ETV Bharat / bharat

ಸೂಪರ್​ ಸ್ಟಾರ್​​ ರಜಿನಿಕಾಂತ್ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು - ಚೆನ್ನೈನ ಕಾವೇರಿ ಆಸ್ಪತ್ರೆಗೆ ರಜನಿಕಾಂತ್ ದಾಖಲು

ಬಹುಭಾಷಾ ನಟ ಸೂಪರ್​ ಸ್ಟಾರ್​ ರಜಿನಿಕಾಂತ್ ಅವರನ್ನು​ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

chennai
ಸೂಪರ್​ ಸ್ಟಾರ್​​ ರಜನಿಕಾಂತ್ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು
author img

By

Published : Oct 28, 2021, 10:29 PM IST

ಚೆನ್ನೈ(ತಮಿಳುನಾಡು): ನಟ ರಜನಿಕಾಂತ್ ಅವರನ್ನು ಗುರುವಾರ ಸಾಮಾನ್ಯ ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಮಿತವಾದ ಹೆಲ್ತ್​ ಚೆಕ್​ಅಪ್​ಗಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿದ್ದಾರೆ ಎಂದು ರಜಿನಿಕಾಂತ್ ಅವರ​ ಪ್ರಚಾರಕ ರಿಯಾಜ್ ಕೆ ಅಹ್ಮದ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.

2020ರಲ್ಲಿ, ರಜಿನಿಕಾಂತ್​ಗೆ ಅನಾರೋಗ್ಯ ಉಂಟಾಗಿ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಕೆಲವು ದಿನಗಳ ನಂತರ, ಅವರು 2021ರಲ್ಲಿ ತಮಿಳುನಾಡಿನಲ್ಲಿ ಅಸೆಂಬ್ಲಿ ಚುನಾವಣೆಯ ಮೊದಲು ಪ್ರಾರಂಭಿಸಲು ಯೋಜಿಸಿದ್ದ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಿಲ್ಲ ಎಂದು ಘೋಷಿಸಿದ್ದರು.

ಕೆಲವು ದಿನಗಳ ಹಿಂದಷ್ಟೇ ರಜಿನಿಕಾಂತ್(70)​ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ್ದ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ:'ತಲೈವಾ' ಮುಡಿಗೆ ದಾದಾ ಸಾಹೇಬ್ ಫಾಲ್ಕೆ: ರಜಿನಿ ಸಾಧನೆಯ ಹಾದಿ ಬಿಚ್ಚಿಟ್ಟ ಗೆಳೆಯ ರಾಜ್ ಬಹದ್ದೂರ್..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.