ETV Bharat / bharat

ಕೋವಿಡ್‌ ಎಫೆಕ್ಟ್‌: ಅ.31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ನಿಷೇಧ ವಿಸ್ತರಣೆ

author img

By

Published : Sep 29, 2021, 5:30 AM IST

ಕೋವಿಡ್‌ನಿಂದಾಗಿ ಕೇಂದ್ರವು ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ಮತ್ತೆ ವಿಸ್ತರಿಸಿದೆ. ಅಕ್ಟೋಬರ್ 31 ರವರೆಗೆ ನಿಷೇಧ ಮುಂದುವರಿಯಲಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ.

suspension of scheduled international passenger flights extended till oct 31
ಕೋವಿಡ್‌ ಎಫೆಕ್ಟ್‌: ಅ.31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ನಿಷೇಧ ವಿಸ್ತರಣೆ

ನವದೆಹಲಿ: ದೇಶದಲ್ಲಿ ಕೋವಿಡ್‌ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆಯ ನಿರ್ಬಂಧವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

ಅಕ್ಟೋಬರ್‌ 31ರ ವರೆಗೆ ನಿಷೇಧವನ್ನು ವಿಸ್ತರಿಸಿರುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ-ಡಿಜಿಸಿಎ ಸ್ಪಷ್ಟಪಡಿಸಿದೆ. ಆದರೆ ಅಧಿಕಾರಿಗಳ ಅನುಮತಿಯೊಂದಿಗೆ ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿಸಲಾಗುವುದು ಎಂದು ಡಿಜಿಸಿಎ ಫ್ಲೈಟ್ ನ್ಯೂಸ್ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ಹರಡುವಿಕೆಯಿಂದಾಗಿ 2020ರ ಮಾರ್ಚ್ 23 ರಿಂದ ಡಿಜಿಸಿಎ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ವಂದೇ ಭಾರತ್ ಮಾತ್ರ ಆಯ್ದ ದೇಶಗಳಿಗೆ ವಿಮಾನಗಳನ್ನು ನಿರ್ವಹಿಸುತ್ತದೆ. ಯುಎಸ್ಎ, ಯುಕೆ, ಯುಎಇ, ಕೀನ್ಯಾ, ಭೂತಾನ್, ಫ್ರಾನ್ಸ್ ಸೇರಿದಂತೆ 28 ದೇಶಗಳ ನಡುವೆ ಭಾರತವು ವಿಮಾನ ಸೇವೆಗಳನ್ನು ನೀಡುತ್ತಿದೆ. ಅಂತಾರಾಷ್ಟ್ರೀಯ ಸರಕು ಸೇವೆಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: 2022ರ ಮೊದಲ ತ್ರೈಮಾಸಿಕದಲ್ಲಿ ಜೆಟ್‌ ಏರ್‌ವೇಸ್‌ ದೇಶಿ ವಿಮಾನ ಸೇವೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.