನಿಟ್ಟನಲ್ಲಿ ಪ್ರತಿ ದಾಳಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗ್ಯಾಂಗ್ಸ್ಟರ್ ಸಂಜಯ್ ಎಡಗಾಲಿಗೆ ಗುಂಡು ತಗುಲಿದೆ. ಇದರಿಂದ ಆರೋಪಿ ತನ್ನ ಕೈಯಲ್ಲಿ ಬಂದೂಕು ಕೆಳಗಡೆ ಎಸೆದು ಕುಸಿದು ಬಂದಿದ್ದಾನೆ. ನಂತರ ಆತನನ್ನು ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೈನೀಸ್ ಮಾಡೆಲ್ ಬಂದೂಕುಗಳು: ಆರೋಪಿ ಸಂಜಯ್ ಎರಡು ಚೀನಾದಲ್ಲಿ ನಿರ್ಮಿತ ಗನ್ ಬಂದೂಕುಗಳನ್ನು ಹೊಂದಿದ್ದ. ಚೆನ್ನೈನಲ್ಲಿ ಈಗಾಗಲೇ ಆತನಿಂದ ಒಂದು ಬಂದೂಕು ವಶಪಡಿಸಿಕೊಳ್ಳಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಬಚ್ಚಿಟ್ಟಿದ್ದ ಬಂದೂಕು ಎರಡನೆಯದು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪೊಲೀಸರ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಆರೋಪಿ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಈ ಚೈನೀಸ್ ಮಾಡೆಲ್ ಬಂದೂಕಗಳನ್ನು ಈ ಸ್ಥಳೀಯ ಗ್ಯಾಂಗ್ಸ್ಟರ್ಗೆ ಸಿಕ್ಕಿದ್ದು ಹೇಗೆ?, ಈ ಚೀನಾ ಶಸ್ತ್ರಾಸ್ತ್ರಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆಯೇ?, ಈ ಚೀನಾ ಬಂದೂಕುಗಳನ್ನು ಖರೀದಿಸಿದವರು ಯಾರು ಎಂಬುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸ್ ಕೇಸ್ಗೆ ಹೆದರಿ ತಾಳಿ ಕಟ್ಟಿದವನು ರಿಜಿಸ್ಟರ್ ಮ್ಯಾರೇಜ್ ಮಾಡ್ಕೋ ಎಂದಾಗ ನಾಪತ್ತೆ!