ETV Bharat / bharat

ಮರಣದಂಡನೆಗೆ 'ಕಡಿಮೆ ನೋವಿನ, ಹೆಚ್ಚು ಘನತೆಯ' ವಿಧಾನ ಪರಿಗಣಿಸಲು ಸೂಚಿಸಿದ ಸುಪ್ರೀಂ ಕೋರ್ಟ್​

ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್​ ಇಂದು ವಿಚಾರಣೆ ನಡೆಸಿತು.

Supreme Court
ಸುಪ್ರೀಂ ಕೋರ್ಟ್​
author img

By

Published : Mar 21, 2023, 8:19 PM IST

ನವದೆಹಲಿ: ಗಲ್ಲು ಶಿಕ್ಷೆಗೆ ಪರ್ಯಾಯ ಅಂದರೆ ಮರಣದಂಡನೆಗೆ ಕುತ್ತಿಗೆಗೆ ನೇಣು ಹಾಕುವ ಬದಲು ಕಡಿಮೆ ನೋವಿನ ವಿಧಾನವಿದೆಯೇ ಎಂದು ಪರಿಶೀಲಿಸಲು ಚರ್ಚೆಯನ್ನು ಪ್ರಾರಂಭಿಸಲು ಮತ್ತು ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರಕ್ಕೆ ಸೂಚಿಸಿದೆ. ಮರಣದಂಡನೆಗೆ ಒಳಗಾದ ಅಪರಾಧಿಗಳಿಗೆ ನೋವುರಹಿತ ಮರಣ ನೀಡುವಂತೆ ಕೋರಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮರಣದಂಡನೆಯನ್ನು ಹೊರತುಪಡಿಸಿ ಅಪರಾಧಿಗಳನ್ನು ಗಲ್ಲಿಗೇರಿಸುವ ಪರ್ಯಾಯ ವಿಧಾನಗಳನ್ನು ಅಂದರೆ ಹೆಚ್ಚು ಘನತೆ ಮತ್ತು ಕಡಿಮೆ ನೋವಿನಿಂದ ಕೂಡಿರುವ ಸಾವು ನೀಡುವಂತಹ ವಿಧಾನಗಳನ್ನು ಸೂಚಿಸುವ ದತ್ತಾಂಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದೆ.

ಅರ್ಜಿಯಲ್ಲಿನ ಕೋರಿಕೆಯನ್ನು ಪರಿಗಣಿಸಿದ ನ್ಯಾಯಾಲಯವು, ಇಂದಿನ ತಂತ್ರಜ್ಞಾನ ಮತ್ತು ವಿಜ್ಞಾನದ ಜ್ಞಾನದ ಆಧಾರದ ಮೇಲೆ ಮಾನವ ಘನತೆಗೆ ಅನುಗುಣವಾಗಿರುವ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಾದ ವಿಧಾನವಿದೆಯೇ ಎಂದು ಪ್ರಶ್ನಿಸಿತು. ಅದಕ್ಕೆ ಸಂಬಂಧಿಸಿದ ದತ್ತಾಂಶವನ್ನು ಒಮ್ಮೆ ನ್ಯಾಯಾಲಯದ ಮುಂದೆ ಇರಿಸಿದರೆ, ಆಗ ಒಂದು ಸಣ್ಣ ಆದೇಶವನ್ನು ರೂಪಿಸಬಹುದು. ಮರಣದಂಡನೆಯನ್ನು ಜಾರಿಗೊಳಿಸಲು ಸಾಮಾಜಿಕವಾಗಿ ಸ್ವೀಕಾರಾರ್ಹ ವಿಧಾನವನ್ನು ಪರಿಚಯಿಸಲು ತಜ್ಞರ ಸಮಿತಿಯನ್ನು ರಚಿಸಲು ಮುಕ್ತ ಅವಕಾಶವನ್ನು ನೀಡುತ್ತದೆ. ಬಹುಶಃ AIIMS ವೈದ್ಯರು, ವಿಜ್ಞಾನಿಗಳು, NLU ಪ್ರಾಧ್ಯಾಪಕರು ಇತ್ಯಾದಿಗಳನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಬಹುದು. ಆ ಸಮಿತಿ ಭಾರತದಲ್ಲಿ ಅಪರಾಧಿಗಳಿಗೆ ಹೆಚ್ಚು ಗೌರವಯುತ ಮರಣ ದೊರೆಯುವಂತಹ ವಿಧಾನಗಳನ್ನು ಆ ಸಮಿತಿ ಪರಿಶೀಲಿಸಬಹುದು ಎಂದು ಹೇಳಿದೆ.

'ನಾವು ನೇಣು ಹಾಕುವ ಮರಣದಂಡನೆಯನ್ನು ಮರುಪರಿಶೀಲಿಸಬೇಕಾದರೆ, ನಮಗೆ ಉತ್ತಮ ದತ್ತಾಂಶ ಬೇಕು. ನೇಣು ಹಾಕುವ ಮೂಲಕ ಮರಣದಂಡನೆ ಶಿಕ್ಷೆಯ ಪರಿಣಾಮ, ಉಂಟಾದ ನೋವು, ನಿಜವಾದ ಸಾವಿನ ಅವಧಿ ಮತ್ತು ವ್ಯಕ್ತಿಯನ್ನು ನೇಣು ಹಾಕಲು ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ನಾವು ತಿಳಿದುಕೊಳ್ಳಲು ಬಯಸುತ್ತೇವೆ' ಎಂದು ಕೋರ್ಟ್ ಹೇಳಿದೆ.

ಇಂದು ವಿಚಾರಣೆಯ ಸಂದರ್ಭದಲ್ಲಿ, ವಕೀಲ ರಿಷಿ ಮಲ್ಹೋತ್ರಾ ಅವರು, '2017ರ ಆದೇಶದ ಪ್ರಕಾರ, ಘನತೆಯಿಂದ ಮರಣ ಹೊಂದುವುದು ಮನುಷ್ಯನ ಮೂಲಭೂತ ಹಕ್ಕು. ಹಾಗಿರುವಾಗ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿದಾಗ ಅವನ ಘನತೆಗೆ ಧಕ್ಕೆಯಾಗುತ್ತದೆ. ಕೇಸ್​ನಲ್ಲಿನ ಸಣ್ಣ ದೋಷ ಮರಣದಂಡನೆ ಎಂಬ ಕ್ರೌರ್ಯಕ್ಕೆ ಕಾರಣವಾಗಬಹುದು. ಇದು ಅಮಾನವೀಯವಾಗಿದೆ ಎಂದು ಹಲವಾರು ದೇಶಗಳು ನೇಣು ಹಾಕುವ ವಿಧಾನವನ್ನೇ ಕೈಬಿಟ್ಟಿವೆ' ಎಂದು ಪೀಠದ ಮುಂದೆ ವಾದಿಸಿದ ಅವರು ಮರಣದಂಡನೆಯಲ್ಲಿ ಕ್ರೌರ್ಯ ಮತ್ತು ಚಿತ್ರಹಿಂಸೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನರಸಿಂಹ, 'ಘನತೆಯ ಪ್ರಶ್ನೆಯಲ್ಲ, ಕನಿಷ್ಠ ನೋವಿನ ವಿಚಾರವೂ ಅಲ್ಲ. ಮರಣದಂಡನೆಗೆ ವಿಜ್ಞಾನದಲ್ಲಿ ನೀಡಲು ಬೇರೆ ಏನಾದರೂ ವಿಧಾನ ಇದೆಯೇ ಎಂಬುದು ಪ್ರಶ್ನೆ. ಮಾರಕ ಚುಚ್ಚುಮದ್ದು (ಲೀಥಲ್​ ಇಂಜೆಕ್ಷನ್​) ನೀಡುವುದನ್ನು ಯುಎಸ್ಎ ತಿರಸ್ಕರಿಸಿದೆ' ಎಂದು ತಿಳಿಸಿದರು. ಸಿಜೆಐ ಚಂದ್ರಚೂಡ್ ಅವರು, 'ಅಮೆರಿಕದ ಕೆಲವು ನಿಯತಕಾಲಿಕೆಗಳ ಪ್ರಕಾರ, ಒಬ್ಬ ವ್ಯಕ್ತಿ ಮಾರಕ ಚುಚ್ಚುಮದ್ದು ನೀಡಿದಾಗಲೂ ನೋವಿನ ಜೊತೆ ಹೋರಾಡುತ್ತಾನೆ' ಎಂದು ಸ್ಪಷ್ಟಪಡಿಸಿದರು.

'ಮರಣದಂಡನೆಗೆ ನಿರ್ದಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಶಾಸಕಾಂಗವನ್ನು ಕೇಳಲು ಸಾಧ್ಯವಿಲ್ಲ. ಆದರೆ ಹೆಚ್ಚು ಮಾನವೀಯ ವಿಧಾನವನ್ನು ಖಂಡಿತವಾಗಿಯೂ ಸೂಚಿಸಬಹುದು' ಎಂದ ಸಿಜೆಐ ಮರಣದಲ್ಲಿ ಘನತೆಯನ್ನು ಹೊಂದಿರುವ ಮರಣದಂಡನೆಯ ವಿಧಾನವಿಲ್ಲ ಎಂದು ಅವರು ವಿಭಿನ್ನ ದೃಷ್ಟಿಕೋನವನ್ನು ಸಹ ಸೂಚಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಮೀಕ್ಷೆಗಳು ಮತ್ತು ಅಧ್ಯಯನಗಳನ್ನು ನಡೆಸುವ ಹೊರೆ ಒಕ್ಕೂಟದ ಮೇಲಿದೆ ಎಂದರು. ಈ ಪ್ರಕರಣದ ವಿಚಾರಣೆಯನ್ನು ಮೇ ಅಂತ್ಯಕ್ಕೆ ಮತ್ತೆ ಮುಂದೂಡಿತು.

ಇದನ್ನೂ ಓದಿ: ತಲೆ ಕಡಿದು ಮರಣದಂಡನೆ: 10 ದಿನದಲ್ಲಿ 12 ಆರೋಪಿಗಳಿಗೆ ಶಿಕ್ಷೆ ನೀಡಿದ ಸೌದಿ ಅರೇಬಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.