ಆಂಧ್ರಪ್ರದೇಶ: ಖುಷಿಯ ಕ್ಷಣಗಳನ್ನು ಕಳೆಯಲಿ ಎಂದು ಶಿಕ್ಷಕರು ಮಕ್ಕಳನ್ನು ವಿಹಾರಕ್ಕೆ ಕರೆದುಕೊಂಡು ಹೋದರೆ ಅದು ದುರಂತದಲ್ಲಿ ಕೊನೆಯಾಗಿದೆ. ವಿಹಾರಕ್ಕೆ ಹೋಗಿದ್ದ ವೇಳೆ ನದಿಗೆ ಇಳಿದಿದ್ದ ಮೂವರು ವಿದ್ಯಾರ್ಥಿನಿಯರು ನೀರು ಪಾಲಾದ ದುರ್ಘಟನೆ ಇಂದು ನಡೆದಿದೆ.
ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೇಟಪಾಲೆಂನ ಖಾಸಗಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಕಿಲೇರು ನದಿಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ, ಮಕ್ಕಳು ನೀರಿನಲ್ಲಿ ಆಟವಾಡಿದ್ದಾರೆ. ಅದರಲ್ಲಿ ಮೂವರು ವಿದ್ಯಾರ್ಥಿನಿಯರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಮಕ್ಕಳು ಕಣ್ಣೆದುರಿಗೆ ನದಿ ನೀರಿಗೆ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಶಿಕ್ಷಕರು ಅಲ್ಲಿಯೇ ಇದ್ದ ರಕ್ಷಣಾ ವಿಭಾಗಕ್ಕೆ ತಿಳಿಸಿದ್ದಾರೆ. ಆದರೆ, ಮಕ್ಕಳು ಅದಾಗಲೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳ ಶವವನ್ನು ಪತ್ತೆ ಮಾಡಲಾಗಿದೆ. ಇನ್ನೊಂದು ಹುಡುಗಿಯ ದೇಹ ಸಿಕ್ಕಿಲ್ಲ. ಹುಡುಕಾಟ ಮುಂದುವರಿದಿದೆ.
ಈ ದುರ್ಘಟನೆ ಮಾಧ್ಯಮಗಳಲ್ಲಿ ಭಿತ್ತರವಾಗಿದ್ದನ್ನು ಕಂಡ ಅವರ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಘಟನೆ ನಡೆದರೂ ಮಾಹಿತಿ ನೀಡದ ಶಾಲೆಯ ವಿರುದ್ಧ ದುಃಖತಪ್ತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಬಹಿರ್ದೆಸೆಗೆ ತೆರಳಿ ಹಳಿ ಮೇಲೆ ಹೆಡ್‌ಫೋನ್ ಹಾಕಿಕೊಂಡ ಕುಳಿತ ಯುವಕ: ರೈಲು ಗುದ್ದಿ ಸಾವು