ಸೂರತ್ (ಗುಜರಾತ್) : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಸೂರತ್‌ನ ವಜ್ರದ ವ್ಯಾಪಾರಿ ಒಬ್ಬರು 11 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ದೇಣಿಗೆ ನೀಡಿದ ವಜ್ರ ವ್ಯಾಪಾರಿ ಗೋವಿಂದ್ ಧೋಲಾಕಿಯಾ. ಇವರು ಮೂಲತಃ ರೈತ ಕುಟುಂಬಕ್ಕೆ ಸೇರಿದವರು. ಇವರು 7 ನೇ ತರಗತಿವರೆಗೆ ಮಾತ್ರ ಅಧ್ಯಯನ ಮಾಡಿದ್ದು, ನಂತರ ವಜ್ರ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಓದಿ : 'ವಾಹ್' ಎನ್ನುವ ಬಿಹಾರದ ಸಿಹಿ ತಿನಿಸುಗಳು!
ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಧೋಲಾಕಿಯಾ ತನ್ನ ಸ್ನೇಹಿತರೊಂದಿಗೆ ಸ್ವಂತ ವಜ್ರದ ಕಂಪನಿಯನ್ನು ತೆರೆಯಲು ನಿರ್ಧರಿಸಿ, ಈಗ ಸ್ವಂತ ಕಂಪನಿಯ ಮಾಲೀಕರಾಗಿದ್ದಾರೆ.