ನವದೆಹಲಿ: ಮಳೆ, ಬಿಸಿಲೆನ್ನದೇ ತಮಗೆ ಬಂದ ಆರ್ಡರ್ ಅನ್ನು ಡೆಲಿವರಿ ಏಜೆಂಟ್‌ಗಳು ವಿತರಿಸುತ್ತಾರೆ. ಅಂತಹ ಸ್ಪೂರ್ತಿದಾಯಕ ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಇದೀಗ ಇಲ್ಲೊಂದು ವಿಶೇಷವಾದ ವಿಡಿಯೋ ಸಿಕ್ಕಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸ್ಫೂರ್ತಿದಾಯಕ ವಿಡಿಯೋದಲ್ಲಿ, ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ವೀಲ್‌ಚೇರ್ ಸ್ಕೂಟರ್‌ನಲ್ಲಿ ರಸ್ತೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.
ದೆಹಲಿ ಮಹಿಳಾ ಆಯೋಗದ ಸ್ವಾತಿ ಮಲಿವಾಲ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಜೀವನವು ನಿಸ್ಸಂದೇಹವಾಗಿ ಕಷ್ಟಕರವಾಗಿದೆ. ಆದರೆ, ನಾವು ಬಿಡುವುದಿಲ್ಲ. ನಾನು ಅವರಿಗೆ ನಮಸ್ಕರಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
-
बेशक मुश्किल है ज़िन्दगी... हमने कौनसा हार मानना सीखा है! सलाम है इस जज्बे को ♥️ pic.twitter.com/q4Na3mZsFA
— Swati Maliwal (@SwatiJaiHind) September 10, 2022 " class="align-text-top noRightClick twitterSection" data="
">बेशक मुश्किल है ज़िन्दगी... हमने कौनसा हार मानना सीखा है! सलाम है इस जज्बे को ♥️ pic.twitter.com/q4Na3mZsFA
— Swati Maliwal (@SwatiJaiHind) September 10, 2022बेशक मुश्किल है ज़िन्दगी... हमने कौनसा हार मानना सीखा है! सलाम है इस जज्बे को ♥️ pic.twitter.com/q4Na3mZsFA
— Swati Maliwal (@SwatiJaiHind) September 10, 2022
ಈ ವೀಡಿಯೊಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಟ್ವಿಟರ್ ಬಳಕೆದಾರರು, ಅದೇ ರೀತಿಯ ವೀಲ್‌ಚೇರ್ ಸ್ಕೂಟರ್‌ನಲ್ಲಿ ಡೆಲಿವರಿ ಮಾಡಲು ಹೋಗುತ್ತಿರುವ ಝೊಮಾಟೊ ಡೆಲಿವರಿ ಎಕ್ಸಿಕ್ಯೂಟಿವ್‌ನ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಿಗೆ ಜನರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.
ಮಹಿಳೆ ಮತ್ತು ಅವರ ಕಠಿಣ ಪರಿಶ್ರಮಕ್ಕೆ ಸೆಲ್ಯೂಟ್ ಮಾಡಿದ್ದು, "ಸಮಾಜ ಮತ್ತು ಸರ್ಕಾರ ವಿಶೇಷ ಸಾಮರ್ಥ್ಯ ಹೊಂದಿರುವವರ ಅಗತ್ಯಗಳನ್ನು ಪೂರೈಸಲು ವಿಫಲರಾಗಿದ್ದೇವೆಯೇ ಎಂದು ಯೋಚಿಸಲು ಇದು ನನ್ನನ್ನು ಒತ್ತಾಯಿಸುತ್ತದೆ" ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. "ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಲು ಹೋರಾಡುವವರು ಮತ್ತು ವಿಷಯಗಳನ್ನು ಹಾಗೆಯೇ ಸ್ವೀಕರಿಸುವವರು ಇದ್ದಾರೆ. ಅವಳು ಹೋರಾಟಗಾರ್ತಿ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಫುಡ್ ಡೆಲಿವರಿಗೆ ಬಂದ ಜೊಮ್ಯಾಟೊ ಬಾಯ್.. ಯುವಕನ ಖಾಸಗಿ ಅಂಗಕ್ಕೆ ಕಚ್ಚಿತು ಶ್ವಾನ!