ತಿರುವನಂತಪುರಂ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಅಪರಾಧಿ ಸ್ವಪ್ನಾ ಸುರೇಶ್ ಅವರನ್ನು ಅಧಿಕಾರಿಯ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಕ್ರೈಂ ಬ್ರಾಂಚ್ ಪೊಲೀಸರು, ಇಂದು ಆನ್ಲೈನ್ ಮೂಲಕ ಕೋರ್ಟ್ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆದಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಸ್ವಪ್ನಾ ಸುರೇಶ್ ಜೈಲಿನಲ್ಲಿದ್ದಾರೆ. ಏರ್ ಇಂಡಿಯಾ ಅಧಿಕಾರಿ ಎಲ್.ಎಸ್. ಸಿಬು ಅವರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಪರಾಧ ವಿಭಾಗದ ಪೊಲೀಸರು ಇಂದು ಆನ್‌ಲೈನ್‌ನಲ್ಲಿಯೇ ಕೋರ್ಟ್ಗೆ ಸ್ವಪ್ನಾ ಸುರೇಶ್ ಅವರನ್ನು ಹಾಜರು ಪಡಿಸಿದ್ದಾರೆ. ಈ ಸಂಬಂಧ ಕೋರ್ಟ್ ವಿಚಾರಣೆ ನಡೆಸಿ, ನಕಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮೇ 22ರವರೆಗೆ ಸ್ವಪ್ನಾ ಅವರನ್ನು ಕ್ರೈಂ ಬ್ರ್ಯಾಂಚ್ ಕಸ್ಟಡಿಗೆ ವಹಿಸಿದೆ.
ಏನಿದು ಪ್ರಕರಣ?
ತಿರುವನಂತಪುರ ವಿಮಾನ ನಿಲ್ದಾಣದಲ್ಲಿನ ಹಣಕಾಸು ಅವ್ಯವಹಾರದ ಬಗ್ಗೆ ಸಿಬಿಐ, ಕೇಂದ್ರ ವಿಜಿಲೆನ್ಸ್ ಆಯೋಗ ಮತ್ತು ಪ್ರಧಾನಿ ಗಮನಕ್ಕೆ ಏರ್ ಇಂಡಿಯಾ ಅಧಿಕಾರಿ ಸಿಬು ತಂದಿದ್ದರು. 2014 ರಲ್ಲಿ ತಿರುವನಂತಪುರದ ಗ್ರೌಂಡ್ ಸರ್ವೀಸಸ್ ವಿಭಾಗದಲ್ಲಿ ಆಫೀಸರ್-ಏಪ್ರನ್ ಆಗಿ ಏರ್ ಇಂಡಿಯಾದ ಯೂನಿಯನ್ ನಾಯಕ ಸಿಬು ಕೆಲಸ ಮಾಡುತ್ತಿದ್ದರು.
ಆ ಬಳಿಕ ಸಿಬು ಅವರು ಸಾಕಷ್ಟು ಸಮಸ್ಯೆ ಎದುರಿಸಿದರು. ಕೆಲವು ವರ್ಷಗಳ ಕಾನೂನು ಹೋರಾಟದ ನಂತರ ಕೇರಳ ಹೈಕೋರ್ಟ್ 2018 ರ ಜುಲೈನಲ್ಲಿ ಸಿಬು ಅವರನ್ನು ಪುನಃ ನೇಮಿಸುವಂತೆ ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿತ್ತು. ಈ ಕಾರಣಕ್ಕೆ ನಂತರ ಅವರನ್ನು ಹೈದರಾಬಾದ್‌ಗೆ ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಸ್ವಪ್ನಾ ಅವರು ಸಿಬು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದ ಕೋರ್ಟ್
ಇದಾದ ನಂತರ ಸಿಬು ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಪ್ರತ್ಯೇಕ ಆದೇಶದಲ್ಲಿ ಅಪರಾಧ ಶಾಖೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಏರ್ ಇಂಡಿಯಾ ಎಸ್‌ಎಟಿಎಸ್‌ನಲ್ಲಿ 17 ಮಹಿಳಾ ಉದ್ಯೋಗಿಗಳ ದೂರಿನ ಹೊರತಾಗಿ, ಅವರ ವಿರುದ್ಧ ಇನ್ನೂ ಎರಡು ಖೋಟಾ ದೂರುಗಳಿವೆ ಎಂದು ಅಪರಾಧ ಶಾಖೆಯ ತನಿಖೆಯಿಂದ ತಿಳಿದುಬಂದಿತ್ತು. ಅದನ್ನು ಏರ್ ಇಂಡಿಯಾದ ಉನ್ನತ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಈ ದೂರುಗಳ ಆಧಾರದ ಮೇಲೆ ಸಿಬು ಅವರನ್ನು ಹೈದರಾಬಾದ್‌ಗೆ ವರ್ಗಾಯಿಸಲಾಗಿತ್ತು.
ಇನ್ನು ಸ್ವಪ್ನಾ ಸುರೇಶ್ ಅವರು ಏರ್ ಇಂಡಿಯಾ ಎಸ್‌ಎಟಿಎಸ್‌ನಲ್ಲಿ ಉದ್ಯೋಗದಲ್ಲಿದ್ದಾಗ ಸಿಬು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ಇದರಿಂದ ಸ್ವಪ್ನಾ 2015 ರಲ್ಲಿ ಕೆಲಸವನ್ನು ತೊರೆದರು. ಈಗ ವಿವಾದಾತ್ಮಕ ಚಿನ್ನದ ಕಳ್ಳಸಾಗಣೆ ಪ್ರಕರಣವು ತಿರುವು ಪಡೆದ ನಂತರ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಎನ್ಐಎ ಬಂಧಿಸಿದೆ. ಇದರಿಂದ ಸಿಬು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ .
ಅಪರಾಧ ಶಾಖಾ ತನಿಖೆಯು ಸ್ವಪ್ನಾ ಸುರೇಶ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ಮತ್ತು ಮುಂದಿನ ದಿನಗಳಲ್ಲಿ ಸಾಕ್ಷ್ಯಾಧಾರಗಳನ್ನು ಪತ್ತೆ ಮಾಡಿದ್ದು, ಅವರ ಹಿಂದೆ ಯಾರು ಇದ್ದಾರೆ ಎಂದು ಅಪರಾಧ ಶಾಖೆ ಬಹಿರಂಗಪಡಿಸಲಿದೆ.