ಕಡಲೂರು(ತಮಿಳುನಾಡು): ಮೊಸಳೆಯೊಂದು 18 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಲಿ ಪಡೆದ ಘಟನೆ ಚಿದಂಬರಂ ಬಳಿಯ ಉತ್ತರ ವೆಲಕುಡಿ ಗ್ರಾಮದಲ್ಲಿ ನಡೆದಿದೆ. ವೆಲಕುಡಿ ಗ್ರಾಮದ ತಿರುಮಲೈ ತನ್ನ ಸ್ನೇಹಿತರಾದ ವಿಷ್ಣು ಮತ್ತು ಪಳನಿವೇಲ್ ಅವರೊಂದಿಗೆ ಶನಿವಾರ ಸ್ನಾನಕ್ಕೆಂದು ಹಳೇ ಕೊಳ್ಳಿಡಂ ನದಿಗೆ ತೆರಳಿದ್ದರು. ಅಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನದಿಯಲ್ಲೇ ಇದ್ದ ಮೊಸಳೆ ತಿರುಮಲನನ್ನು ಏಕಾಏಕಿ ಎಳೆದೊಯ್ದಿದೆ ತಿಂದುಹಾಕಿದೆ.
ತಕ್ಷಣವೇ ಅವನ ಸ್ನೇಹಿತರು ಗಾಬರಿಯಿಂದ ದಡಕ್ಕೆ ಮರಳಿದ್ದಾರೆ. ವಿಷಯವನ್ನು ಕೂಡಲೇ ಚಿದಂಬರಂ ಅಗ್ನಿಶಾಮಕ ದಳಕ್ಕೆ ನೀಡಲಾಗಿದೆ. ಮಾಹಿತಿ ಆಧರಿಸಿ ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಚಿದಂಬರಂ ಜಿಲ್ಲಾಧಿಕಾರಿ ಹರಿದಾಸ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಘುಪತಿ ಅವರು ಘಟನೆ ನಡೆದ ಸ್ಥಳಕ್ಕಾಗಮಿಸಿ ಶೋಧ ಕಾರ್ಯದಲ್ಲಿ ಪಾಲ್ಗೊಂಡರು.
ಸತತ ಎರಡು ಗಂಟೆಗಳ ಕಾಲ ಆತನ ಶವಕ್ಕಾಗಿ ಹುಡುಕಾಟ ನಡೆಸಿದ ಅರಣ್ಯ ಇಲಾಖೆ ತಿರುಮಲನ ಶವವನ್ನು ಪತ್ತೆ ಮಾಡಿ ಅಲ್ಲಿನ ಪೊದೆಯಿಂದ ಹೊರತೆಗೆದಿದೆ. ನಂತರ ಚಿದಂಬರಂ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಸಾಗಿಸಲಾಗಿದೆ.
ಮಾಹಿತಿ ಪ್ರಕಾರ, ಈ ಘಟನೆ ನಡೆದ ವೆಲಕುಡಿ ಕೊಳ್ಳಿಡಂ ನದಿಯಲ್ಲಿ ಸಾಕಷ್ಟು ಮೊಸಳೆಗಳಿವೆ. ಇಲ್ಲಿನ ಮೊಸಳೆಗಳು ಹೆಚ್ಚಾಗಿ ನದಿಯ ಬಳಿ ಆಡು, ಹಸುಗಳನ್ನು ಕಚ್ಚಿ ಎಳೆದುಕೊಂಡು ಹೋಗುತ್ತವೆ. ಆದರೆ ಈ ಬಾರಿ ಮೊಸಳೆ ಯುವಕನನ್ನೇ ಬಲಿ ಪಡೆದಿರುವುದು ಬೇಸರದ ಸಂಗತಿ.
ಇದನ್ನೂ ಓದಿ:ವೆಡ್ಡಿಂಗ್ ಫೋಟೋ ಶೂಟ್ನಿಂದ ರೊಚ್ಚಿಗೆದ್ದ ಗಜರಾಜ.. ಕಾವಾಡಿಗನ ಮೇಲೆ ಆನೆ ದಾಳಿ