ETV Bharat / bharat

ಮಾನಹಾನಿ ಕೇಸ್​: ಶಿಕ್ಷೆ ತಡೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ - ಸೂರತ್​ ಕೋರ್ಟ್​ ತೀರ್ಪು ಪ್ರಕಟ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮೇಲ್ಮನವಿ ಅರ್ಜಿ ಸೂರತ್ ನ್ಯಾಯಾಲಯದಲ್ಲಿ ವಜಾಗೊಂಡಿದೆ.

ರಾಹುಲ್​ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

author img

By

Published : Apr 20, 2023, 11:22 AM IST

Updated : Apr 20, 2023, 12:27 PM IST

ಸೂರತ್ (ಗುಜರಾತ್): ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೋರಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯ ಇಂದು ವಜಾಗೊಳಿಸಿದೆ. ಇದರಿಂದ ರಾಹುಲ್​ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ಮುಂದುವರಿಯಲಿದೆ.

ನ್ಯಾಯಾಲಯದಲ್ಲಿ ಏನೇನಾಯ್ತು?: ಸೂರತ್​ನ ಕೆಳಹಂತದ ನ್ಯಾಯಾಲಯ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್​ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ವಿರುದ್ಧ ಕಾಂಗ್ರೆಸ್ ನಾಯಕ ಸೆಷನ್ಸ್​ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಕೋರ್ಟ್​ನಲ್ಲಿ ಉಭಯ ಪಕ್ಷಗಳ ವಕೀಲರು ವಾದ ಪ್ರತಿವಾದ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.

ರಾಹುಲ್​ ಗಾಂಧಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಒಂದೇ ಸಾಲಿನಲ್ಲಿ ತೀರ್ಪು ನೀಡಿದ ಕೋರ್ಟ್​, ಮೇಲ್ಮನವಿಯನ್ನು ವಜಾ ಮಾಡಿತು. ಮಾಜಿ ಸಂಸದರಿಗೆ ನೀಡಲಾದ ಶಿಕ್ಷೆಯನ್ನು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ತೀರ್ಪು ಪ್ರಕಟವಾಗುವ ವೇಳೆ ರಾಹುಲ್​ ಗಾಂಧಿ ಮತ್ತು ಅವರ ಪರ ವಕೀಲರು ಕೂಡ ಕೋರ್ಟ್​ನಲ್ಲಿ ಹಾಜರಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್​ ಜಾಮೀನು ಪಡೆದಿದ್ದು, ಬಂಧನದಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ.

ಮುಂದೇನು?: ಮಾನನಷ್ಟ ಪ್ರಕರಣದಲ್ಲಿ ಸೆಷನ್ಸ್​ ನ್ಯಾಯಾಲಯದಿಂದ ಶಿಕ್ಷೆಗೆ ತಡೆಯಾಜ್ಞೆ ಸಿಗದ ಕಾರಣ ರಾಹುಲ್​ ಗಾಂಧಿ ಅವರ ಮುಂದೆ ಇರುವ ಆಯ್ಕೆ ಹೈಕೋರ್ಟ್ ಆಗಿದೆ​. ತಮಗೆ ನೀಡಲಾದ ಶಿಕ್ಷೆಗೆ ತಡೆ ನೀಡಬೇಕು ಎಂದು ಅವರು ಹೈಕೋರ್ಟ್​ಗೆ ಸಲ್ಲಿಸಬಹುದು. ಮೇಲ್ಮನವಿ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು ಎಂಬುದನ್ನು ಮುಂದೆ ನಿರ್ಣಯಿಸಲಾಗುವುದು ಎಂದು ರಾಹುಲ್​ ಪರ ವಕೀಲರು ತಿಳಿಸಿದರು.

ಪ್ರಕರಣವೇನು?: 2019 ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ಮೋದಿ ಉಪನಾಮವನ್ನು ಬಳಸಿ ಟೀಕಿಸಿದ್ದರು. ಇದು ವಿವಾದಕ್ಕೀಡಾಗಿತ್ತು. ಇದು ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಿ ಶಾಸಕ ಪೂರ್ಣೇಶ್​ ಮೋದಿ ಕ್ರಿಮಿನಲ್​ ಕೇಸ್​ ದಾಖಲಿಸಿದ್ದರು. ಇದರಲ್ಲಿ ರಾಹುಲ್​ ದೋಷಿ ಎಂದು ಕೋರ್ಟ್​ ತೀರ್ಪು ನೀಡಿದೆ.

ಓದಿ: ಮಾನಹಾನಿ ಕೇಸ್​: ಶಿಕ್ಷೆ ತಡೆ ಕೋರಿದ ರಾಹುಲ್​​ ಗಾಂಧಿ ಮೇಲ್ಮನವಿ ಅರ್ಜಿ ತೀರ್ಪು ಇಂದು

Last Updated : Apr 20, 2023, 12:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.