ಲುಧಿಯಾನ(ಪಂಜಾಬ್): ಟಿಬ್ಬಾ ರಸ್ತೆಯ ಮಕ್ಕರ್ ಕಾಲೋನಿ ಬಳಿಯ ಕಸದ ರಾಶಿಯ ಬಳಿಯಿರುವ ಕೊಳಗೇರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ ಒಂದೇ ಕುಟುಂಬದ ಏಳು ಮಂದಿ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಮೃತರನ್ನು ಸುರೇಶ್ ಸಾಹ್ನಿ (55), ಅವರ ಪತ್ನಿ ಅರುಣಾ ದೇವಿ (52), ಮಕ್ಕಳಾದ ರಾಖಿ (15), ಮನಿಶಾ (10), ಗೀತಾ (8), ಚಂದ (5) ಮತ್ತು 2 ವರ್ಷದ ಮಗ ಸನ್ನಿ ಎಂದು ಗುರುತಿಸಲಾಗಿದೆ.
ಹಿರಿಯ ಮಗ ರಾಜೇಶ್ ವಾಲ್ವಾಲ್ ಸುರೇಶ್ ಸ್ನೇಹಿತನ ಮನೆಗೆ ಮಲಗಲು ಹೋಗಿದ್ದರಿಂದ ಘಟನೆಯಲ್ಲಿ ಬದುಕುಳಿದಿದ್ದಾರೆ. ಕಳೆದ ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಕಟುಂಬವಿದ್ದ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಪರಿಣಾಮ ನಿದ್ದೆಯಲ್ಲಿ ಮಲಗಿದ್ದ ಏಳು ಜನರು ಮನೆಯಿಂದ ಹೊರ ಬರಲಾಗದೇ ಸುಟ್ಟು ಕರಕಲಾಗಿದ್ದಾರೆ.ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ನಗರ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.