ETV Bharat / bharat

ಸಂಸತ್ ಕಲಾಪದಲ್ಲಿ ಕೋಲಾಹಲ: ಫಾರೂಕ್​ ಅಬ್ದುಲ್ಲಾ ಸೇರಿ ಮತ್ತೆ ಪ್ರತಿಪಕ್ಷಗಳ 49 ಲೋಕಸಭಾ ಸಂಸದರ ಅಮಾನತು

Suspension of 49 MPs: ಸೋಮವಾರ ಒಂದೇ ದಿನ ಲೋಕಸಭೆ ಹಾಗೂ ರಾಜ್ಯಸಭೆಯಿಂದ ದಾಖಲೆಯ 78 ಸಂಸದರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಲಾಗಿತ್ತು. 1989 ರ ದಾಖಲೆಯನ್ನೂ ಮುರಿದು ಈ ಬಾರಿ ಇದುವರೆಗೂ 141 ಸಂಸದರನ್ನ ಅಮಾನತು ಮಾಡಲಾಗಿದೆ.

Parliament
ಸಂಸತ್ತು ಭವನ
author img

By PTI

Published : Dec 19, 2023, 1:17 PM IST

Updated : Dec 19, 2023, 3:16 PM IST

ನವದೆಹಲಿ: ಇಂದು ಮತ್ತೆ ಸದನದ​ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನ್ಯಾಷನಲ್​ ಕಾನ್ಫರೆನ್ಸ್​ನ ಸಂಸದ ಪಾರೂಕ್​ ಅಬ್ದುಲ್ಲಾ ಹಾಗೂ ಕಾಂಗ್ರೆಸ್​ ನಾಯಕರಾದ ಶಶಿ ತರೂರ್​ ಹಾಗೂ ಮನೀಶ್​ ತಿವಾರಿ, ಕಾರ್ತಿ ಚಿದಂಬರಂ ಹಾಗೂ ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ಡಿಂಪಲ್​ ಯಾದವ್​ ಸೇರಿದಂತೆ 49 ಲೋಕಸಭಾ ಸಂಸದರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಲಾಗಿದೆ. ಇಲ್ಲಿಯವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಿಂದ 95 ಹಾಗೂ ರಾಜ್ಯಸಭೆಯಿಂದ 46 ಸೇರಿ ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಡಿಸೆಂಬರ್​ 13 ರಂದು ಸಂಸತ್ತಿನಲ್ಲಿ ಆದ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್​ ಶಾ ಹೇಳಿಕೆ ನೀಡುವಂತೆ ಒತ್ತಾಯಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ನಿರಂತರವಾಗಿ ಕೋಲಾಹಲ ಸೃಷ್ಟಿಸುತ್ತಿದ್ದಾರೆ. ಇಂದು ಮತ್ತೆ ಸದನದಲ್ಲಿ ಡಿಸೆಂಬರ್​ 13ರ ಭದ್ರತಾ ಲೋಪ ವಿಚಾರ ಮುನ್ನೆಲೆಗೆ ಬಂದಿದ್ದು, ವಿರೋಧ ಪಕ್ಷಗಳ ಸಂಸದರು ಮತ್ತದೇ ಪಟ್ಟು ಹಿಡಿದು, ಗದ್ದಲ ಮುಂದುವರಿಸಿದರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್​ ರಾಮ್​ ಮೇಘವಾಲ್​ ಅವರು ಸಂಸದರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. ಈ ಹಿನ್ನೆಲೆ 49 ಲೋಕಸಭಾ ಸಂಸದರನ್ನು ಅಮಾನತುಗೊಳಿಸಿ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಆದೇಶಿಸಿದ್ದಾರೆ.

ಸೋಮವಾರ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದ್ದ 78 ಪ್ರತಿಪಕ್ಷ ಸಂಸದರನ್ನು ಅಧಿವೇಶನ ಮುಗಿಯುವರೆಗೆ ಅಮಾನತುಗೊಳಿಸಲಾಗಿತ್ತು. ಇದುವರೆಗಿನ ಚಳಗಾಲದ ಸಂಸತ್​ ಅಧಿವೇಶನದಲ್ಲಿ ಸಂಸದರ ಅಮಾನತಿನಲ್ಲಿ ಇದು ದಾಖಲೆಯ ಅಮಾನತಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರ ಕಾಲದಲ್ಲಿ 1989ರಲ್ಲಿ ಏಕಕಾಲಕ್ಕೆ 63 ಸಂಸದರನ್ನು ಅಮಾನತು ಮಾಡಲಾಗಿತ್ತು. ಆ ದಾಖಲೆಯನ್ನು ಇದು ಮೀರಿಸಿದೆ.

ಇಂದಿನ ಕಲಾಪದ ವೇಳೆ ವಿರೋಧ ಪಕ್ಷಗಳ ಸಂಸದರು, ತಮ್ಮ ಅಮಾನತಿನ ಬಗ್ಗೆ ಹೇಳಿಕೆ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದ ಹಿನ್ನೆಲೆ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳೆರಡನ್ನೂ ಇಂದು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸಂಸತ್​ ಭದ್ರತಾ ಲೋಪದ ಬಗ್ಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರು ಹೇಳಿಕೆ ನೀಡುವಂತೆ, ವಿರೋಧ ಪಕ್ಷದ ಸಂಸದರು "ಪಿಎಂ ಸದನ್ ​ಮೆ ಆವೋ" ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಒಂದೇ ದಿನದಲ್ಲಿ 78 ಸಂಸದರ ಅಮಾನತು, ಸಂಸತ್​ ಇತಿಹಾಸದಲ್ಲೇ ಮೊದಲು; 1989ರ ದಾಖಲೆ ಭಗ್ನ

Last Updated : Dec 19, 2023, 3:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.