ETV Bharat / bharat

Covid 3ನೇ ಅಲೆ ನಿಭಾಯಿಸಲು 100 ಕೋಟಿ ರೂ. ರಿಲೀಸ್​ ಮಾಡಿದ ಸ್ಟಾಲಿನ್​

ದೇಶದಲ್ಲಿ ಮೂರನೇ ಹಂತದ ಕೋವಿಡ್ ಅಲೆ ಬರಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿರುವ ತಮಿಳುನಾಡು ಸರ್ಕಾರ 100ಕೋಟಿ ರೂ. ರಿಲೀಸ್ ಮಾಡಿದೆ.

Tamil Nadu CM Stalin
Tamil Nadu CM Stalin
author img

By

Published : Jun 29, 2021, 7:35 PM IST

ಚೆನ್ನೈ(ತಮಿಳುನಾಡು): ದೇಶಾದ್ಯಂತ ಹೆಚ್ಚು ಆತಂಕ ಮೂಡಿಸಿದ್ದ ಕೋವಿಡ್​ ಎರಡನೇ ಅಲೆ ಇದೀಗ ಕಡಿಮೆಯಾಗಿದ್ದು, ಎಲ್ಲವೂ ಈ ಹಿಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಮಧ್ಯೆ ಡೆಲ್ಟಾ ಫ್ಲಸ್​ ಆತಂಕ ಶುರುಗೊಂಡಿದೆ. ಜತೆಗೆ ಮೂರನೇ ಅಲೆ ಕೂಡ ಲಗ್ಗೆ ಹಾಕಲಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಹೀಗಾಗಿ ಕೆಲವೊಂದು ರಾಜ್ಯಗಳು ಸಾಂಕ್ರಾಮಿಕ ರೋಗ ತಡೆಗಟ್ಟಲು ಈಗಿನಿಂದಲೇ ತಯಾರಿ ನಡೆಸುತ್ತಿವೆ.

  • #COVID19 நிவாரண நிதியாக #TNCMPRF-இல் ரூ.353 கோடி நன்கொடை பெறப்பட்டிருக்கிறது.

    கொரோனா தடுப்புப் பணி - மருந்து, ஆக்சிஜன் கொள்முதல் ஆகியவற்றுக்காக ஏற்கனவே ரூ.166.40 கோடி ஒதுக்கப்பட்டது!

    மூன்றாம் அலை தொடர்பான முன்னேற்பாடுகளுக்காக ரூ.100 கோடி ஒதுக்கப்படுகிறது. pic.twitter.com/bVHUYuLCrh

    — M.K.Stalin (@mkstalin) June 29, 2021 " class="align-text-top noRightClick twitterSection" data=" ">

ಮಹಾಮಾರಿ ಕೊರೊನಾ ವೈರಸ್​ನ ಮೂರನೇ ಅಲೆ ಎದುರಿಸಲು ತಮಿಳುನಾಡು ಸರ್ಕಾರ 100 ಕೋಟಿ ರೂ. ಮೀಸಲಿಟ್ಟಿದೆ. ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆ ಮಾಡಿರುವ ಮುಖ್ಯಮಂತ್ರಿ ಸ್ಟಾಲಿನ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿ(CMPRF) 100 ಕೋಟಿ ರೂ. ಮಂಜೂರು ಮಾಡಿದ್ದಾರೆ. ಇಲ್ಲಿಯವರೆಗೆ 353 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, ಈಗಾಗಲೇ 166.40 ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: 'ನಿನ್ನ ಮರೆತರೆ ಚಪ್ಪಲಿಯಿಂದ ಹೊಡಿ ಎಂದಿದ್ದನಂತೆ'...ಅದೇ ಕೆಲಸ ಮಾಡಿದ ಯುವತಿ!

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಆಕ್ಸಿಜನ್​ ಖರೀದಿಗೆ ಈ ಹಣ ಬಳಕೆ ಮಾಡಿಕೊಳ್ಳುವಂತೆ ಸ್ಟಾಲಿನ್​ ತಿಳಿಸಿದ್ದಾರೆ. ಈ ಹಿಂದೆ 41.40 ಕೋಟಿ ರೂ. ಆಕ್ಸಿಜನ್​ ಖರೀದಿಗಾಗಿ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳಿಂದ ತಮಿಳುನಾಡಿನಲ್ಲೂ ಕೋವಿಡ್ ಹಾವಳಿ ಕಡಿಮೆಯಾಗಿದ್ದು, ಸದ್ಯ 40,954 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.