ETV Bharat / bharat

ಕೇಂದ್ರ ಸರ್ಕಾರದ ನೋಟು ಬ್ಯಾನ್‌ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್ - ಅಪನಗದೀಕರಣ ಸುಪ್ರೀಂಕೋರ್ಟ್​ ತೀರ್ಪು

2016ರ ನವೆಂಬರ್ 8ರಂದು ಕೇಂದ್ರದ ಬಿಜೆಪಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನೋಟು ಅಮಾನ್ಯೀಕರಣ ಕ್ರಮವನ್ನು ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಕೆಯಾಗಿದ್ದವು. ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿತು.

ನೋಟು ಅಮಾನ್ಯೀಕರಣ ಕುರಿತ ಅರ್ಜಿಗಳ ಸೋಮವಾರ ತೀರ್ಪು ಪ್ರಕಟಿಸಲಿರುವ ಸುಪ್ರೀಂಕೋರ್ಟ್​​
the-supreme-court-will-announce-the-verdict-on-the-demonetisation-petitions-on-monday
author img

By

Published : Jan 2, 2023, 11:17 AM IST

Updated : Jan 2, 2023, 1:04 PM IST

ನವದೆಹಲಿ: ನಕಲಿ ನೋಟು, ಕಪ್ಪು ಹಣ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲ ಹಾಗು ತೆರಿಗೆ ವಂಚನೆಗಳನ್ನೆಲ್ಲ ತಡೆಯಲು ಕೇಂದ್ರ ಸರ್ಕಾರ 2016ರಲ್ಲಿ 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಐತಿಹಾಸಿಕ ಕ್ರಮವನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿ, ಇಂದು ಮಹತ್ವದ ಆದೇಶ ಪ್ರಕಟಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸಿಂಧುವಾಗಿದೆ ಎಂದು ಅತ್ಯುನ್ನತ ನ್ಯಾಯಾಲಯ ಹೇಳಿದೆ.

ಅಪನಗದೀಕರಣ ಕಾನೂನು ಮತ್ತು ಸಾಂವಿಧಾನಿಕ ದೋಷಗಳಿಂದ ಕೂಡಿದೆ ಎಂದು ಆರೋಪಿಸಿ ಸಲ್ಲಿಸಲಾದ 58 ಅರ್ಜಿಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.​ಎ.ನಜೀರ್​ ಅವರ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಎಲ್ಲ ಅರ್ಜಿಗಳನ್ನೂ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ಏನಿದೆ?: ನೋಟು ಅಮಾನ್ಯೀಕರಣ ನಿರ್ಧಾರವು ಯಾವುದೇ ಕಾನೂನು ಅಥವಾ ಸಾಂವಿಧಾನಿಕ ದೋಷಗಳಿಂದ ಕೂಡಿಲ್ಲ. ನಗದು ಅಕ್ರಮ ಸಂಗ್ರಹಣೆಯಿಂದ ದೇಶದ ಆರ್ಥಿಕ ನೀತಿಯ ಮೇಲೆ ಬೀರುವ ಪರಿಣಾಮಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಅಪನಗದೀಕರಣ ಘೋಷಿಸುವ ಮುನ್ನ 6 ತಿಂಗಳು ಮೊದಲೇ ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಮತ್ತು ಆರ್ಥಿಕ ತಜ್ಞರ ಜೊತೆ ಚರ್ಚೆ ನಡೆಸಿದೆ.

ಆರ್​ಬಿಐ ಮತ್ತು ತಜ್ಞರ ಸಲಹೆಯ ಆಧಾರದ ಮೇಲೆಯೇ ಅಪನಗದೀಕರಣ ಘೋಷಿಸಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಕೇಂದ್ರ ಸರ್ಕಾರ ತಜ್ಞರ ಸಲಹೆಯಂತೆ ಈ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದು ಹೇಳಿದೆ.

ಇದೊಂದು ದೇಶದ ದೊಡ್ಡ ಆರ್ಥಿಕ ನೀತಿಯಾಗಿರುವುದರಿಂದ ಈ ನಿರ್ಧಾರವನ್ನು ಹಿಂಪಡೆಯಲು ಬರುವುದಿಲ್ಲ. ಕೇಂದ್ರ ಸರ್ಕಾರ ದೋಷಪೂರಿತವಾಗಿ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ನಿಲುವಿನಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ನ್ಯಾ.ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ತೀರ್ಪನ್ನು ಓದಿದರು.

ಪೀಠದಲ್ಲಿದ್ದ ನ್ಯಾಯಮೂರ್ತಿಗಳು: ಕರ್ನಾಟಕದ ಮೂಡಬಿದರೆ ಮೂಲದವರಾದ ನ್ಯಾಯಮೂರ್ತಿ ಎಸ್.​ಎ.ನಜೀರ್​ ಅವರು ಐವರು ಸದಸ್ಯರ ಸಾಂವಿಧಾನಿಕ ಪೀಠದ ಅಧ್ಯಕ್ಷತೆ ವಹಿಸಿದ್ದರೆ, ಇದರಲ್ಲಿ ನ್ಯಾ.ಬಿ.ಆರ್.ಗವಾಯಿ, ನ್ಯಾ.ಬಿ.ವಿ.ನಾಗರತ್ನ, ನ್ಯಾ.ಎ.ಎಸ್.ಬೋಪಣ್ಣ ಮತ್ತು ನ್ಯಾ.ವಿ.ರಾಮಸುಬ್ರಮಣಿಯನ್ ಇದ್ದರು. ನಾಡಿದ್ದು, ಅಂದರೆ ಜ.4 ರಂದು ನ್ಯಾ.ನಜೀರ್ ಅವರು​ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ಅಪನಗದೀಕರಣ ಘೋಷಣೆ ಹೇಗಿತ್ತು?: 2016 ರ ನವೆಂಬರ್​ 8ರಂದು ರಾತ್ರಿ ದಿಢೀರನೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ಐದು ರೂಪಾಯಿ ಮತ್ತು 2 ಸಾವಿರ ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ, ಜನರು ತಮ್ಮಲ್ಲಿರುವ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರ್ಕಾರ 52 ದಿನಗಳ ಅವಕಾಶ ನೀಡಿತ್ತು.

ನೋಟ್​ಬಂಧಿ ವಿರುದ್ಧದ ಆರೋಪವೇನು?: ನೋಟ್​​ಬಂಧಿ ನಿರ್ಧಾರ ಕಾನೂನು ಮತ್ತು ಸಾಂವಿಧಾನಿಕ ದೋಷಪೂರಿತವಾಗಿದೆ. ಸರ್ಕಾರ ಈ ನಿರ್ಧಾರವನ್ನು ಸ್ವಯಂಪ್ರೇರಿತವಾಗಿ ಮಾಡಲು ಸಾಧ್ಯವಿಲ್ಲ. ಇದನ್ನು ಆರ್​​ಬಿಐ ಕೇಂದ್ರ ಮಂಡಳಿಯ ಶಿಫಾರಸಿನ ಮೇರೆಗೆ ಮಾತ್ರ ಮಾಡಬಹುದು. 2016 ರಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ ಹಿರಿಯ ನಾಯಕ ಪಿ.ಚಿದಂಬರಂ ಅವರು ಕೋರ್ಟ್​ನಲ್ಲಿ ವಾದ ಮಂಡಿಸಿದ್ದರು.

ಇನ್ನೊಂದೆಡೆ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಅಪನಗದೀಕರಣ ದೇಶದ ಆರ್ಥಿಕ ನೀತಿಯಾಗಿದ್ದು, ಇದರಲ್ಲಿ ಕೋರ್ಟ್​ ಮಧ್ಯಪ್ರವೇಶ ಮಾಡಬಾರದು. ಈಗಿನ ಯಾವುದೇ ನಿರ್ಧಾರ ವಾಪಸ್​ ಪಡೆಯುವ ಸ್ಥಿತಿಯಲ್ಲಿಲ್ಲ ಎಂದು ಒಡೆದ ಮೊಟ್ಟೆಯನ್ನು ಮರುಜೋಡಿಸುವ ಯತ್ನದ ಉದಾಹರಣೆ ನೀಡಿತ್ತು.

ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆಯನ್ನು ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ದೀರ್ಘಕಾಲ ಸಮಾಲೋಚನೆ ನಡೆಸಿಯೇ ಕೈಗೊಂಡ ನಿರ್ಧಾರವಾಗಿದೆ ಎಂದು ತಿಳಿಸಿತ್ತು.

ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಡಿ.7ರಂದು ಆರ್​ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ದಾಖಲೆಗಳನ್ನು ನೀಡುವಂತೆ ನಿರ್ದೇಶನ ನೀಡಿತ್ತು. ಈ ಸಂದರ್ಭದಲ್ಲಿ ಅರ್ಜಿಗಳ ಸಂಬಂಧ ಅಟರ್ನಿ ಜನರಲ್​ ಆರ್.ವೆಂಕಟರಮನಿ, ಆರ್​​ಬಿಐ ಸಮಾಲೋಚಕರು ಮತ್ತು ಅರ್ಜಿದಾರರ ವಕೀಲರೂ ಸೇರಿದಂತೆ ಹಿರಿಯ ನ್ಯಾಯವಾದಿಗಳಾದ ಪಿ.ಚಿದಂಬರಂ ಮತ್ತು ಶ್ಯಾಮ್​ ದಿವಾನ್​ ಅವರ ವಾದವನ್ನು ಕೋರ್ಟ್ ಆಲಿಸಿತ್ತು.

ಇದನ್ನೂ ಓದಿ: ಟಿಡಿಪಿ ಕಾರ್ಯಕ್ರಮದಲ್ಲಿ ಮತ್ತೊಂದು ದುರಂತ: ಕಾಲ್ತುಳಿತದಲ್ಲಿ ಮೂವರು ಮಹಿಳೆಯರ ಸಾವು

Last Updated : Jan 2, 2023, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.