ETV Bharat / bharat

2021-22ರ ಅವಧಿಯಲ್ಲಿ ಬರೋಬ್ಬರಿ 1.78 ಕೋಟಿಗೂ ಹೆಚ್ಚು ಜನರಿಂದ ಟಿಕೆಟ್‌ ರಹಿತ ಪ್ರಯಾಣ!

author img

By

Published : Feb 20, 2022, 6:12 PM IST

ಟಿಕೆಟ್ ರಹಿತ ಪ್ರಯಾಣದಲ್ಲಿ ಇಂತಹ ಏರಿಕೆಗೆ ಪ್ರಮುಖ ಕಾರಣವೆಂದರೆ, ಅನೇಕ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳು ಆನ್‌ಲೈನ್ ಬುಕಿಂಗ್ ಮತ್ತು ಸೀಮಿತ ಸೇವೆಗಳನ್ನು ಹೊಂದಿದ್ದು ಎಂದು ಮೂಲಗಳು ತಿಳಿಸಿವೆ.

2021-22ರ ಅವಧಿಯಲ್ಲಿ ಬರೋಬ್ಬರಿ1.78 ಕೋಟಿಗೂ ಹೆಚ್ಚು ಜನರಂದ ರೈಲ್ವೇ  ಟಿಕೆಟ್‌ ರಹಿತ ಪ್ರಯಾಣ

ನವದೆಹಲಿ: 2021-22ರ ಮೊದಲ ಒಂಬತ್ತು ತಿಂಗಳಲ್ಲಿ 1.78 ಕೋಟಿಗೂ ಹೆಚ್ಚು ಟಿಕೆಟ್‌ ರಹಿತ ಪ್ರಯಾಣಿಕರನ್ನು ಮತ್ತು ಕಾಯ್ದಿರಿಸದ ಲಗೇಜ್ ಹೊಂದಿರುವವರನ್ನು ರೈಲ್ವೆ ಇಲಾಖೆ ಪತ್ತೆ ಮಾಡಿದೆ. ಕೊರೊನಾ ಇಲ್ಲದ ಸಮಯ 2019-2020ರ ವೇಳೆಗೆ ಹೋಲಿಕೆ ಮಾಡಿದರೆ ಸುಮಾರು 79 ಪ್ರತಿಶತದಷ್ಟು ಈ ಅಪರಾಧ ಪ್ರಕರಣ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

2020-21 ರ ಕೊರೊನಾ ನಿರ್ಬಂಧದ ವೇಳೆ ಇಂಥಹ ಪ್ರಯಾಣಿಕರ ಸಂಖ್ಯೆ 27 ಲಕ್ಷದಷ್ಟಿತ್ತು. ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ರೈಲ್ವೆ ಮಂಡಳಿಯು ಈ ಡೇಟಾವನ್ನು ನೀಡಿದೆ. ಹಾಗೆಯೇ ಈ ಡಾಟಾದಲ್ಲಿ ಏಪ್ರಿಲ್-ಡಿಸೆಂಬರ್ 2021 ರ ಅವಧಿಯಲ್ಲಿ 1.78 ಕೋಟಿಗೂ ಹೆಚ್ಚು ಪ್ರಯಾಣಿಕರು ಟಿಕೆಟ್ ಇಲ್ಲದೆ/ಅಸಮರ್ಪಕ ಟಿಕೆಟ್ ಮತ್ತು ಕಾಯ್ದಿರಿಸದ ಲಗೇಜ್‌ನೊಂದಿಗೆ ಪ್ರಯಾಣಿಸಿದ ಮಾಹಿತಿಯನ್ನೂ ನೀಡಲಾಗಿದೆ.

ಇಂಥಹ ಪ್ರಯಾಣಿಕರಿದ ರೈಲ್ವೆ ಇಲಾಖೆಯು 1,017.48 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆಯಂತೆ. ಈ ಅಪರಾಧಕ್ಕೆ ಹೆಚ್ಚಿನ ಕೋವಿಡ್ ನಿರ್ಬಂಧದ ವೇಳೆ ಅನೇಕ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳು ಆನ್‌ಲೈನ್ ಬುಕಿಂಗ್ ಮತ್ತು ಸೀಮಿತ ಸೇವೆಗಳನ್ನು ಮಾತ್ರ ಹೊಂದಿದ್ದೇ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.

2019-2020 ರ ಆರ್ಥಿಕ ವರ್ಷದಲ್ಲಿ ನಡೆದ ಘಟನೆಗಳು ಕೊರೊನಾಗೆ ಸಂಬಂಧಿಸಿದ್ದಲ್ಲ. ಅದರಲ್ಲಿ ಒಟ್ಟಾರೆ 1.10 ಕೋಟಿ ಜನರು ಟಿಕೆಟ್ ರಹಿತ ಪ್ರಯಾಣದಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಅವರಿಂದ ಒಟ್ಟು 561.73 ಕೋಟಿ ರೂ.ಹಣ ಸಂಗ್ರಹಣೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸಾಮಾಜಿಕ ನ್ಯಾಯವು ಮಾನವ ಜೀವನದ ಅತ್ಯಂತ ಪ್ರಮುಖ ಅಂಶ: ಡಾ. ಸೂರಜ್ ಎಂಗ್ಡೆ

ಏಪ್ರಿಲ್ 2020 ಮತ್ತು ಮಾರ್ಚ್ 2021 ರ ನಡುವೆ ಅಂದರೆ 2020-21 ರ ಹಣಕಾಸು ವರ್ಷದಲ್ಲಿ, 27.57 ಲಕ್ಷ ಜನರು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಮತ್ತು 143.82 ಕೋಟಿ ರೂ.ಗಳನ್ನು ದಂಡವಾಗಿ ಪಾವತಿಸಲಾಗಿದೆ.

ರೈಲ್ವೆಯ ಅಂಕಿ ಅಂಶಗಳ ಪ್ರಕಾರ, 2019-2020 ರಿಂದ 2021-22 ರವರೆಗೆ ರೈಲು ಸೇವೆಗಳನ್ನು ಪಡೆಯುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಕ್ಟೋಬರ್ 2019 ರಲ್ಲಿ ನಿಯಮಿತ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದಾಗ, ರೈಲುಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 4.40 ಕೋಟಿ ಇತ್ತು. ಸೆಪ್ಟೆಂಬರ್ 2021 ರಲ್ಲಿ, COVID-19 ಪರಿಸ್ಥಿತಿಯಲ್ಲಿ ಸುಮಾರು ಏಳು ಕೋಟಿಗೆ ಏರಿತು ಎಂದು ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.