ಅಮೃತಸರ : ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಕಾಂಗ್ರೆಸ್, ಅಕಾಲಿದಳ ನಾಯಕರ ನಡುವಿನ ಕಿತ್ತಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಒಬ್ಬರ ಮೇಲೊಬ್ಬರ ಆರೋಪ, ಪ್ರತ್ಯಾರೋಪಗಳು ಮುಂದುವರೆಯುತ್ತಲೇ ಇವೆ.
ಮಾಜಿ ಡಿಜಿಪಿ ಸುಮೇಧ್ ಸೈನಿ ಅವರನ್ನು ನಾನು ಭೇಟಿ ಮಾಡಿದ್ದೇನೆ ಎಂದು ಆರೋಪಿಸಿರುವ ಅಕಾಲಿದಳ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಇದನ್ನು ಸಾಬೀತುಪಡಿಸಿದರೆ, ರಾಜಕೀಯ ತ್ಯಜಿಸುವುದಾಗಿ ಪಿಪಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸವಾಲು ಹಾಕಿದ್ದಾರೆ.
ಸುಖ್ಬೀರ್ ಸಿಂಗ್ ಬಾದಲ್‌ಗೆ ಕ್ಲೀನ್ ಚಿಟ್ ನೀಡಿದ್ದ ಡಿಜಿಪಿಯವರನ್ನು ನಾನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಸಿಧು ತಿರುಗೇಟು ನೀಡಿದ್ದಾರೆ. ತಮ್ಮ ಆಪ್ತರ ಮೇಲೆ ಇಡಿ ದಾಳಿ ನಡೆಸಿದ್ದರಿಂದ ಸುಖ್ಭೀರ್ ಸಿಟ್ಟಿಗೆದ್ದಿದ್ದಾರೆ. ಅವರು ಭ್ರಷ್ಟಾಚಾರದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್, ಅಕಾಲಿದಳ ನಾಯಕರ ಕಿತ್ತಾಟದ ಬೆನ್ನಲ್ಲೇ ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಕೈ ನಾಯಕರ ವಿರುದ್ಧ ಸಿಡಿದಿದ್ದಾರೆ. ಕಾಂಗ್ರೆಸ್ ನಾಯಕರು ಪಂಜಾಬ್‌ನಲ್ಲಿ ಒಬ್ಬರಿಗೊಬ್ಬರು ಶಾಪ ಹಾಕಿಕೊಂಡು ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನ. 29ರಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸದಿರಲು ಕಿಸಾನ್ ಯೂನಿಯನ್ ನಿರ್ಧಾರ.. ಕೇಂದ್ರಕ್ಕೆ ಡಿ.4ರ ಗಡುವು