ETV Bharat / bharat

ಜಡ್ಜ್​ಗೆ ಅನಾರೋಗ್ಯ: ಸುಪ್ರೀಂನ ಹೊಸ ಪೀಠಕ್ಕೆ ಹಿಜಾಬ್​ ಅರ್ಜಿ ವಿಚಾರಣೆ

author img

By

Published : Aug 2, 2022, 1:21 PM IST

Updated : Aug 2, 2022, 1:34 PM IST

ಕರ್ನಾಟಕ ಹಿಜಾಬ್​ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಹೊಸ ಪೀಠಕ್ಕೆ ನೀಡಲಾಗುವುದು ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

supreme-court-on-hijab
ಸುಪ್ರೀಂನ ಹೊಸ ಪೀಠಕ್ಕೆ ಹಿಜಾಬ್​ ಅರ್ಜಿ ವಿಚಾರಣೆ

ನವದೆಹಲಿ: ಶಾಲಾ- ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್​ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವಿಳಂಬವಾಗುತ್ತಿರುವ ಕಾರಣ ಈಗಿನ ಪೀಠದ ಬದಲಾಗಿ ಮತ್ತೊಂದು ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಲಾಗುವುದು ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಹಿಜಾಬ್​ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಪೀಠದ ಜಡ್ಜ್​ಗಳಲ್ಲಿ ಒಬ್ಬರು ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ ಹೊಸ ಪೀಠವನ್ನು ರಚಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಮಂಗಳವಾರ ತಿಳಿಸಿದರು.

ಅರ್ಜಿಗಳನ್ನು ಕೈಗೆತ್ತಿಕೊಳ್ಳಲು ದಿನಾಂಕ ನಿಗದಿ ಮಾಡುವ ವಿಷಯವಾಗಿ ನಡೆದ ಚರ್ಚೆಯಲ್ಲಿ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ಹಿಜಾಬ್​ ಅರ್ಜಿಯನ್ನು ಪ್ರಸ್ತಾಪಿಸಿದರು. ಈ ವೇಳೆ ಸೂಚಿತ ಕೋರ್ಟ್​ ಪೀಠದ ಒಬ್ಬ ಜಡ್ಜ್​ ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ ಅರ್ಜಿಯನ್ನು ಅದೇ ಪೀಠದಿಂದ ವಿಚಾರಣೆ ನಡೆಸುವುದು ಕಷ್ಟ. ಹೊಸ ಪೀಠಕ್ಕೆ ನೀಡಲು ಯೋಜಿಸಲಾಗುವುದು ಎಂದು ಸಿಜೆಐ ತಿಳಿಸಿದರು. ಹಿಜಾಬ್​ ಅರ್ಜಿಯ ವಿಚಾರಣೆಯನ್ನು ಜುಲೈನಲ್ಲಿ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಈ ಹಿಂದೆ ತಿಳಿಸಿದ್ದರು.

ಪ್ರಕರಣವೇನು?: ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಅಧಿಕಾರ ನೀಡುವ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು.

ಈ ಮೂಲಕ ಆಯಾ ಶಾಲಾ ಸಂಸ್ಥೆಗಳಲ್ಲಿ ಹಿಜಾಬ್​ ಬೇಕೇ ಬೇಡವೇ ಎಂಬ ನಿರ್ಧಾರವನ್ನು ಅಭಿವೃದ್ಧಿ ಸಮಿತಿಗಳೇ ನಿರ್ಧರಿಸಬಹುದು ಎಂದು ತೀರ್ಪು ನೀಡಿತ್ತು. ಇದು ಮುಸ್ಲಿಂ ಸಮುದಾಯದ ವಿರುದ್ಧದ ತೀರ್ಪು ಎಂದು ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಅಲ್ಲದೇ ಕೋರ್ಟ್​ ತೀರ್ಪಿನ ವಿರುದ್ಧವೇ ಮುಸ್ಲಿಂ ಸಮುದಾಯ ಪ್ರತಿಭಟಿಸಿತ್ತು.

ಓದಿ: ಚುನಾವಣಾ ಸುಧಾರಣೆಗೆ ಚಾಲನೆ: ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ

Last Updated : Aug 2, 2022, 1:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.