ETV Bharat / bharat

ರಾಜ್ಯಪಾಲ v/s ಸರ್ಕಾರ: ತಮಿಳುನಾಡು ಗವರ್ನರ್​ ವಿರುದ್ಧ ಸಿಎಂ ಸ್ಟಾಲಿನ್​ ಮತ್ತೊಂದು ನಿರ್ಣಯ - ಎರಡನೇ ನಿರ್ಣಯವನ್ನು ಪಾಸ್​

ತಮಿಳುನಾಡು ರಾಜ್ಯಪಾಲರ ವಿರುದ್ಧ ಸಿಎಂ ಸ್ಟಾಲಿನ್ ನೇತೃತ್ವದ ಸರ್ಕಾರ ಎರಡನೇ ನಿರ್ಣಯವನ್ನು ಪಾಸ್​ ಮಾಡಿದೆ. ಗವರ್ನರ್​ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ.

ತಮಿಳುನಾಡು ರಾಜ್ಯಪಾಲರ ವಿರುದ್ಧ ನಿರ್ಣಯ
ತಮಿಳುನಾಡು ರಾಜ್ಯಪಾಲರ ವಿರುದ್ಧ ನಿರ್ಣಯ
author img

By

Published : Apr 10, 2023, 7:57 PM IST

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಹಗ್ಗಜಗ್ಗಾಟ ತೀವ್ರವಾಗಿದೆ. ಸರ್ಕಾರ ರೂಪಿಸಿದ ಶಾಸನಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ, ರಾಜ್ಯ ವಿಧಾನಸಭೆಯಲ್ಲಿ ಸಿಎಂ ಎಂಕೆ ಸ್ಟಾಲಿನ್​ ಸರ್ಕಾರ ನಿರ್ಣಯವೊಂದನ್ನು ಪಾಸು ಮಾಡಿದೆ.

ಸದನವು ಅಂಗೀಕರಿಸಿರುವ ಮಸೂದೆಗಳಿಗೆ ನಿರ್ದಿಷ್ಟ ಅವಧಿಯೊಳಗೆ ರಾಜ್ಯಪಾಲರು ಒಪ್ಪಿಗೆ ನೀಡಬೇಕು. ಇದಕ್ಕಾಗಿ ತಮಿಳುನಾಡು ರಾಜ್ಯಪಾಲರಿಗೆ ಸೂಕ್ತ ನಿರ್ದೇಶನಗಳನ್ನು ತಕ್ಷಣವೇ ಹೊರಡಿಸಿ ಎಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೆ ಆಗ್ರಹಿಸುವ ನಿರ್ಣಯವನ್ನು ಸಿಎಂ ಸ್ಟಾಲಿನ್​ ಅವರು ಇಂದು ಮಂಡಿಸಿದರು. ಇದಕ್ಕೆ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಪರವಾಗಿ ಮತ ಚಲಾಯಿಸಿದರೆ, ಸದನದಲ್ಲಿ ಮಾತನಾಡಲು ತಮಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಎಐಎಡಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು.

ನಿರ್ಣಯ ಮಂಡನೆ ಬಳಿಕ ಮಾತನಾಡಿದ ಸಿಎಂ ಸ್ಟಾಲಿನ್​, ‘ಇದು ನಾನು ರಾಜ್ಯಪಾಲರ ವಿರುದ್ಧ ತರುತ್ತಿರುವ ಎರಡನೇ ನಿರ್ಣಯವಾಗಿದೆ. ರಾಜ್ಯಪಾಲರು ರಾಜಕೀಯ ವ್ಯಕ್ತಿಯಾಗಿರದೇ ಸರ್ಕಾರದ ಪ್ರತಿನಿಧಿಯಾಗಿರಬೇಕು ಎಂದು ಸರ್ಕಾರಿಯಾ ಆಯೋಗವು ಹೇಳಿದೆ. ರಾಜ್ಯಪಾಲರು ರಾಜ್ಯದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಡಾ.ಬಿಆರ್​ ಅಂಬೇಡ್ಕರ್ ಹೇಳಿದ್ದರು. ರಾಜ್ಯಪಾಲರು ಸರ್ಕಾರದ ಮಾರ್ಗದರ್ಶಕರಾಗಿರಬೇಕು ಎಂದು ಸುಪ್ರೀಂಕೋರ್ಟ್​ ತನ್ನ ಹಲವು ತೀರ್ಪುಗಳಲ್ಲಿ ಹೇಳಿದೆ. ಆದರೆ, ತಮಿಳುನಾಡು ರಾಜ್ಯಪಾಲರು ಜನತೆಯ ಮಿತ್ರನಾಗಲು ಸಿದ್ಧರಿಲ್ಲ. ರಾಜ್ಯಪಾಲ ಆರ್.ಎನ್.ರವಿ ಅವರು ಜನರ ಕಲ್ಯಾಣಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಟಾಲಿನ್​ ಇದೇ ವೇಳೆ ಆರೋಪಿಸಿದರು.

ಜನಹಿತ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿದ ಮಸೂದೆಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ, ಖೊಟ್ಟಿ ಮಾಹಿತಿಗಳನ್ನು ನೀಡುತ್ತಿದ್ದಾರೆ. ರಾಜ್ಯಪಾಲ ರವಿ ಅವರು ಮಸೂದೆಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಭಿತ್ತರಿಸುತ್ತಿರುವುದು ಸರ್ಕಾರದ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ನಾವು ರಾಜ್ಯಪಾಲರ ಕಾರ್ಯವೈಖರಿಯನ್ನು ಮಾತ್ರ ಟೀಕಿಸುತ್ತಿದ್ದೇವೆ ಹೊರತು, ಅವರ ವೈಯಕ್ತಿಕ ಜೀವನವನ್ನು ಪ್ರಶ್ನಿಸುತ್ತಿಲ್ಲ. ವಿಧಾನಸಭೆ ಕಲಾಪಗಳಿಗೆ ಅಡ್ಡಿಯುಂಟಾದರೆ ನಾವು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ರಾಜ್ಯಪಾಲರು ತನ್ನಿಚ್ಛೆಯಂತೆ ಮಸೂದೆಗಳನ್ನು ತಡೆಯುತ್ತಿದ್ದಾರೆ ಮತ್ತು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ನಾವು ಯಾರನ್ನೂ ಮೆಚ್ಚಿಸಲು ಮಸೂದೆಗಳನ್ನು ತರುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ರೂಪಿಸಿದ ಮಸೂದೆಗಳನ್ನು ತಡೆಹಿಡಿಯುವ ಮತ್ತು ತಿರಸ್ಕರಿಸುವ ಅಧಿಕಾರವನ್ನು ಸಂವಿಧಾನ ಅವರಿಗೆ ದಯಪಾಲಿಸಿದೆ. ಆದರೆ, ಅದು ಸಕಾರಣವಾಗಿರಬೇಕು. ನಮ್ಮ ರಾಜ್ಯಪಾಲರು ಬಿಲ್​ ಅನ್ನು ತಡೆದು ಬಳಿಕ ಅದಕ್ಕೆ ನೀಡಿದ ಸಮರ್ಥನೆಯ ಭಾಷೆ ಸರಿಯಿಲ್ಲ. ಬಿಲ್​ ಸತ್ತಿದೆ ಎಂದು ಹೇಳಿದರೆ ಏನು ಅರ್ಥ. ಮಸೂದೆಯನ್ನು ತಿರಸ್ಕರಿಸಲು ಬಳಸುವ ಯೋಗ್ಯ ಭಾಷೆ ಇದಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಆನ್‌ಲೈನ್ ಜೂಜನ್ನು ನಿಷೇಧಿಸುವ ಮಸೂದೆಯನ್ನು ಶಾಸಕಾಂಗ ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿತ್ತು. ಆದರೆ, ಎನ್​ ರವಿ ಅವರು 4 ತಿಂಗಳು ಮಸೂದೆಯನ್ನು ತಡೆದು ಬಳಿಕ ತಿರಸ್ಕರಿಸಿದ್ದರು. ಇದು ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ಕಿತ್ತಾಟಕ್ಕೆ ನಾಂದಿ ಹಾಡಿದೆ. ಇದಾದ ಬಳಿಕ ಮಸೂದೆಯನ್ನು ತಡೆಯಲಾಗಿದೆ ಎಂದರೆ ಅದು ಅಂತಹ ಬಿಲ್​ ಸತ್ತಿದೆ ಎಂದರ್ಥ ಎಂದು ರಾಜ್ಯಪಾಲರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಈವರೆಗೂ ಸ್ಟಾಲಿನ್​ ಸರ್ಕಾರ ರೂಪಿಸಿದ 14 ಮಸೂದೆಗಳನ್ನು ರಾಜ್ಯಪಾಲರ ರವಿ ಅವರು ತಡೆದಿದ್ದಾರೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಓದಿ: ಭಾರತದ 84 ಸ್ಟಾರ್ಟಪ್​ಗಳಲ್ಲಿ 24,250 ಉದ್ಯೋಗ ಕಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.