ಸೂರತ್ (ಗುಜರಾತ್): ಸೂರತ್‌ನಲ್ಲಿ ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಜನರು ಬಗೆ ಬಗೆ ಐಸ್ ಕ್ರೀಮ್ ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಐಸ್ ಕ್ರೀಮ್‌ಪ್ರಿಯರಿಗಾಗಿಯೇ ಸೂರತ್‌ನಲ್ಲೀಗ ವಿಶೇಷವಾದ ತಿನಿಸು ತಯಾರಾಗಿದೆ. ಇದು ಸಾಮಾನ್ಯವಾದ ಐಸ್ ಕ್ರೀಮ್ ಅಲ್ಲ. ಇದನ್ನು 24 ಕ್ಯಾರಟ್ ಚಿನ್ನದ ಲೇಪನದಿಂದ ತಯಾರಿಸಲಾಗಿದೆ.
ಒಂದೆಡೆ ದಿನ ದಿನಕ್ಕೆ ಏರುತ್ತಿರುವ ಚಿನ್ನದ ಬೆಲೆ, ಮತ್ತೊಂದೆಡೆ ಹೆಚ್ಚುತ್ತಿರುವ ಬಿಸಿಲು. ಆದರೆ, ಇಲ್ಲಿನ ಜನತೆ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಬೇಸಿಗೆಯ ಮಧ್ಯದಲ್ಲಿ ಜನರು 24 ಕ್ಯಾರಟ್ ಚಿನ್ನದ ಲೇಪಿತ ಐಸ್ ಕ್ರೀಮ್ ಸವಿದು ಆನಂದಿಸುತ್ತಿದ್ದಾರೆ.
ಬೆಲೆ ಎಷ್ಟು ಗೊತ್ತೇ?: ಐಸ್ ಕ್ರೀಮ್ ಕೋನ್ ಅನ್ನು ವಿಶೇಷ ರೀತಿಯ ಚಿಕ್ಕ ಚಿಕ್ಕ ಚಿನ್ನದ ಚೆಂಡಿನಿಂದ ಅಲಂಕರಿಸಲಾಗಿದೆ. ಕೋನಿನೊಒಳಗೆ ವಿವಿಧ ರುಚಿಗಳಿವೆ. ಚಿನ್ನದ ಚಾಕೊಲೇಟ್ ಕೂಡ ಸೇರಿದೆ. ಮೇಲ್ಭಾಗದಲ್ಲಿ 24 ಕ್ಯಾರಟ್ ಚಿನ್ನ ಮತ್ತು ಒಳಗೆ ಡ್ರೈಫ್ರೂಟ್ ಚೋಕೋನಿಂದ ಮುಚ್ಚಲಾಗಿದೆ. ಬೆಲೆ 1000 ರೂಪಾಯಿ ಇದೆ.
ನೀವು 18% ಜಿಎಸ್ಟಿ ಸಹ ಪಾವತಿಸಬೇಕು. ಇಷ್ಟು ದುಬಾರಿಯಾದರೂ ಬೇಡಿಕೆ ಕಡಿಮೆಯಾಗಿಲ್ಲ. ಐಸ್ ಕ್ರೀಮ್ ತಿನ್ನಲು ಜನರು ದೂರದೂರುಗಳಿಂದ ಬರುತ್ತಿದ್ದಾರೆ. ಇದು ಹೋಮ್ ಡೆಲಿವರಿಗೆ ಸಿಗುವುದಿಲ್ಲ. ಅಂಗಡಿಗೇ ಬರಬೇಕು. ಏಕೆಂದರೆ ಇದನ್ನು ಆರ್ಡರ್ ನೀಡಿದ ತಕ್ಷಣವೇ ಸಿದ್ಧಪಡಿಸಲಾಗುತ್ತದೆ.
ಇದನ್ನೂ ಓದು: ಜೋಶಿ ಅಂಗಡಿಯಲ್ಲಿ ಹೊರಹೊಮ್ಮುವ ಕೊಳಲಿನ ನಾದ.. ಜಿತೇಂದ್ರ ಬಳಿ ಇವೆ ಲಕ್ಷ ಲಕ್ಷ ಬೆಲೆಯ ಫ್ಲೂಟ್ಸ್