ETV Bharat / bharat

ಸೆಂಟ್ರಲ್​ ವಿಸ್ಟಾ ವಿರುದ್ಧ ಸಲ್ಲಿಕೆ ಆಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ - ಹೊಸ ಸಂಸತ್​ ಕಟ್ಟಡದ ನಿರ್ಮಾಣ

ದೆಹಲಿ ಹೈಕೋರ್ಟ್ ಈಗಾಗಲೇ ಈ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಸಂಸತ್​ ಪುನರಾಭಿವೃದ್ಧಿ ಯೋಜನೆ(ಸೆಂಟ್ರಲ್ ವಿಸ್ಟಾ ) ಸಂಬಂಧ ಹಸ್ತಕ್ಷೇಪ ಮಾಡಲು ತಾವು ಸಿದ್ದ ಇಲ್ಲ ಎಂದು ಅರ್ಜಿಯನ್ನ ಸುಪ್ರೀಂಕೋರ್ಟ್​ ತಳ್ಳಿ ಹಾಕಿದೆ. ಆದರೆ, ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ಅವರ ನ್ಯಾಯಪೀಠವು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರ ಪ್ರಸ್ತಾಪಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿದೆ.

ಸೆಂಟ್ರಲ್​ ವಿಸ್ಟಾ ವಿರುದ್ಧ ಸಲ್ಲಿಕೆ ಆಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

author img

By

Published : May 7, 2021, 10:23 PM IST

Updated : May 7, 2021, 11:48 PM IST

ನವದೆಹಲಿ: ದೇಶ ಕೋವಿಡ್​​ ಸಂದರ್ಭದಲ್ಲಿ ಭಾರಿ ಸಂಕಷ್ಟ ಎದುರಿಸುತ್ತಿದೆ. ಜನರು ಮನೆ ಬಿಟ್ಟು ಹೊರ ಬಾರದ ಪರಿಸ್ಥಿತಿ ಇದೆ. ಈ ನಡುವೆ ಕೇಂದ್ರ ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದ್ದು, ವಿಸ್ತಾ ಅವೆನ್ಯೂ ಹೊಸ ಸಂಸತ್​ ಭವನ ನಿರ್ಮಾಣಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ ಅದರ ಕಾಮಗಾರಿಯನ್ನ ಮುಂದುವರಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಹೊಸ ಸಂಸತ್​ ಕಟ್ಟಡದ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆಯನ್ನು ಮುಂದೂಡಿಕೆ ಆಗಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.

ಹೈಕೋರ್ಟ್​ನಲ್ಲಿ ವಿಷಯ ಪ್ರಸ್ತಾಪಿಸಿ

ದೆಹಲಿ ಹೈಕೋರ್ಟ್ ಈಗಾಗಲೇ ಈ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಸಂಸತ್​​ ಪುನರಾಭಿವೃದ್ಧಿ ಯೋಜನೆ( ಸೆಂಟ್ರಲ್​ ವಿಸ್ಟಾ) ಸಂಬಂಧ ಹಸ್ತಕ್ಷೇಪ ಮಾಡಲು ತಾವು ಸಿದ್ದ ಇಲ್ಲ ಎಂದು ಅರ್ಜಿಯನ್ನ ಸುಪ್ರೀಂಕೋರ್ಟ್​ ತಳ್ಳಿ ಹಾಕಿದೆ. ಆದರೆ, ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ಅವರ ನ್ಯಾಯಪೀಠವು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರ ಪ್ರಸ್ತಾಪಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿದೆ.

ಅರ್ಜಿದಾರರ ಮನವಿಯನ್ನ ಪರಿಗನೆಗೆ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಹೈಕೋರ್ಟ್‌ಗೆ ಸೂಚಿಸಿದೆ. "ಈ ವಿಷಯವು ಹೈಕೋರ್ಟ್‌ನ ಮುಂದೆ ಬಾಕಿ ಇರುವುದರಿಂದ ಮತ್ತು ಮೇಲ್ಮನವಿ ಮುಂದೂಡುವ ಆದೇಶಕ್ಕೆ ವಿರುದ್ಧವಾಗಿರುವುದರಿಂದ, ನಾವು ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಲು ಒಲವು ತೋರುತ್ತಿಲ್ಲ. ನಿರ್ದಿಷ್ಟ ಸನ್ನಿವೇಶದಲ್ಲಿ, ನಾವು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮನವಿ ಮಾಡಲು ಹಾಗೂ ಈ ವಿಷಯವನ್ನು ಸಾಧ್ಯವಾದಷ್ಟು ತುರ್ತಾಗಿ ನಿರ್ಧಾರ ತೆಗೆದುಕೊಳ್ಳಲು ದೆಹಲಿ ಹೈಕೋರ್ಟ್ ಮುಂದೆ ಮನವಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತು.

ಏನಿದು ಅರ್ಜಿ?

ವಿಚಾರಣೆ ಆರಂಭದಲ್ಲಿ ಹೈಕೋರ್ಟ್​​ ನೀವು ಎತ್ತಿರುವ ವಿಚಾರವನ್ನು ಪರಿಗಣಿಸುತ್ತದೆ ಎಂಬುದಾಗಿ ನಾವು ಭಾವಿಸಿದ್ದೇವೆ ಎಂದು ನ್ಯಾಯಪೀಠ ಹೇಳಿತು. ರಾಷ್ಟ್ರ ರಾಜಧಾನಿಯಲ್ಲಿನ COVID-19 ಉಲ್ಬಣ ಮತ್ತು ಅದರ ಪರಿಣಾಮವಾಗಿ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೆ ಉಂಟಾಗುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿಯ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

"ನಾವು ತೀರಾ ಗಂಭೀರವಾದ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಈ ಯೋಜನೆಯನ್ನು 4 ರಿಂದ 6 ವಾರಗಳವರೆಗೆ ಮುಂದೂಡಿದರೆ ಏನೂ ಆಗುವುದಿಲ್ಲ. ಕೋವಿಡ್​ ಹಿನ್ನೆಲೆಯಲ್ಲಿ ಈಗಾಗಲೇ ಐಪಿಎಲ್ ಅನ್ನು ಅಮಾನತುಗೊಳಿಸಲಾಗಿದೆ. ಕೋವಿಡ್​ ಹರಡುವಿಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಿದ್ದಾರ್ಥ್ ಲುತ್ರಾ ವಿಶೇಷ ಮನವಿ ಮಾಡಿಕೊಂಡಿದ್ದರು.

ಕೇಂದ್ರದ ಪರ ವಕೀಲರು ಹೇಳಿದ್ದೇನು?

ಇನ್ನು ಕೇಂದ್ರ ಸರ್ಕಾರದ ಪರ ವಿಚಾರಣೆಗೆ ಹಾಜರಾದ ಸಾಲಿಸಿಟರ್ ಜನರಲ್​ ತುಷಾರ್​ ಮೆಹ್ತಾ, ಅರ್ಜಿದಾರರು ಪಿಐಎಲ್ ಮೂಲಕ ನ್ಯಾಯಾಲಯಕ್ಕೆ ಬರುವುದು ಮತ್ತು ಹೈಕೋರ್ಟ್‌ನ ವಿಚಾರಣೆ ಮುಂದೂಡಿರುವ ಆದೇಶದ ವಿರುದ್ಧ ವಿಶೇಷ ರಜೆ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸುವುದು ಗಂಭೀರ ಅನುಮಾನವನ್ನು ಹುಟ್ಟುಹಾಕುತ್ತಿದೆ ಎಂದು ವಾದ ಮಂಡಿಸಿದರು. ವಿಚಾರಣೆ ಮುಂದೂಡಿರುವ ಬಗ್ಗೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ತುಷಾರ್ ಮೆಹ್ತಾ ಹೇಳಿದರು.

ಕೇಂದ್ರ ಸರ್ಕಾರ ಸೆಂಟ್ರಲ್​ ವಿಸ್ಟಾ ಭವನವನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ. ನವದೆಹಲಿಯ ಲೂಥಿಯೇನ್ಸ್​​​​​​​​​​ ಏರಿಯಾವನ್ನು ಅಭಿವೃದ್ಧಿಗೊಳಿಸಲು ಅಂದಾಜು 15 ಸಾವಿರ ಕೋಟಿ ರೂ ಯೋಜನೆ ರೂಪಿಸಿದೆ. ಈ ಕಟ್ಟಡ ಸಂಕೀರ್ಣದಲ್ಲಿ ಪ್ರಧಾನಿ ನಿವಾಸ, ಉಪ ರಾಷ್ಟ್ರಪತಿ ಹಾಗೂ ಇತರ ಪ್ರಮುಖ ಸಚಿವಾಲಯಗಳು ಇರಲಿವೆ. ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ಜನವರಿ 5 ರಂದು ಸೆಂಟ್ರಲ್​ ವಿಸ್ಟಾ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.

Last Updated : May 7, 2021, 11:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.