ETV Bharat / bharat

'ಹಸಿವು ಶಿಕ್ಷಣಕ್ಕೆ ತೊಡಕಾಗಬಾರದು': ಸರ್ಕಾರಿ ಶಾಲೆಗಳಲ್ಲಿಉಪಹಾರ ಯೋಜನೆಗೆ ಸಿಎಂ ಸ್ಟಾಲಿನ್​ ಚಾಲನೆ - ಈಟಿವಿ ಭಾರತ ಕನ್ನಡ

CM Stalin launches second phase of breakfast scheme: ಇಂದು ತಮಿಳುನಾಡು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸಿಎಂ ಉಪಹಾರ ಯೋಜನೆಯ ಎರಡನೇ ಹಂತಕ್ಕೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಚಾಲನೆ ನೀಡಿದರು.

Tamil Nadu CM Stalin l
ಸಿಎಂ ಸ್ಟಾಲಿನ್​
author img

By ETV Bharat Karnataka Team

Published : Aug 25, 2023, 12:47 PM IST

Updated : Aug 25, 2023, 1:38 PM IST

ನಾಗಪಟ್ಟಿಣಂ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು​ ಶುಕ್ರವಾರ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸಿಎಂ ಉಪಹಾರ ಯೋಜನೆಯ (breakfast scheme) ಎರಡನೇ ಹಂತಕ್ಕೆ ಚಾಲನೆ ನೀಡಿದರು. ನಾಗಪಟ್ಟಿಣಂ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ತಿರುಕ್ಕುವಲೈನ ಪಂಚಾಯತ್​ ಯೂನಿಯನ್​ ಮಿಡ್ಲ್​ ಸ್ಕೂಲ್​ನ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು. ಬಳಿಕ ಮಕ್ಕಳಿಗೆ ಚಾಕಲೇಟ್​ ವಿತರಿಸಿದರು.

ಬಳಿಕ ಮಾತನಾಡಿದ ಸಿಎಂ ಸ್ಟಾಲಿನ್​, "ಇಂದು ಅತ್ಯುತ್ತಮ ದಿನ ಎಂದು ನಾನು ನಂಬುತ್ತೇನೆ. ಈ ಉಪಹಾರ ಯೋಜನೆಯನ್ನು ಇಲ್ಲಿ ಪರಿಚಯಿಸಲು ತುಂಬಾ ಹೆಮ್ಮೆ ಪಡುತ್ತೇನೆ. ದಿವಂಗತ ಕರುಣಾನಿಧಿ (ತಮಿಳುನಾಡು ಮಾಜಿ ಮುಖ್ಯಮಂತ್ರಿ) ಅವರು ಸಾಕಷ್ಟು ಯೋಜನೆಗಳನ್ನು ತಿರುಕ್ಕುವಲೈ ಜನರಿಗೆ ಪರಿಚಯಿಸಿದ್ದಾರೆ ಮತ್ತು ನೀವು ಅದರ ಪ್ರಯೋಜನ ಪಡೆದುಕೊಂಡಿದ್ದೀರಿ. ಕರುಣಾನಿಧಿ ಅವರ ಪುತ್ರನಾಗಿ ಈ ಯೋಜನೆಯನ್ನು ಇಲ್ಲಿ ಪ್ರಾರಂಭಿಸಿಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ" ಎಂದು ಹೇಳಿದರು.

ಹಸಿವು ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. "ಶಿಕ್ಷಣಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಅದನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನ ಹರಿಸಬೇಕು. ಹಸಿವಿನಿಂದ ಯಾರೂ ವಿದ್ಯಾಭ್ಯಾಸ ತಪ್ಪಿಸಿಕೊಳ್ಳಬಾರದು. ಅದಕ್ಕಾಗಿಯೇ ನಮ್ಮ ಸರ್ಕಾರ ಈ ಯೋಜನೆಗೆ ಹಣ ಮಂಜೂರು ಮಾಡಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಇದು ಖಂಡಿತ ಪ್ರಯೋಜನಕಾರಿಯಾಗಿದೆ" ಎಂದರು.

ನಿಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳಿ- ಮನವಿ: ಬಳಿಕ ಶಾಲೆಯ ಅಧಿಕಾರಿಗಳು ಮತ್ತು ಅಡುಗೆ ತಯಾರಿಸುವವರಲ್ಲಿ, ನಿಮ್ಮ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳುತ್ತೀರೋ, ಹಾಗೆಯೇ ಶಾಲಾ ಮಕ್ಕಳನ್ನು ನೋಡಿಕೊಳ್ಳಿ ಎಂದು ಸಿಎಂ ಮನವಿ ಮಾಡಿದರು. "ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ, ನೀಟ್​ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಗಾಲು ಹಾಕುವ ವಿಶ್ವಾಸಘಾತುಕ ಆಡಳಿತಗಾರರಿದ್ದಾರೆ. ಶಾಲೆಯ ಅಧಿಕಾರಿಗಳು ಮತ್ತು ಅಡುಗೆ ತಯಾರಿಸುವವರಲ್ಲಿ ವಿನಮ್ರ ವಿನಂತಿ. ನೀವು ಮನೆಯಲ್ಲಿ ನಿಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರೋ, ಹಾಗೆಯೇ ಇಲ್ಲಿನ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು" ಎಂದು ಕೇಳಿಕೊಂಡರು.

ಮುಂದಿನ ವಾರ ಮಹಿಳಾ ಕಲ್ಯಾಣಕ್ಕಾಗಿ ಯೋಜನೆ - ಭರವಸೆ: ಮುಂದಿನ ವಾರ ಮಾಜಿ ಸಿಎಂ ಅಣ್ಣಾದೊರೈ ಅವರ ಜನ್ಮದಿನವಿದ್ದು, ಆ ದಿನದಂದು ಮಹಿಳಾ ಕಲ್ಯಾಣಕ್ಕಾಗಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಎಂ.ಕೆ ಸ್ಟಾಲಿನ್​ ಇದೇ ವೇಳೆ ಘೋಷಿಸಿದರು. ರಾಜ್ಯಾದ್ಯಂತ ಸಿಎಂ ಉಪಹಾರ ಯೋಜನೆಗೆ ಚಾಲನೆ ನೀಡಿದ ನಂತರ ರಾಜ್ಯದ ಸಚಿವರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಯೋಜನೆ ಉದ್ಘಾಟಿಸಿದರು.

ತಮಿಳುನಾಡು ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್​, ತಮಿಳುನಾಡು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್​ ಮತ್ತು ಮಾನವ ಸಂಪನ್ಮೂಲ ಹಾಗೂ ಸಿಇ ಸಚಿವ ಸೇಕರ್​ ಬಾಬು ಅವರು ತಮ್ಮ ಕ್ಷೇತ್ರಗಳಲ್ಲಿರುವ ಚೆನ್ನೈ ಕಾರ್ಪೋರೇಷನ್​ ಶಾಲೆಗಳಲ್ಲಿ ಯೋಜನೆಯ ವಿಸ್ತರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಉದಯನಿಧಿ ಸ್ಟಾಲಿನ್​, "ಹಾಜರಾತಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವಂತೆ ಪ್ರೋತ್ಸಾಹಿಸಲು ಮತ್ತು ಯಾವುದೇ ವಿದ್ಯಾರ್ಥಿಯು ಹಸಿವಿನಿಂದ ತರಗತಿಗೆ ಹಾಜರಾಗಬಾರದು ಎಂಬ ಉದ್ದೇಶದಿಂದ ಬೆಳಗಿನ ಉಪಹಾರ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆ ಜಾರಿಗೆ ಬಂದ ನಂತರ ಶಾಲಾ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಈ ಯೋಜನೆಯನ್ನು ಸುಮಾರು 31,000 ಶಾಲೆಗಳಿಗೆ ವಿಸ್ತರಿಸಲಾಗಿದೆ. ಇದರಿಂದಾಗಿ 18,50,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಚೆನ್ನೈ ಕಾರ್ಪೋರೇಷನ್​ನ 358 ಶಾಲೆಗಳಲ್ಲಿ ಕಲಿಯುತ್ತಿರುವ 65,030 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ" ಎಂದು ತಿಳಿಸಿದರು.

ಸಿಎಂ ಉಪಹಾರ ಯೋಜನೆಯನ್ನು ಕಳೆದ ವರ್ಷ ಸೆಪ್ಟಂಬರ್​ ತಿಂಗಳಲ್ಲಿ ಪರಿಚಯಿಸಲಾಯಿತು. ಇದು ವಿದ್ಯಾರ್ಥಿಗಳ ಅಪೌಷ್ಟಿಕತೆಯ ಸಮಸ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆರಂಭದಲ್ಲಿ ಒಂದರಿಂದ ಐದನೇ ತರಗತಿಯಲ್ಲಿ ಓದುತ್ತಿರುವ ಒಂದು ಲಕ್ಷಕ್ಕೂ ಅಧಿಕ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಉಪಹಾರ ನೀಡುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಯಿತು. ಅಧಿಕಾರಗಳ ಪ್ರಕಾರ, ರಾಜ್ಯಾದ್ಯಂತ ವಿಸ್ತರಿಸಿರುವ ಈ ಯೋಜನೆಯಿಂದ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. (ANI)

ಇದನ್ನೂ ಓದಿ: ವಿಶ್ವ ಚೆಸ್​ ಚಾಂಪಿಯನ್​ಶಿಪ್​: ಪ್ರಜ್ಞಾನಂದಗೆ ವಿಡಿಯೋ ಕಾಲ್​ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಂ ಸ್ಟಾಲಿನ್​

Last Updated : Aug 25, 2023, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.