ETV Bharat / bharat

ರಜಪೂತ ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ: ಇಬ್ಬರು ಆರೋಪಿಗಳ ಪೈಕಿ ಓರ್ವ ಸೇನಾ ಸಿಬ್ಬಂದಿ - SIT

Army man involved in Sukhdev Singh Gogamedi Murder Case: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖ್​ದೇವ್​ ಸಿಂಗ್​ ಗೋಗಾಮೇಡಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಗುರುತಿಸಿದ್ದಾರೆ.

Sukhdev Singh Gogamedi murder case: Both assailants identified; one is an Army man
ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಗೋಗಾಮೇಡಿ ಹತ್ಯೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಭಾಗಿ
author img

By ETV Bharat Karnataka Team

Published : Dec 6, 2023, 3:57 PM IST

ಜೈಪುರ(ರಾಜಸ್ಥಾನ): ಜೈಪುರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖ್​ದೇವ್​ ಸಿಂಗ್​ ಗೋಗಾಮೇಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪೈಕಿ ಓರ್ವ ಆರೋಪಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಜೈಪುರದ ಶ್ಯಾಮ್ ನಗರ ಪ್ರದೇಶದಲ್ಲಿ ಸುಖ್​ದೇವ್​ ಸಿಂಗ್​ ಗೋಗಾಮೇಡಿ ಅವರ ಮನೆಯಲ್ಲೇ ಹಂತಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರ ಆಧಾರದ ಮೇಲೆ ಪೊಲೀಸರು, ಈ ಶೂಟರ್​ಗಳನ್ನು ರೋಹಿತ್​ ರಾಥೋರ್​​ ಹಾಗೂ ನಿತೀಶ್​ ಫೌಜ್ದಾರ್​ ಗುರುತಿಸಿದ್ದಾರೆ. ಮೂರನೇ ಶೂಟರ್ ನವೀನ್​ ಎಂಬಾತ​ ನಿನ್ನೆಯೇ ಗೋಗಾಮೇಡಿ ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿ ದಾಳಿಯಲ್ಲಿ ಹತನಾಗಿದ್ದಾನೆ.

ಹರಿಯಾಣ ಮೂಲದ ನಿತೀಶ್​ ಕಳೆದ ನಾಲ್ಕು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನವೆಂಬರ್​ ತಿಂಗಳಲ್ಲಿ ರಜೆ ಮೇಲೆ ಮನೆಗೆ ಬಂದಿದ್ದ. ಈತ ರಾಜಸ್ಥಾನದ ಮೂಲದ ಯುವತಿಯನ್ನು ಮದುವೆಯಾಗಿದ್ದಾನೆ. ಜೋತ್ವಾರಾದಲ್ಲಿ ಈತನ ಬಟ್ಟೆ ಅಂಗಡಿ ಇದೆ. ಮತ್ತೊಬ್ಬ ಶೂಟರ್​ ರೋಹಿತ್​ ನಗೌರ್ ನಿವಾಸಿ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಂಗಳವಾರ ಈ ಮೂವರು ಹಂತಕರು ಸುಖ್​ದೇವ್​ ಸಿಂಗ್​ ಗೋಗಾಮೇಡಿ ಅವರೊಂದಿಗೆ ಮಾತನಾಡುವ ನೆಪದಲ್ಲಿ ಮನೆಗೆ ಹೋಗಿದ್ದರು. 10 ನಿಮಿಷಗಳ ಮನೆಯಲ್ಲೇ ಮಾತುಕತೆ ನಡೆಸಿದ ಏಕಾಏಕಿ ಗುಂಡಿನ ಮಳೆ ಸುರಿದ್ದರು. ಇದರಿಂದ ನಾಲ್ಕು ಗುಂಡುಗಳು ಗೋಗಾಮೇಡಿ ಅವರ ದೇಹಕ್ಕೆ ಹೊಕ್ಕಿದ್ದವು.

  • #DGP उमेश मिश्रा ने गोगामेड़ी हत्याकांड की सघन जांच के लिए SIT गठित की । #ADG क्राइम दिनेश एमएन के पर्यवेक्षण में की गई एसआईटी गठित।

    गोगामेड़ी हत्याकांड के दोनों अभियुक्तों की हुई पहचान।

    डीजीपी ने बताया कि पुलिस कर रही है तत्परता से हत्यारों की तलाश।#RajasthanPolice

    — Rajasthan Police (@PoliceRajasthan) December 6, 2023 " class="align-text-top noRightClick twitterSection" data=" ">

ಎಸ್​ಐಟಿ ರಚನೆ-ಡಿಜಿಪಿ: ಪ್ರಕರಣದ ತ್ವರಿತ ತನಿಖೆಗೆ ರಾಜಸ್ಥಾನ ಪೊಲೀಸ್​ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರು ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿ ಆದೇಶಿಸಿದ್ದಾರೆ. ಅಪರಾಧ ವಿಭಾಗದ ಎಡಿಜಿ ದಿನೇಶ್ ಎಂ.ಎನ್. ನೇತೃತ್ವದಲ್ಲಿ ಎಸ್​ಐಟಿ ರಚಿಸಲಾಗಿದೆ. ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಇವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ ಎಂಬುದಾಗಿ ರಾಜಸ್ಥಾನ ಪೊಲೀಸ್​ ಇಲಾಖೆಯು ಸಾಮಾಜಿಕ ಜಾಲತಾಣ 'ಎಕ್ಸ್​​' ಪೋಸ್ಟ್​ ಮಾಡಿದೆ.

ಗೋಗಾಮೇಡಿ ಬೆಂಬಲಿಗರ ಪ್ರತಿಭಟನೆ: ಸುಖ್​ದೇವ್​ ಸಿಂಗ್​ ಗೋಗಾಮೇಡಿ ಹತ್ಯೆ ಖಂಡಿಸಿ ರಾಜಸ್ಥಾನದಲ್ಲಿ ಪ್ರತಿಭಟನೆಗಳು ಶುರುವಾಗಿವೆ. ಮಂಗಳವಾರ ಜೈಪುರದ ಹಲವೆಡೆ ಬೆಂಬಲಿಗರು ಪ್ರತಿಭಟನೆಗಳನ್ನು ನಡೆಸಿದ್ದರು. ಇಂದು ಉದಯಪುರದಲ್ಲಿ ಸಾವಿರಾರು ಬೆಂಬಲಿಗರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾವಣೆಗೊಂಡು ಪ್ರತಿಭಟನೆ ಕೈಗೊಂಡರು. ರಜಪೂತ ಸಮುದಾಯ ಕೂಡ ಗೋಗಾಮೇಡಿ ಕೊಲೆಯನ್ನು ತೀವ್ರವಾಗಿ ಖಂಡಿಸಿದೆ.

ಹತ್ಯೆ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್‌: ಗೋಗಾಮೇಡಿ ಹತ್ಯೆಯ ಹೊಣೆಯನ್ನು ಈಗಾಗಲೇ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊಬ್ಬ ಗ್ಯಾಂಗ್​ಸ್ಟರ್​ ರೋಹಿತ್ ಗೋಡಾರಾ ಹೊತ್ತುಕೊಂಡಿದ್ದಾನೆ. ಗ್ಯಾಂಗ್​ಸ್ಟರ್​ಗಳಾದ ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಾಯಕನಾದ ಗೋಡಾರಾ, ತಮ್ಮ ಪ್ರತಿಸ್ಪರ್ಧಿ ಗುಂಪುಗಳಿಗೆ ಸಹಾಯ ಮಾಡುತ್ತಿದ್ದರಿಂದ ಗೋಗಾಮೇಡಿಯನ್ನು ನಮ್ಮ ಕಡೆಯವರು ಕೊಲೆ ಮಾಡಿದ್ದಾರೆ ಎಂದು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾನೆ.

ಇದನ್ನೂ ಓದಿ: ರಜಪೂತ​ ಕರ್ಣಿ ಸೇನಾ ಮುಖ್ಯಸ್ಥನಿಗೆ ಗುಂಡಿಕ್ಕಿ ಹತ್ಯೆ, ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.