ಕೊಯಮತ್ತೂರು(ತಮಿಳುನಾಡು): ಲೈಂಗಿಕ ಆಸೆಗೋಸ್ಕರ ವ್ಯಕ್ತಿಯೊಬ್ಬ ತೃತೀಯ ಲಿಂಗಿಗಳ ಬಳಿ ತೆರಳಿದ್ದು, ಈ ವೇಳೆ, ವಾಗ್ವಾದ ನಡೆದು, ಆತನನ್ನ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ ತೃತೀಯ ಲಿಂಗಿಗಳಾದ ರೋಸ್ಮಿಕಾ, ಮಮತಾ, ಗೌತಮಿ, ಹರ್ನಿಕಾ, ರೂಬಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಯಮತ್ತೂರಿನ ದುಡಿಯಲೂರಿನ ಹೋಟೆಲ್ ಕಾರ್ಮಿಕನಾಗಿದ್ದ ಧರ್ಮಲಿಂಗಂ(49) ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೋಸ್ಕರ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ, ತಾನು ಬೈಕ್ನಿಂದ ಬಿದ್ದಿರುವುದಾಗಿ ವೈದ್ಯರ ಮುಂದೆ ಹೇಳಿಕೊಂಡಿದ್ದಾನೆ. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಅದನ್ನ ನಂಬದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಬಂದ ಪೊಲೀಸರು ಧರ್ಮಲಿಂಗಂನನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಟ್ರಾನ್ಸ್ಜೆಂಡರ್ಗಳು ಹಲ್ಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿರಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ.. ಸಂತ್ರಸ್ತೆ ಕಾಲಿನ ಮೇಲೆ ಬೈಕ್ ಹತ್ತಿಸಿದ ಕಾಮುಕರು
ತಮಿಳುನಾಡಿನ ಮೆಟ್ಟುಪಾಳ್ಯಂ ರಸ್ತೆಯಲ್ಲಿ ತೃಂತೀಯ ಲಿಂಗಿಗಳು ಲೈಂಗಿಕ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಧರ್ಮಲಿಂಗಂ ತನ್ನ ಸ್ನೇಹಿತ ಪ್ರವೀಣ್ ಜೊತೆ ರಾತ್ರಿ ವೇಳೆ ಅಲ್ಲಿಗೆ ತೆರಳಿದ್ದಾನೆ. ಈ ವೇಳೆ ಟ್ರಾನ್ಸ್ಜೆಂಡರ್ ಜೊತೆ ಮಾತುಕತೆ ನಡೆಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆ ಉಂಟಾಗಿದೆ.
ಈ ವೇಳೆ, ತೃತೀಯಲಿಂಗಿ ಕಿರುಚಾಡಿದ್ದಾಳೆ. ತಕ್ಷಣವೇ ಅಕ್ಕಪಕ್ಕದಲ್ಲಿದ್ದ ಇತರೆ ಟ್ರಾನ್ಸ್ಜಂಡರ್ಗಳಾದ ಮಮತಾ, ಗೌತಮಿ, ಹಾರ್ನಿಕಾ, ರೂಬಿ, ಕೀರ್ತಿ ಅಲ್ಲಿಗೆ ಆಗಮಿದ್ದಾರೆ. ಜೊತೆಗೆ ಧರ್ಮಲಿಂಗಂ ಹಾಗೂ ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಪ್ರವೀಣ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಧರ್ಮಲಿಂಗಂ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಅಲ್ಲಿಂದ ಮಂಗಳಮುಖಿಯರು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆತ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ಆಗಮಿಸಿದ್ದಾನೆ.
ಧರ್ಮಲಿಂಗಂ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗೋಸ್ಕರ ಬಲೆ ಬೀಸಿದ್ದಾರೆ. ಈಗಾಗಲೇ ಐವರ ಬಂಧನ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಕೆಲವರಿಗೋಸ್ಕರ ಬಲೆ ಬೀಸಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಧರ್ಮಲಿಂಗಂ ನಿನ್ನೆ ಸಾವನ್ನಪ್ಪಿದ್ದಾನೆ.