ETV Bharat / bharat

ಸ್ವಂತ ಮನೆಗೆ ಹೋಗಲು ದಾರಿಯಿಲ್ಲ.. ಹೆಲಿಕಾಪ್ಟರ್​ನಲ್ಲಿ ತೆರಳಲು ಅನುಮತಿ ಕೋರಿ ರೈತ ಮನವಿ

ತನ್ನ ಸ್ವಂತ ಮನೆಗೆ ಹೋಗುವ ದಾರೀನಾ ಅಕ್ಕಪಕ್ಕದವರು ಮುಚ್ಚಿದ್ದು, ಮನೆಗೆ ಹೋಗಲು ದಾರಿಯಿಲ್ಲದಾಗಿದೆ. ಹೆಲಿಕಾಪ್ಟರ್​ ಮೂಲಕ ಮನೆಗೆ ಹೋಗಲು ಅನುಮತಿ ನೀಡಬೇಕು ಎಂದು ತಮಿಳುನಾಡಿನ ರೈತನೋರ್ವ ವಿಭಿನ್ನವಾಗಿ ಮನವಿ ಮಾಡಿಕೊಂಡಿದ್ದಾರೆ.

A Tamil Nadu farmer appealed to District Collector
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ತಮಿಳುನಾಡು ರೈತ
author img

By

Published : Dec 13, 2022, 9:53 AM IST

Updated : Dec 13, 2022, 12:20 PM IST

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ತಮಿಳುನಾಡು ರೈತ

ಧರ್ಮಪುರಿ (ತಮಿಳುನಾಡು): ನೆರೆಹೊರೆಯವರು ಮನೆಗೆ ತೆರಳಲು ಅಡ್ಡಿಪಡಿಸಿದ್ದರಿಂದ ಬೇಸತ್ತು ಹೆಲಿಕಾಪ್ಟರ್‌ನಲ್ಲಿ ಮನೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ರೈತರೊಬ್ಬರು ಸೋಮವಾರ ಧರ್ಮಪುರಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.

ಧರ್ಮಪುರಿ ಜಿಲ್ಲೆಯ ಅಗ್ರಹಾರಂನ ರೈತ ಗಣೇಶನ್ (57) ಎಂಬುವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆತೆರಳಿದ್ದರು. ಒಬ್ಬರು ಆಟಿಕೆ ಹೆಲಿಕಾಪ್ಟರ್ ಮತ್ತು ಇನ್ನೊಬ್ಬರು ಹೆಲಿಕಾಪ್ಟರ್ ಚಿತ್ರವನ್ನು ಹಿಡಿದುಕೊಂಡು ವಿಭಿನ್ನವಾಗಿ ಮನವಿ ಮಾಡಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಗಣೇಶನ್, ‘ನನ್ನ ಮನೆಗೆ ಹೋಗಲು ವರ್ಷಗಳಿಂದ ಬಳಸುತ್ತಿದ್ದ ರಸ್ತೆಯಲ್ಲಿ ಹೋಗದಂತೆ ನನ್ನ ಮನೆ ಸಮೀಪದ ಜನರು ತಡೆದಿದ್ದಾರೆ. ಇದಲ್ಲದೆ ನಾಲ್ಕು ಕಡೆ ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದಾಗಿ ನಾನು, ನನ್ನ ಸ್ವಂತ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಮನೆಗೆ ಹೋಗಲು ಯಾವುದೇ ಆಯ್ಕೆಯಿಲ್ಲದೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ' ಎಂದು ತಮ್ಮ ನೋವನ್ನು ತೋಡಿಕೊಂಡರು.

ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನನ್ನ ಸ್ವಂತ ಮನೆಗೆ ಹೋಗಲು ನನಗೆ ದಾರಿ ಇಲ್ಲ. ಹಾಗಾಗಿ ಹೆಲಿಕಾಪ್ಟರ್ ಮೂಲಕ ಹೋಗುವುದು ಒಂದೇ ಆಯ್ಕೆಯಾಗಿದೆ. ಜಿಲ್ಲಾಡಳಿತ ಅದಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹುತಾತ್ಮ ಯೋಧನ ಸ್ಮಾರಕಕ್ಕೂ ಸಂಚಕಾರ ಆರೋಪ.. ನೆಮ್ಮದಿ ಕಳೆದುಕೊಂಡ ಕುಟುಂಬ

Last Updated : Dec 13, 2022, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.