ಬರೇಲಿ(ಉತ್ತರ ಪ್ರದೇಶ): ರಸ್ತೆ ಅಪಘಾತದ ನಂತರ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಎಂಟು ಮಂದಿ ಸಜೀವ ದಹನವಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಶನಿವಾರ ರಾತ್ರಿ ನಡೆಯಿತು. ಮೃತರಲ್ಲಿ ಪುಟ್ಟ ಮಗು ಮತ್ತು ಇತ್ತೀಚೆಗಷ್ಟೇ ಮದುವೆಯಾಗಿದ್ದ ವ್ಯಕ್ತಿ ಸೇರಿದ್ದು, ಎಲ್ಲರೂ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಕಾರಿನ ಟೈಯರ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಮೃತರೆಲ್ಲರೂ ಬಹೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾಮ್ ನಗರದ ನಿವಾಸಿಗಳಾಗಿದ್ದಾರೆ. ಸದ್ಯಕ್ಕೆ ಮೃತಪಟ್ಟಿರುವವರ ಪೈಕಿ ಫುರ್ಕಾನ್, ಆರಿಫ್ ಮತ್ತು ಆಸಿಫ್ ಎಂಬ ಮೂವರನ್ನು ಗುರುತಿಸಲಾಗಿದೆ. ಆರಿಫ್‌ಗೆ 8 ದಿನಗಳ ಹಿಂದಷ್ಟೇ ವಿವಾಹವಾಗಿತ್ತು. ಈ ಸಮಾರಂಭದ ವಿವಿಧ ಕಾರ್ಯಗಳನ್ನು ಮುಗಿಸಿ ಹಿಂತಿರುಗುತ್ತಿದ್ದರು ಎಂದು ಬರೇಲಿ ಎಸ್.ಎಸ್.ಪಿ. ಧುಲೆ ಸುಶೀಲ್ ಚಂದ್ರಭಾನ್ ಮಾಹಿತಿ ನೀಡಿದರು.
-
#WATCH | Bareilly, Uttar Pradesh: Bareilly SSP Ghule Sushil Chandrabhan says, "Near Bhojipura, an accident occurred on the highway... A car collided with a truck. The car got dragged and then caught fire... The car was centrally locked, hence the people inside the car lost their… pic.twitter.com/HtfUUB8bSK
— ANI UP/Uttarakhand (@ANINewsUP) December 10, 2023 " class="align-text-top noRightClick twitterSection" data="
">#WATCH | Bareilly, Uttar Pradesh: Bareilly SSP Ghule Sushil Chandrabhan says, "Near Bhojipura, an accident occurred on the highway... A car collided with a truck. The car got dragged and then caught fire... The car was centrally locked, hence the people inside the car lost their… pic.twitter.com/HtfUUB8bSK
— ANI UP/Uttarakhand (@ANINewsUP) December 10, 2023#WATCH | Bareilly, Uttar Pradesh: Bareilly SSP Ghule Sushil Chandrabhan says, "Near Bhojipura, an accident occurred on the highway... A car collided with a truck. The car got dragged and then caught fire... The car was centrally locked, hence the people inside the car lost their… pic.twitter.com/HtfUUB8bSK
— ANI UP/Uttarakhand (@ANINewsUP) December 10, 2023
ಕಾರಿನ ಡೋರ್ ಲಾಕ್: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ದಾಟಿ ಮತ್ತೊಂದು ರಸ್ತೆಗೆ ನುಗ್ಗಿ ಡಂಪರ್ ವಾಹನಕ್ಕೆ ಗುದ್ದಿದೆ. ಇದರ ರಭಸಕ್ಕೆ ಬೆಂಕಿ ಕಾಣಿಸಿದೆ. ಕಾರಿನ ಎಲ್ಲ ಡೋರ್ಗಳು ಲಾಕ್ ಆಗಿವೆ. ಇದರಿಂದ ಕಾರಿನಲ್ಲೇ ಮಗು ಸೇರಿದಂತೆ ಎಂಟು ಮಂದಿ ಸಜೀವ ದಹನವಾಗಿದ್ದಾರೆ. ಕಾರು ಹಾಗೂ ಡಂಪರ್ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬರೇಲಿ ಎಸ್‌ಎಸ್‌ಪಿ ಸೇರಿದಂತೆ ಅನೇಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದ್ದಾರೆ. ಎಂಟು ಜನರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಡಂಪರ್ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಜಯಪುರ: ಚಿಕಿತ್ಸೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್ ಅಪಘಾತ; ಶಿಶು ಸಹಿತ ಗರ್ಭಿಣಿ ಸಾವು