ETV Bharat / bharat

ಚೀನಾದಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಾವು: ಸ್ವಗ್ರಾಮಕ್ಕೆ ಮೃತದೇಹ ತರಲು ಪೋಷಕರ ಪರದಾಟ - ವಿದೇಶಾಂಗ ಸಚಿವಾಲಯ

ಚೀನಾದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಪುದುಕೊಟ್ಟೈನ ವೈದ್ಯಕೀಯ ವಿದ್ಯಾರ್ಥಿ ಮೃತದೇಹವನ್ನು ಸ್ವಗ್ರಾಮಕ್ಕೆ ಕರೆತರಲು ಸಹಾಯ ಮಾಡುವಂತೆ ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರಕ್ಕೆ ಆತನ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿ ಸಾವು
medical student died
author img

By

Published : Jan 2, 2023, 11:32 AM IST

ಪುದುಕೊಟ್ಟೈ (ತಮಿಳುನಾಡು): ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮುಗಿಸಿದ್ದ ತಮಿಳುನಾಡಿನ ವಿದ್ಯಾರ್ಥಿಯೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಆತನ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರ ಸಹಾಯ ಮಾಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಪುದುಕೊಟ್ಟೈನ ಬೋಸ್ ನಗರದಲ್ಲಿ ವಾಸವಿರುವ ಸೈಯದ್ ಅಬುಲ್ ಹಸನ್ ಅವರ ಪುತ್ರ ಶೇಖ್ ಅಬ್ದುಲ್ಲಾ (23) ಮೃತ ವಿದ್ಯಾರ್ಥಿ. ಈತ 2017-18 ರಲ್ಲಿ ಚೀನಾದಲ್ಲಿ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸಿದ್ದನು. ಕಳೆದ ಮೂರು ವರ್ಷಗಳಿಂದ ಕೊರೊನಾ ವೈರಸ್‌ನಿಂದಾಗಿ ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣವನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಿದ್ದಾನೆ. ಬಳಿಕ, ಡಿಸೆಂಬರ್ 11 ರಂದು ವೈದ್ಯಕೀಯ ತರಬೇತಿಗಾಗಿ ಚೀನಾಕ್ಕೆ ಮರಳಿದ್ದ. ಇದಾದ ನಂತರ, ಒಂದು ವಾರದ ಹಿಂದೆ ಶೇಖ್ ಅಬ್ದುಲ್ಲಾ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಆತನಿಗೆ ಹರ್ಬನ್ ಸಿಟಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಆತನ ಪೋಷಕರಿಗೆ ತಿಳಿಸಿತ್ತು.

ಮಗನ ಆರೋಗ್ಯದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಹೇಗಾದರೂ ಮಾಡಿ ನಮ್ಮ ಮಗನನ್ನು ಜೀವಂತವಾಗಿ ಮನೆಗೆ ಕರೆತರಲು ಸಹಾಯ ಮಾಡಿ ಎಂದು ಡಿಸೆಂಬರ್ 26 ರಂದು ಜಿಲ್ಲಾಧಿಕಾರಿಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಕುಟುಂಬಸ್ಥರು ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಚೀನಾ ಸೇರಿ 6 ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್‌ ಕಡ್ಡಾಯ

ಆದ್ರೆ, ಶೇಖ್ ಅಬ್ದುಲ್ಲಾ ಚಿಕಿತ್ಸೆ ಫಲಕಾರಿಯಾಗದೇ ಜನವರಿ 1 ರಂದು ಮೃತಪಟ್ಟಿರುವುದಾಗಿ ಚೀನಾ ವಿಶ್ವವಿದ್ಯಾಲಯದ ಆಡಳಿತವು ಆತನ ಪೋಷಕರಿಗೆ ಮಾಹಿತಿ ನೀಡಿದೆ. ಹೀಗಾಗಿ, ಮಗನ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಪೋಷಕರು ಸಂಕಟ ಪಡುತ್ತಿದ್ದು, ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಚೀನಾದಲ್ಲಿ ಕೋವಿಡ್​ ವೈರಸ್​ ಹೆಚ್ಚಳ: ಇನ್ನೊಂದೆಡೆ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ, ಕೋವಿಡ್​ ಹೊಸ ರೂಪಾಂತರಿ ಬಿಎಫ್​7 ವೈರಾಣು ತಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚೀನಾ ಸೇರಿದಂತೆ ಪ್ರಮುಖ ಆರು ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಎಲ್ಲ ವಿಮಾನ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.