ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಪತ್ನಿ ದುರ್ಗಾವತಿ ಸ್ಟಾಲಿನ್ ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸ್ಟಾಲಿನ್, ಮೊದಲ ಬಾರಿಗೆ ಮೈತ್ರಿಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ನೂತನ ಸರ್ಕಾರದ ಯೋಜನೆಗಳು ಮತ್ತು ಪಾಲಿಸಿಗಳ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.
-
Congress President Smt. Sonia Gandhi and I had the pleasure of meeting Tamil Nadu Chief Minister, Shri M. K. Stalin and Smt. Durgavathy Stalin earlier today.
— Rahul Gandhi (@RahulGandhi) June 18, 2021 " class="align-text-top noRightClick twitterSection" data="
We will keep working with the DMK to build a strong & prosperous state for the Tamil people. pic.twitter.com/ES9FylkVRh
">Congress President Smt. Sonia Gandhi and I had the pleasure of meeting Tamil Nadu Chief Minister, Shri M. K. Stalin and Smt. Durgavathy Stalin earlier today.
— Rahul Gandhi (@RahulGandhi) June 18, 2021
We will keep working with the DMK to build a strong & prosperous state for the Tamil people. pic.twitter.com/ES9FylkVRhCongress President Smt. Sonia Gandhi and I had the pleasure of meeting Tamil Nadu Chief Minister, Shri M. K. Stalin and Smt. Durgavathy Stalin earlier today.
— Rahul Gandhi (@RahulGandhi) June 18, 2021
We will keep working with the DMK to build a strong & prosperous state for the Tamil people. pic.twitter.com/ES9FylkVRh
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಾನು, ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ಅವರ ಪತ್ನಿ ದುರ್ಗಾವತಿ ಸ್ಟಾಲಿನ್ ಅವರನ್ನು ಇಂದು ಬೆಳಗ್ಗೆ ಹೃತ್ಪೂರ್ವಕವಾಗಿ ಬರಮಾಡಿಕೊಂಡೆವು ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ತಮಿಳುನಾಡಿನ ಜನತೆಗಾಗಿ ಡಿಎಂಕೆ ಜೊತೆಗೆ ಅತ್ಯಂತ ಬಾಂಧವ್ಯದಿಂದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಪಿಎಂ ತಮ್ಮ ತಪ್ಪು ಒಪ್ಪಿಕೊಂಡು, ಭಾರತ ಮರು ನಿರ್ಮಾಣಕ್ಕಾಗಿ ತಜ್ಞರ ಸಹಾಯ ಪಡೆಯಲಿ: ರಾಗಾ
ಸ್ಟಾಲಿನ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಪ್ರಸ್ತುತ ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚಿಸಿದ್ದರು. ಅಲ್ಲದೆ ವ್ಯಾಕ್ಸಿನ್ ಹಾಗೂ ಔಷಧಿಗಳನ್ನು ಪೂರೈಸಬೇಕಾಗಿ ಮನವಿ ಮಾಡಿದ್ದರು.