ETV Bharat / bharat

ಪೆಗಾಸಸ್‌ ಗೂಢಚರ್ಯೆ: ಗುರುವಾರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರಿಂಕೋರ್ಟ್ - ಸುಪ್ರಿಂ ಕೋರ್ಟ್

ಕೇಂದ್ರ ಸರ್ಕಾರ ಪೆಗಾಸಸ್ ಸಾಫ್ಟ್​ವೇರ್​ ದುರ್ಬಳಕೆ ಮಾಡಿಕೊಂಡು ಹಲವರ ಮೇಲೆ ಗೂಢಚರ್ಯೆ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಗುರುವಾರ ನಡೆಯಲಿದೆ.

Supreme Court To Hear Petitions Demanding Probe Into Pegasus Row On Thursday
Pegasus ಸಾಫ್ಟವೇರ್ ದುರ್ಬಳಕೆ
author img

By

Published : Aug 1, 2021, 1:51 PM IST

ನವದೆಹಲಿ: ಇಸ್ರೇಲ್ ಮೂಲದ ಸ್ಪೈವೇರ್ ಸಾಫ್ಟ್​ವೇರ್ ಪೆಗಾಸಸ್ ಬಳಸಿಕೊಂಡು ಪ್ರತಿಪಕ್ಷ ನಾಯಕರು, ಪತ್ರಕರ್ತರು ಸೇರಿದಂತೆ ಪ್ರಮುಖ ವ್ಯಕ್ತಿಗಳ ಮೇಲೆ ಗೂಡಚರ್ಯೆ ನಡೆಸಲಾಗಿದೆ ಎನ್ನಲಾದ ಪ್ರಕರಣದ ವಿಶೇಷ ತನಿಖೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಒಟ್ಟಾಗಿ ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗೂಢಚರ್ಯೆ ನಡೆಸಲು ಪೆಗಾಸಸ್ ಸ್ಪೈವೇರ್​ಗೆ ಅನುಮತಿ ನೀಡಲಾಗಿದೆಯೇ ಎಂಬುವುದನ್ನು ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಹಿರಿಯ ಪತ್ರಕರ್ತರಾದ ಎನ್​. ರಾಮ್ ಮತ್ತು ಶಶಿ ಕುಮಾರ್,​ ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಮತ್ತು ವಕೀಲ ಎಂ.ಎಲ್ ಶರ್ಮಾ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Pegasus: ಸಾಫ್ಟ್​ವೇರ್​ ದುರ್ಬಳಕೆ ಆರೋಪದ ಬೆನ್ನಲ್ಲೆ ಕೆಲ ಬಳಕೆದಾರರ ನಿರ್ಬಂಧಿಸಿದ NSO: ವರದಿ

ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವ ಇಸ್ರೇಲ್ ಮೂಲದ ಎನ್​ಎಸ್​ಒ ಕಂಪನಿಯ ಪೆಗಾಸಸ್ ಸ್ಪೈವೇರ್ ಮೂಲಕ ಭಾರತದ 142 ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿ ಗೂಢಚರ್ಯೆ ನಡೆಸಿರುವ ಸಾಧ್ಯತೆಯ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ತನಿಖೆಯಲ್ಲಿ ಗೊತ್ತಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಇಬ್ಬರು ಕೇಂದ್ರ ಸಚಿವರು, ಮಾಜಿ ಚುನಾವಣಾ ಆಯುಕ್ತರು, 40 ಪತ್ರಕರ್ತರು ಗೂಢಚರ್ಯೆಗೆ ಒಳಗಾದವರಲ್ಲಿ ಸೇರಿರುವ ಸಾಧ್ಯತೆಗಳಿಗೆ. ಈ ಬಗ್ಗೆ ಸೋರಿಕೆಯಾದ ಮಾಹಿತಿಯಲ್ಲಿ ಗೊತ್ತಾಗಿದೆ.

ಅಮೆನೆಸ್ಟಿ ಸಂಸ್ಥೆಯ ಫೊರೆನ್ಸಿಕ್ ಲ್ಯಾಬ್​ನ ವಿಶ್ಲೆಷಣೆಯಲ್ಲಿ ಗೂಢಚರ್ಯೆಗೆ ಒಳಗಾಗಿದ್ದಾರೆ ಎನ್ನಲಾಗಿರುವ ವ್ಯಕ್ತಿಗಳ ಮೊಬೈಲ್ ಫೋನ್​ಗಳ ಭದ್ರತಾ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.